ಮೂಡಲಗಿ- ಬೆಳಗಾವಿ ಗ್ರಾಮೀಣ ಜಿಲ್ಲಾ ಬಿಜೆಪಿಯ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ ಅವರ ತಂದೆಯವರಾದ, ದುಂಡಪ್ಪ ಮಹಾದೇವಪ್ಪ ಪಾಟೀಲ ಅವರು ಇಂದು ಬೆಳಗ್ಗೆ ವಿಧಿವಶರಾದರು.
ಮೂಡಲಗಿ ತಾಲ್ಲೂಕಿನ ಅವರಾಧಿ ಗ್ರಾಮದ ಹಿರಿಯರಾಗಿದ್ದ ದುಂಡಪ್ಪ ಪಾಟೀಲ ಅವರು ಅನಾರೋಗ್ಯದ ಕಾರಣ ಇಂದು ಬೆಳಗ್ಗೆ ನಿಧನರಾಗಿದ್ದು ಮೃತರ ಅಂತ್ಯಕ್ರಿಯೆ ನಾಳೆ ಮಂಗಳವಾರ ದಿನಾಂಕ 23- 7- 2024 ರಂದು ಸ್ವಗ್ರಾಮ ಅವರಾಧಿ ಗ್ರಾಮದಲ್ಲಿ ಬೆಳಗ್ಗೆ 8-00 ಗಂಟೆಗೆ ನೆರವೇರಲಿದೆ
ದುಂಡಪ್ಪ ಮಹಾದೇವಪ್ಪ ಪಾಟೀಲ ಅವರ ನಿಧನಕ್ಕೆ ಗೋಕಾಕ್ ಹಾಗೂ ಮೂಡಲಗಿ ತಾಲ್ಲೂಕಿನ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ