ಬೆಳಗಾವಿ- ರಾಜ್ಯದಲ್ಲಿ ಈಗ ಪಠ್ಯ ಪರಿಷ್ಕರಣೆಯ ಪರ,ಮತ್ತು ವಿರೋಧ ಬಿರುಗಾಳಿ ಬೀಸುತ್ತಿದೆ.ಪಠ್ಯ ಪರಿಷ್ಕರಣೆ ಸಮೀತಿಯ ಕೆಲವು ಸದಸ್ಯರು ರಾಜೀನಾಮೆ ನೀಡುವ ಅಭಿಯಾನ ಆರಂಭಿಸಿದ್ದು,ಅವರ ರಾಜೀನಾಮೆ ಮಂಜೂರು ಮಾಡಿ,ಎನ್ನುವ ಅಭಿಯಾನವನ್ನು ಬಿಜೆಪಿ ನಡೆಸುತ್ತಿದೆ.
ಬೆಳಗಾವಿ ಜಿಲ್ಲೆಯ ಖಾನಾಪೂರ ಕ್ಷೇತ್ರದಲ್ಲಿ ವಿವಿಧ ಸಾಮಾಜಿಕ ಕಾರ್ಯಗಳನ್ನು ಮಾಡುವ ಮೂಲಕ ಈ ಕ್ಷೇತ್ರದ ರಾಜಕೀಯ ನಾಯಕರಿಗೆ ನಡುಕ ಹುಟ್ಟಿಸಿರುವ ಬಿಜೆಪಿ ನಾಯಕಿ ಡಾ. ಸೋನಾಲಿ ಸರ್ನೋಬತ್ ಈಗ ರಾಜ್ಯ ಬಿಜೆಪಿ ನಾಯಕರ ಗಮನ ಸೆಳೆಯುತ್ತಿದ್ದಾರೆ.
ಖಾನಾಪೂರ ಕ್ಷೇತ್ರದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಗಳಿಗೆ ಎಲ್ಲ ರೀತಿಯ ಸಹಾಯ ಸಹಾರ ನೀಡಿ,ಎಲ್ಲ ಸಮಾಜಗಳ ಮೆಚ್ಚುಗೆ ಗಳಿಸಿರುವ ಅಪ್ರತಿಮ ಸಮಾಜ ಸೇವಕಿ ಡಾ. ಸೋನಾಲಿ ಸರ್ನೋಬತ್ ಅವರು ಕಾಂಗ್ರೆಸ್ ವಿರುದ್ಧ ಗಂಭೀರ. ಆರೋಪ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ರಾಜ್ಯದಲ್ಲಿರುವ ವಿವಿಧ ಸಮಾಜಗಳ ಹಿತ ಕಾಯುವಲ್ಲಿ ವಿಫಲವಾಗಿರು ಕಾಂಗ್ರೆಸ್ ಪಠ್ಯಕ್ರಮ ಪರಿಷ್ಕರಣೆ ವಿಚಾರದಲ್ಲಿ ಬುದ್ದಿ ಜೀವಿಗಳನ್ನು,ಸಾಹಿತಿಗಳನ್ನು ಮುಂದಿಟ್ಟುಕೊಂಡು ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿರುವ ಕಾಂಗ್ರೆಸ್ ನಾಯಕರು ಸಮಾಜಗಳನ್ನು ಒಡೆದು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ,ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದೆ.ಎಂದು ಡಾ.ಸೋನಾಲಿ ಆರೋಪಿಸಿದ್ದಾರೆ.
ಕಳೆದ ಮೂರು ವರ್ಷಗಳಿಂದ ಖಾನಾಪೂರ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ಆರಂಭಿಸಿರುವ ಡಾ.ಸೋನಾಲಿ, ಖಾನಾಪೂರ ಕ್ಷೇತ್ರದ ಹಲವಾರು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕಾರ್ಯ ಮಾಡಿದ್ದಾರೆ,ಈಗ ರಾಜಕೀಯವಾಗಿ ಕಾಂಗ್ರೆಸ್ ನಾಯಕರಿಗೆ ಪ್ರತ್ಯುತ್ತರ ನೀಡುವ ಮೂಲಕ ಪಕ್ಷದ ನಿಲುಗಳನ್ನು ಸಮರ್ಥಿಸಿ,ಕಾಂಗ್ರೆಸ್ ನಾಯಕರ ಟೀಕೆಗಳಿಗೆ ತಕ್ಕ ಉತ್ತರ ನೀಡುತ್ತಿರುವ ಡಾ.ಸೋನಾಲಿ 2023 ರ ವಿಧಾನಸಭಾ ಚುನಾವಣೆಯ ಖಾನಾಪೂರ ಕ್ಷೇತ್ರದ ಬಿಜೆಪಿಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ.