ಬೆಳಗಾವಿ-ಬೆಳಗಾವಿ ನಗರದ ಹೃದಯ ಭಾಗದಲ್ಲಿ ಭೀಫ್ ಮಾರ್ಕೆಟ್ ಇದ್ದು ಇದನ್ನು ಕೂಡಲೇ ನಗರ ಹೊರ ವಲಯದಲ್ಲಿ ಸ್ಥಳಾಂತರ ಮಾಡಬೇಕೆಂದು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯ ಸದಸ್ಯೆ ಡಾ.ಸೋನಾಲಿ ಸರ್ನೋಬತ್ ಒತ್ತಾಯಿಸಿದ್ದಾರೆ.
ಇಂದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರನ್ನು ಭೇಟಿಯಾದ ಡಾ.ಸೋನಾಲಿ ನಗರದ ಮದ್ಯಭಾಗದಲ್ಲಿ ಬೀಫ್ ಮಾರ್ಕೆಟ್ ಇರುವದರಿಂದ ಸಾರ್ವಜನಿಕರಿಗೆ ಇದರ ದುರ್ವಾಸನೆ ಸಹಿಸಲು ಆಗುತ್ತಿಲ್ಲ,ಬಸ್ ನಿಲ್ಧಾಣದ ಹತ್ತಿರದಲ್ಲೇ ಬೀಫ್ ಮಾರ್ಕೆಟ್ ಇರುವದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದು ಕೂಡಲೇ ಬೀಫ್ ಮಾರ್ಕೆಟ್ ನಗರ ಪ್ರದೇಶದಿಂದ ಶಿಪ್ಟ್ ಮಾಡಬೇಕೆಂದು ಸಚಿವರಿಗೆ ಡಾ.ಸೋನಾಲಿ ಸರ್ನೋಬತ್ ಮನವಿ ಅರ್ಪಿಸಿದರು.
ಬೆಳಗಾವಿ ನಗರದಲ್ಲಿ ಬೀದಿ ನಾಯಿ, ಮತ್ತು ಬಿಡಾಡಿ ದನಗಳ ಸಂಖ್ಯೆ ಹೆಚ್ಚಾಗಿದ್ದು ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಬಿಡಾಡಿ ಪ್ರಾಣಿಗಳಿಗೆ ಪುನರ್ ವಸತಿ ಕಲ್ಪಿಸುವ ವ್ಯೆವಸ್ಥೆಯನ್ನು ಮಾಡುವ ಮೂಲಕ,ಮೂಕ ಪ್ರಾಣಿಗಳಿಗೂ ಅನಕೂಲ ಮಾಡಿಕೊಡಬೇಕು ಎಂದು ಅವರು ನಗರಾಭಿವೃದ್ಧಿ ಸಚಿವರಲ್ಲಿ ಮನವಿ ಮಾಡಿಕೊಂಡರು.
ನಗರ ಪ್ರದೇಶದ ಬೀಫ್ ಮಾರ್ಕೆಟ್ ನಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು ಕೂಡಲೇ ಇದರ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು