ವ್ಯಾಪಾರಿಗಳಿಗೆ ಸಿಹಿ ಸುದ್ಧಿ..ಆನ್ ಲೈನ್ ಮೂಲಕ ಟ್ರೇಡ್ ಲೈಸನ್ಸ

ಬೆಳಗಾವಿ- ಬೆಳಗಾವಿ ನಗರದ ವ್ಯಾಪಾರಿಗಳು ನಮಗೆ ಲೈಸನ್ಸ ಕೊಡಿ ಎಂದು ಪಾಲಿಕೆ ಕಚೇರಿಗೆ ಇನ್ನು ಮುಂದೆ ಅಲೆದಾಡ ಬೇಕಾಗಿಲ್ಲ ಬೆಳಗಾವಿ ಮಹಾನಗರ ಪಾಲಿಕೆ ಇ- ವ್ಯಾಪಾರ ಎಂಬ ಹೊಸ ಪದ್ದತಿಯನ್ನು ಜಾರಿಗೆ ತಂದಿದ್ದು ಗ್ರಾಹಕರು ತಮ್ಮ ಅಂಗಡಿಯಲ್ಲಿ ಕುಳಿತುಕೊಂಡು ಆನ್ ಲೈನ್ ಮೂಲಕ ಟ್ರೇಡ್ ಲೈಸನ್ಸ ಪಡೆಯಬಹುದಾಗಿದೆ

ವ್ಯಾಪಾರಿಗಳು ಇಂಟರ್ ನೆಟ್ ಆನ್ ಮಾಡಿ www.mrc.gov.iw/tradelicance ಎಂದು ಲಾಗ್ ಇನ್ ಆದ್ರೆ ಅಪ್ಲಿಕೆಶನ್ ಓಪನ್ ಆಗುತ್ತದೆ ಅಪ್ಲಿಕೇಶನ್ ಪಿಲಪ್ ಮಾಡಬೇಕು ನಂತರ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ send ಮಾಡಿದ್ರೆ ಸಾಕು ಪಾಲಿಕೆ ಅಧಿಕಾರಿಗಳು ಇದನ್ನು ಪರಶೀಲಿಸಿ ಲೈಸನ್ಸ ಮಂಜೂರ ಮಾಡುತ್ತಾರೆ ಇದಕ್ಕೆ ಪಾಲಿಕೆ ಆಯುಕ್ತ ಶಶಿಧರ ಕುರೇರ ಇ- ವ್ಯಾಪಾರ ಎಂದು ನಾಮಕರಣ ಮಾಡಿದ್ದಾರೆ

ಪಾಲಿಕೆ ಆರೋಗ್ಯಾಧಿಕಾರಿ ನಾಡಗೌಡ ಇ- ವ್ಯಾಪಾರ ವ್ಯೆವಸ್ಥೆ ನಿರ್ವಹಣೆಯ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ ಈಗಾಗಲೇ ಆನ್ ಲೈನ್ ಮೂಲಕ ನೂರಾರು ಅರ್ಜಿಗಳು ಸಲ್ಲಿಕೆ ಆಗಿವೆ

ಬೆಳಗಾವಿ ನಗರದ ಲೈಸನ್ಸ ಇಲ್ಲದ ವ್ಯಾಪಾರಿಗಳು ತಡ ಮಾಡದೇ ಇ ವ್ಯಾಪಾರ ವ್ಯೆವಸ್ಥೆಯ ಸದುಪಯೋಗ ಪಡೆದುಕೊಂಡು ಸರಳವಾಗಿ ಲೈಸನ್ಸ ಪಡೆಯಬಹುದಾಗಿದೆ

ಬೆಳಗಾವಿ  ಮಹಾನಗರ ಪಾಲಿಕೆಯ ಆಯುಕ್ತರಾಗಿ ಶಶಿಧರ ಕುರೇರ ಅವರು ನಿಯೋಜನೆ ಆದಾಗಿನಿಂದ ಪಾಲಿಕೆಯ ಆಡಳಿತ ವ್ಯೆವಸ್ಥೆಗೆ ಹೊಸ ಆಯಾಮ ದೊರೆತಿದೆ ಜನನ ಮರಣ ಪ್ರಮಾಣ ಪತ್ರಗಳು ಸರಳವಾಗಿ ಸುಲಭವಾಗಿ ಸಾರ್ವಜನಿಕರ ಕೈಗೆಟಕುತ್ತಿವೆ ಪ್ರಮಾಣ ಪತ್ರಗಳು ಡಿಜಿಟಲ್ ಸಹಿಯೊಂದಿಗೆ ಪ್ರಿಂಟ್ ಆಗುತ್ತಿರುವದರಿಂದ ಜನನ ಮರಣ ಪ್ರಮಾಣ ಪತ್ರಗಳು ತ್ವರಿತ ಗತಿಯಲ್ಲಿ ವಿಲೇವಾರಿ ಆಗುತ್ತಿವೆ

ಪಾಲಿಕೆ ಆಯುಕ್ರರು ಈಗ ಕಟ್ಟಡ ಪರವಾಣಿಗೆ ಪಡೆಯುವ ವ್ಯೆವಸ್ಥೆಯನ್ನು ಆನ್ ಲೈನ್ ಮಾಡುವ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಇನ್ನು ಕೆಲವೇ ದಿನಗಳಲ್ಲಿ ಬೆಳಗಾವಿ ನಗರದ ಸಾರ್ವಜನಿಕರು ಆನ್ ಲೈನ್ ಮೂಲಕ ಕಟ್ಟಡ ನಿರ್ಮಿಸುವ ಅನುಮತಿ ಪಡೆಯಬಹುದಾಗಿದೆ

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *