ಬೆಳಗಾವಿ-ಬಿಜೆಪಿ ಪಕ್ಷದಲ್ಲಿ ಅತ್ಯಂತ ಸಂಘಟನಾತ್ಮಕವಾಗಿ,ಸಾಮಾಜಿಕವಾಗಿ ಶೈಕ್ಷಣಿಕವಾಗಿ ಸೇವೆ ಮಾಡುತ್ತಿರುವ ಬಿಜೆಪಿ ನಾಯಕಿ ಡಾ.ಸೋನಾಲಿ ಸರ್ನೋಬತ್ ಅವರ ಸಾಮಾಜಿಕ ಕಳಕಳಿಯನ್ನು ಗುರುತಿಸಿ ಅವರಿಗೆ ಮರಾಠಾ ಸಮಾಜ ಮಹತ್ವದ ಜವಾಬ್ದಾರಿ ನೀಡಿದೆ.ಕ್ಷತ್ರಿಯ ಮರಾಠಾ ಸಮಾಜದ ಬೆಳಗಾವಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರನ್ನಾಗಿ ರಾಜ್ಯಾಧ್ಯಕ್ಷರಾಗಿರುವ ಸುರೇಶ ಸಾಠೆ ಅವರು ನೇಮಕ ಮಾಡಿದ್ದಾರೆ.
ಬೆಂಗಳೂರಿನ ಕ್ಷತ್ರಿಯ ಮರಾಠಾ ಸಮಾಜದ ಕಚೇರಿಯಲ್ಲಿ ಬೆಳಗಾವಿಯ ಡಾ. ಸೋನಾಲಿ ಸರ್ನೋಬತ್ ಅವರಿಗೆ ಸಮಾಜದ ರಾಜ್ಯಮಟ್ಟದ ಪದಾಧಿಕಾರಿಗಳು ಮರಾಠಾ ಸಮಾಜದ ಮುಖಂಡರ ಸಮ್ಮಖದಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಆದೇಶ ಪತ್ರವನ್ನು ನೀಡಿ,ಸೋನಾಲಿ ಸರ್ನೋಬತ್ ಅವರನ್ನು ಸತ್ಕರಿಸಿ,ಬೆಳಗಾವಿ ಜಿಲ್ಲೆಯಲ್ಲಿ ಮರಾಠಾ ಸಮಾಜದ ಸಂಘಟನೆಯನ್ನು ಬಲಪಡಿಸುವಂತೆ ಸೂಚಿಸಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಡಾ.ಸೋನಾಲಿ ಸರ್ನೋಬತ್ ಅವರು ಮಾಜಿ ಸಿಎಂ ಯಡಿಯೂರಪ್ಪ ಅವರು ಮರಾಠಾ ಸಮಾಜದ ಕಚೇರಿ ಮತ್ತು ಭವನ ನಿರ್ಮಾನಕ್ಕೆ ಬೆಳಗಾವಿ ನಗರದಲ್ಲಿ 22 ಗುಂಟೆ ಜಾಗೆಯನ್ನು ನೀಡಿದ್ದು ಈ ಭವನದ ನಿರ್ಮಾಣಕ್ಕೆ ಶ್ರಮಿಸುವದರ ಜೊತೆಗೆ ಮರಾಠಾ ಸಮಾಜವನ್ನು ಶೈಕ್ಷಣಿಕವಾಗಿ,ಆರ್ಥಿಕವಾಗಿ ಸದೃಡವನ್ನಾಗಿಸಲು ಪ್ರಾಮಾಣಿಕವಾಗಿ ಸೇವೆ ಮಾಡುತ್ತೇನೆ ಎಂದು ಡಾ.ಸೋನಾಲಿ ಹೇಳಿದರು.
ಮಾಜಿ ಶಾಸಕ ಅನೀಲ ಬೆನಕೆ,ರಾಜ್ಯಾಧ್ಯಕ್ಷ ಸುರೇಶ ಸಾಠೆ,ಟಿ.ಆರ್ ವೆಂಕಟರಾವ್ ಚವ್ಹಾಣ,ಸುನೀಲ ಚವ್ಹಾಣ,ರೋಹೀತ್ ರಾವ್ ಸಾಠೆ.ದಿಲೀಪ್ ಪವಾರ್ ಸೇರಿದಂತೆ ಮರಾಠಾ ಸಮಾಜದ ಗಣ್ಯರು ಉಪಸ್ಥಿತರಿದ್ದರು.