Breaking News

ಕೆವಿಜಿ ಬ್ಯಾಂಕಿನಿಂದ ಪ್ರಥಮ ಡಿಜಿಟಲ್ ಗ್ರಾಮವಾಗಿ ಝಡ್ ಶಹಾಪೂರ

ಬೆಳಗಾವಿ: ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕು ಬೆಳಗಾವಿ ತಾಲೂಕು ಝಡ್ ಶಾಹಪೂರ ಗ್ರಾಮವನ್ನು ಸಂಪೂರ್ಣ ಡಿಜಿಟಲ್ ಗ್ರಾಮವನ್ನಾಗಿ ಪರಿವರ್ತಿಸಿದ್ದು ಆ ಗ್ರಾಮವನ್ನು ‘ಸಂಪೂರ್ಣ ಡಿಜಿಟಲ್ ಗ್ರಾಮವೆಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಎಸ್ ರವೀಂದ್ರನ್ ಘೋಷಿಸಿದರು. ಅವರು ಈ ಕುರಿತ ಘೋಷಣಾ ಫಲಕವನ್ನು ಶೆರೆವಾಡ ಗ್ರಾಮ ಪಂಚಾಯತ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಈ ಗ್ರಾಮದಲ್ಲಿ ಇನ್ನು ಮುಂದೆ ನಗದು ವ್ಯವಹಾರ ಕಡಿಮೆಯಾಗುವುದಲ್ಲದೆ ನಗದು ರಹಿತ ವ್ಯವಹಾರ ಪ್ರಾಮುಖ್ಯತೆ ಪಡೆದುಕೊಳ್ಳಲಿದೆ. ಜನಸಾಮಾನ್ಯರು ತಮ್ಮ ದೈನಂದಿನ ಬ್ಯಾಂಕ್ ವ್ಯವಹಾರಕ್ಕೆ ಅದರಲ್ಲೂ ವಿಶೇಷವಾಗಿ ಹಣ ಪಾವತಿ ಮತ್ತು ರವಾನೆಗೆ ಡಿಜಿಟಲ್ ಮಾಧ್ಯಮವನ್ನು ಬಳಸಲಿದ್ದಾರೆ.
ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಎಸ್ ರವೀಂದ್ರನ್ ಈ ಸಂದರ್ಭದಲ್ಲಿ ಮಾತನಾಡಿ ಏಟಿಎಮ್ ನಿಂದ ಮೊಬೈಲ್ ಬ್ಯಾಂಕಿಂಗ್‍ನವರೆಗೆ ಕ್ರಾಂತಿಕಾರಕ ಬದಲಾವಣೆಯನ್ನು ಜನಸಾಮಾನ್ಯರಿಗೆ ಪರಿಚಯಿಸುತ್ತಾ ಬಂದಿದೆ. ಸದ್ಯಕ್ಕೆ ಬ್ಯಾಂಕು ತನ್ನ ಕಾರ್ಯಕ್ಷೇತ್ರದ 9 ಜಿಲ್ಲೆಗಳಲ್ಲಿ ಜಿಲ್ಲೆಗೊಂದರಂತೆ 9 ಗ್ರಾಮಗಳನ್ನು ಸಂಪೂರ್ಣ ಡಿಜಿಟಲ್ ಗ್ರಾಮಗಳನ್ನಾಗಿ ಪರಿವರ್ತಿಸಲಿದೆ. ಎಲ್ಲ ಗ್ರಾಮಗಳನ್ನು ಡಿಜಿಟಲ್ ವ್ಯವಸ್ಥೆಗೆ ತರುವ ಬ್ಯಾಂಕಿನ ಪ್ರಯತ್ನ ನಿರಂತರವಾಗಲಿದೆ ಎಂದೂ ರವೀಂದ್ರನ್ ಹೇಳಿದರು.
ಬ್ಯಾಂಕು ಗ್ರಾಮೀಣ ಪ್ರದೇಶದಲ್ಲಿ ನೇಮಿಸಿರುವ ವ್ಯವಹಾರ ಪ್ರತಿನಿಧಿ ಹಾಗೂ ಬ್ಯಾಂಕ್ ಸಖಿ ಗ್ರಾಮೀಣ ಜನರಿಗೆ ಡಿಜಿಟಲ್ ವ್ಯವಸ್ಥೆಯ ಬಳಕೆಯ ಬಗ್ಗೆ ತಿಳುವಳಿಕೆ ನೀಡಲಿದ್ದಾರೆ ಎಂದೂ ರವೀಂದ್ರನ್ ಹೇಳಿದರು.
ಡಿಜಿಟಲ್ ಗ್ರಾಮದಲ್ಲಿ ಏನೇನಿದೆ ?
1260 ಜನಸಂಖ್ಯೆಯಿರುವ ಈ ಗ್ರಾಮದಲ್ಲಿ 806 ಅರ್ಹ ಜನರಿಗೆ ಬ್ಯಾಂಕು ಖಾತೆ ತೆರೆದುಕೊಟ್ಟಿದೆ. 806 ಖಾತೆಗಳಿಗೆ ಆಧಾರ್ ಜೋಡಿಸುವ ಮೂಲಕ ಸರ್ಕಾರ ಮತ್ತು ಇನ್ನಿತರ ಕಡೆಯಿಂದ ಬರುವ ನೇರ ಲಾಭದ ವರ್ಗಾವಣೆ ಖಾತೆಯ ಮೂಲಕವೇ ಜರುಗಲಿದೆ. 585 ಜನರ ಖಾತೆಗೆಳಿಗೆ ಮೊಬೈಲ್ ಸಂಖ್ಯೆಯನ್ನು ಜೋಡಿಸಲಾಗಿದೆ. ಇದರಿಂದ ಖಾತೆಯ ಎಲ್ಲ ವ್ಯವಹಾರಗಳ ಸಂಕ್ಷಿಪ್ತ ಮಾಹಿತಿ ತಕ್ಷಣ ಲಭ್ಯವಾಗಲಿದೆ. ಬ್ಯಾಂಕು 806 ರೂಪೆ ಕಾರ್ಡುಗಳನ್ನು ವಿತರಿಸಿದೆ. ಗ್ರಾಮದಲ್ಲಿ ವ್ಯವಹಾರ ಪ್ರತಿನಿಧಿ ಇರುವುದರಿಂದ ಹಣ ಪಾವತಿ ಅಥವಾ ವರ್ಗಾವಣೆ ಕಿರು ಏಟಿಏಮ್ ಯಂತ್ರದ ಮೂಲಕ ಆಗಲಿದೆ.
ಬ್ಯಾಂಕು ಖಾತೆದಾರರಿಗೆ ಮೊಬೈಲ್ ಬ್ಯಾಂಕಿಂಗ್ ಸೇವೆ ನೀಡಿದೆ. ಇದರಿಂದ ಹಳ್ಳಿಗರು 24 ಘಿ 7 ತಾವದ್ದಲ್ಲಿಂದಲೇ ಬ್ಯಾಂಕಿಂಗ್ ವ್ಯವಹರವನ್ನು ಮಾಡ ಬಹುದಾಗಿದೆ.
ಏಟಿ ಎಮ್ ಕಾರ್ಡು ಇಲ್ಲದಿದ್ದವರಿಗೂ ಆಧಾರ್ ಕಾರ್ಡ್ ಆಧಾರಿತ ಪಾವತಿ ಮತ್ತು ರವಾನೆಗು ಬ್ಯಾಂಕು ಅವಕಾಶ ಕಲ್ಪಿಸಿಕೊಟ್ಟಿದೆ. ನಿರ್ಧಿಷ್ಟ ವೇಳಾಪಟ್ಟಿಗನುಗುಣವಾಗಿ ಬ್ಯಾಂಕಿನ ಸಂಚಾರಿ ವಾಹನ ಗ್ರಾಮದಲ್ಲಿ ಸಂಚರಿಸಲಿದೆ. ಸದ್ಯವೇ ಬ್ಯಾಂಕು ಅಂಗಡಿಗಳಿಗೆ ಪೆÇಸ್ ಯಂತ್ರವನ್ನು ನೀಡಲಿದೆ.
ಬ್ಯಾಂಕು ಡಿಜಿಟಲ್ ವ್ಯವಸ್ಥೆಗೆ ಅನುವು ಮಾಡಿಕೊಟ್ಟಿರುವುದರಿಂದ ಹಣಕಾಸು ವ್ಯವಸ್ಥೆಗೆ ತೊಮ್ಬಾ ಅನುಕುಲವಾಗಿದೆ ಎಂದು ಜಿಲ್ಲಾ ಪಂಚಾಯತ ಸದಸ್ಯ ರಮೇಶ ಗೊರವ ಅವರು ಹೇಳಿದರು.
ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ ಶ್ರೀಪತಿ ಹೆಗಡೆ ಅವರು ಸ್ವಾಗತಿಸಿದರು. ಹಿರಿಯ ಪ್ರಬಂಧಕ ಉಲ್ಲಾಸ ಗುನಗ ನಿರೂಪಿಸಿದರು. ಇನ್ನೂರ್ವ ಹಿರಿಯ ಪ್ರಬಂಧಕ ಪ್ರವೀಣ ಚಿಕ್ಕಲಿ ವಂದಿಸಿದರು. ಗ್ರಾಮ ಪಂಚಾಯತ ಅಧ್ಯಕ್ಷ ಲಕ್ಷ್ಮೀ ಕಾಳೆಸೆಕರ, ಶಾಖಾಧಿಕಾರಿ ವಿ.ಎಸ್. ವೇರಣೆರ್ಕ ಉಪಸ್ಥಿತರಿದ್ದರು.

Check Also

ಮೂವರ ಜೀವ ಉಳಿಸಿದ ಬಾಲಿಕಾಗೆ ಮಿನಿಸ್ಟರ್ ಶಹಬ್ಬಾಶ್….!

  ಬೆಳಗಾವಿ ಟಿಳಕವಾಡಿಯ ಕಾಂಗ್ರೆಸ್ ರಸ್ತೆಯ ಮೊದಲನೇ ರೇಲ್ವೆ ಗೇಟ್ ಬಳಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದ ಮೂವರ ಜೀವ ಉಳಿಸಿ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.