ಬೆಳಗಾವಿ-ಮಾಜಿ ಸಚಿವ ಪ್ರಕಾಶ್ ಹುಕ್ಕೆರಿಯವರು ಮಾನವಿಯತೆ ಮೆರೆಯುವ ಕೆಲಸ ಮಾಡಿದ್ದಾರೆ.
ಹಿರೆಬಾಗೆವಾಡಿ ಬಳಿಯ ರಾಷ್ಟೀಯ ಹೆದ್ದಾರಿ 4 ರಲ್ಲಿ ಇಂದು ಬೆಳಿಗ್ಗೆ 10 ಗಂಟೆಗೆ ಅಪಘಾತ ಸಂಭವಿಸಿತ್ತು.. ಆ ಸಮಯದಲ್ಲಿ ಮಾಜಿ ಸಚಿವರಾದ ಪ್ರಕಾಶ್ ಹುಕ್ಕೇರಿ ಯವರು ಬೆಳಗಾವಿಯಿಂದ ಬೆಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದರು.. ಅಪಘಾತ ಆಗಿದ್ದನ್ನು ಕಂಡು ಕೂಡಲೆ ಸ್ಥಳಿಯ ಆಸ್ಪತ್ರೆಗೆ ಮಾಹಿತಿ ನೀಡಿ ಆಂಬ್ಯುಲೆನ್ಸ್ ಬರುವಂತೆ ಸೂಚಿಸಿದ್ರು.. ಅಂಬ್ಯುಲೆನ್ಸ್ ಬಂದು ಕರೆದುಕೊಂಡು ಹೊಗುವವರೆಗೂ ಸ್ಥಳದಲ್ಲೆ ಇದ್ದು. ಅಪಘಾತಕ್ಕೊಳಗಾದ ವ್ಯಕ್ತಿಗೆ ಕೂಡಲೆ ೧೦ ಸಾವಿರ ರೂಪಾಯಿ ಪರಿಹಾರ ನೀಡಿದರು . ಚಿಕಿತ್ಸೆಗೆ ಇನ್ನೂ ಹೆಚ್ಚಿನ ಸಹಾಯ ಬೇಕಾದ್ರೆ ನಮ್ಮ ಆಪ್ತ ಸಹಾಯಕರನ್ನ ಸಂಪರ್ಕಿಸಿ ಎಂದು ಹೇಳಿದ್ರು ..
ಈ ವೇಳೆ ನೆರೆದಿದ್ದ ಹಿರೆಬಾಗೆವಾಡಿ ಜನತೆ ಮಾಜಿ ಸಚಿವ ಪ್ರಕಾಶ್ ಹುಕ್ಕೇರಿಯವರ ಮಾನವಿಯತೆ ಕಂಡು ಹೃದಪೂರ್ವಕ ಕೃತಜ್ಞತೆಗಳನ್ನು ತಿಳಿಸಿದ್ದಾರೆ.