ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯ 18 ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರಗಳಲ್ಲಿ ಮಹಿಳಾ ಮಣಿಗಳಿಗೆ ಮಣೆಹಾಕಲು ಬಿಜೆಪಿ ಮುಂದಾಗಿದೆ. ನಿಪ್ಪಾಣಿ ಕ್ಷೇತ್ರದಿಂದ ಹಾಲಿ ಶಾಸಕಿ ಶಶಿಕಲಾ ಜೊಲ್ಲೆ ಸ್ಪರ್ಧೆ ಬಹುತೇಕ ಖಚಿತವಾಗಿದ್ದು, ಖಾನಾಪುರ ಕ್ಷೇತ್ರದಿಂದ ಡಾ.ಸೋನಾಲಿ ಸರ್ನೋಬಾತ್ ಬಿಜೆಪಿಯ ಮಹಿಳಾ ಕೋಟಾದಲ್ಲಿ ಟಿಕೆಟ್ ಜಾಕ್‌ಪಾಟ್ ಹೊಡೆಯಲಿದ್ದಾರೆ ಎನ್ನಲಾಗಿದೆ.
ಬಿಜೆಪಿ ಪಕ್ಷದ ಕಾರ್ಯಚಟುವಟಿಕೆಗಳಲ್ಲಿ ಮೊದಲಿನಿಂದಲು ಸಕ್ರಿಯರಾಗಿರುವ ಸೋನಾಲಿ ಸರ್ನೋಬಾತ್ ಅವರು ಕಳೆದ ಐದು ವರ್ಷಗಳಿಂದ ಖಾನಾಪುರ ಕ್ಷೇತ್ರದಲ್ಲಿ ತಮ್ಮನ್ನು ಪಕ್ಷದ ಸಂಘಟನೆಯಲ್ಲಿತೊಡಗಿಸಿಕೊಂಡಿದ್ದಾರೆ. ಹಾಲಿ ಇಲ್ಲಿ ಕಾಂಗ್ರೆಸ್‌ನ ಡಾ.ಅಂಜಲಿ ನಿಂಬಾಳಕರ ಕಾಂಗ್ರೆಸ್ ಶಾಸಕಿ. ಹಾಗಾಗಿ, ಅವರ ವಿರುದ್ಧವೇ ಕಣಕ್ಕಿಳಿಯಲು ಎಲ್ಲಸಿದ್ಧತೆಗಳನ್ನು ನಡೆಸಿದ್ದಾರೆ. ಪಕ್ಷದ ಹಿರಿಯ ನಾಯಕರೊಂದಿಗೂ ನಿಕಟ ಸಂಪರ್ಕದಲ್ಲಿದ್ದಾರೆ. ಹಾಗಾಗಿ, ಪಕ್ಷದ ಹಿರಿಯನಾಯಕರು ಕೂಡ ಸೋನಾಲಿ ಅವರಿಗೆ ಖಾನಾಪುರ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವಂತೆ ಪಕ್ಷದ ಹೈಕಮಾಂಡ್‌ಗೆ ಶಿಫಾರಸ್ಸು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಬಾರಿ ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಮಹಿಳೆಯರನ್ನೇ ಕಣಕ್ಕಿಳಿಸಲು ಮುಂದಾಗಿರುವುದು ಸೋನಾಲಿ ಸರ್ನೋಬಾತ್ ಅವರಿಗೆ ಜಾಕ್‌ಪಾಟ್ ಹೊಡೆದಂತಾಗಿದೆ. ಖಾನಾಪುರದಲ್ಲಿ ಜನತೆಯ ಸಮಸ್ಯೆಗೆ ಸ್ಪಂದಿಸುತ್ತ ಬಂದಿರುವ ಸೋನಾಲಿ ಸರ್ನೋಬಾತ್ ಅವರಿಗೆ ಎಲ್ಲೆಡೆ ಈಗ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಬಿಜೆಪಿಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ ಸೋನಾಲಿ ಅವರ ಕಾರ್ಯಚಟುವಟಿಕೆಗಳನ್ನು ಕೂಡ ಪಕ್ಷದ ಹಿರಿಯ ನಾಯಕರು ಗಮನಿಸಿದ್ದಾರೆ. ತಮ್ಮ ವೈದ್ಯಕೀಯ ಸೇವೆಯ ನಡುವೆಯೂ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದಾರೆ.ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು,ಡಾ.ಸೋನಾಲಿ ಸರ್ನೋಬತ್ ಅವರ ಬಳಿ ಅಧಿಕಾರ ಇಲ್ಲದಿದ್ದರೂ ಸರ್ಕಾರದ ಗಮನ ಸೆಳೆದು ಖಾನಾಪೂರ ಕ್ಷೇತ್ರಕ್ಕೆ ಹಲವಾರು ಸವಲತ್ತುಗಳನ್ನು ಯೋಜನೆಗಳನ್ನು ಮಂಜೂರು ಮಾಡಿಸಿದ ಕೀರ್ತಿ ಸೋನಾಲಿ ಅವರಿಗೆ ಸಲ್ಲುತ್ತದೆ.
ಪಕ್ಷದ ಸಂಘಟನಾ ಸೇವೆಯ ಜೊತೆಗೆ ಸಾಮಾಜಿಕ ಸೇವೆಯನ್ನು ಮಾಡುತ್ತ ಬಂದಿರುವ ಡಾ.ಸೋನಾಲಿ ಅವರ ಕಾರ್ಯಗಳ ಕುರಿತು ರಾಜ್ಯದ ಬಿಜೆಪಿ ನಾಯಕರು ಮೆಚ್ವುಗೆ ವ್ಯಕ್ತಪಡಿಸಿದ್ದು ಮಹಿಳಾ ಕೋಟಾದಡಿಯಲ್ಲಿ ಬಿಜೆಪಿ ಡಾ.ಸೋನಾಲಿ ಅವರಿಗೆ ಟಿಕೆಟ್ ಕೊಡುವ ಎಲ್ಲ ಸಾಧ್ಯತೆಗಳಿವೆ.