ಬೆಳಗಾವಿ
ಮರಾಠಾ ಸಮುದಾಯಕ್ಕೆ ತಮ್ಮದೆಯಾದ ಇತಿಹಾಸ ಇದೆ. ಬೆಳಗಾವಿ ಮರಾಠಿಗರು ಒಂದಾಗಬೇಕು. ಸಹಬಾಳ್ವೆಯಿಂದ ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಸಕಲ ಮರಾಠಾ ಸಮಾಜ ಬೆಳಗಾವಿ ಶ್ರಮಿಸುತ್ತಿರುವ ಕಾರ್ಯ ಅನನ್ಯವಾಗಿದೆ.
ಕಳೆದ 1620ರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಮಠ ಸ್ಥಾಪನೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೂ ಈ ಮಠಕ್ಕೆ ಮಠಾಧೀಶರನ್ನು ನೇಮಕ ಮಾಡಿಕೊಂಡು ಬರಲಾಗಿದೆ. ಮರಾಠಾ ಸಮಾಜದ 13ನೇ ಮಠಾಧೀಶರಾಗಿ ಪಟ್ಟಾಧಿಕಾರ ವಹಿಸಿಕೊಂಡಿರುವ ಮರಾಠಾ ಸ್ವಾಮಿ ಗುರು ಜಗದ್ಗುರು ವೇದಾಂತಾಚಾರ್ಯ ಶ್ರೀ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಅವರ ಬೃಹತ್ ಶೋಭಾಯಾತ್ರೆ ಮತ್ತು ಗುರುವಂದನೆ ಕಾರ್ಯಕ್ರಮವನ್ನು ಮೇ.15 ರಂದು ಭಾನುವಾರ ಬೆಳಗ್ಗೆ 9ಕ್ಕೆ ಕಪಿಲೇಶ್ವರ ಮಂದಿರದಿಂದ ಬೆಳಗಾವಿಯ ವಡಗಾವಿ ಆದರ್ಶ ವಿದ್ಯಾ ಮಂದಿರದ ಮೈದಾನದವರೆಗೆ ಸಾಗಿ ಮುಕ್ತಾಯವಾಗಲಿದೆ. ಬಳಿಕ ಬೆಳಗ್ಗೆ 11ಕ್ಕೆ ವಡಗಾವಿಯ ಆದರ್ಶ ವಿದ್ಯಾಮಂದಿರದಲ್ಲಿ ಗುರು ವಂದನಾ ಕಾರ್ಯಕ್ರಮ ಜರುಗಲಿದೆ.
ಈ ಶೋಭಾಯಾತ್ರೆ ಮತ್ತು ಗುರುವಂದನೆ ಕಾರ್ಯಕ್ರಮ ಬೆಳಗಾವಿಯಲ್ಲಿ ಮಾಡುವ ಉದ್ದೇಶ ಮರಾಠಾ ಸಮುದಾಯದವರಿಗೂ ಗುರುಗಳು ಇದ್ದಾರೆ ಎನ್ನುವ ಸಂದೇಶ ಸಾರವ ನಿಟ್ಟಿನಲ್ಲಿ ಸಕಲ ಮರಾಠಾ ಸಮಾಜ ಬೆಳಗಾವಿ ವತಿಯಿಂದ ಮರಾಠಾ ಸ್ವಾಮಿ ಗುರು ಜಗದ್ಗುರು ವೇದಾಂತಾಚಾರ್ಯ ಶ್ರೀ ಶ್ರೀ ಮಂಜುನಾಥ ಭಾರತಿ ಸ್ವಾಮೀಜಿ ಅವರ ಬೃಹತ್ ಶೋಭಾಯಾತ್ರೆ ಮತ್ತು ಗುರುವಂದನೆ ಕಾರ್ಯಕ್ರಮ ನಡೆಸಲಾಗುತ್ತಿದೆ.
ಅಲ್ಲದೆ, ಮರಾಠಾ ಸಮುದಾಯದ ಛತ್ರಪತಿ ಸಂಭಾಜಿ ರಾಜೆ ಬೋಸಲೆ ಕೊಲ್ಲಾಪುರದ ಶ್ರೀಮಂತ ಯುವರಾಜ, ಕಾಶಿ ವೇದಾಂತಚಾರ್ಯ ಸ್ವಾಮಿ ಸ್ವಹಂ ಚೈತನ್ಯ ಪುರಿ, ರಾಷ್ಟ್ರೀಯ ಧರ್ಮಾಚಾರ್ಯ ರಾಜಮನೆತನದ ರಾಜಶ್ರೀ ಶ್ರೀ ಭಗವಾನ್ ಗಿರಿ ಮಹಾರಾಜರು ನೂಲ್, ಇವರು ಆಗಮಿಸಲಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜರು ನೆರವಿನಲ್ಲಿ ಬೆಳೆದ ವೀರತ್ವದ ಸಮಾಜ ಮರಾಠಾ ಸಮಾಜವಾಗಿದೆ. ಶತಮಾನಗಳಿಂದಲೂ ಈ ಸಮಾಜ ರಾಷ್ಟ್ರ ಪ್ರೇಮ, ಸ್ವಾಭಿಮಾನ, ಸ್ವಾವಲಂಬನೆ, ತ್ಯಾಗ ಮನೋಭಾವನೆಯಿಂದ ಮುನ್ನಡೆದಿದೆ. ಬೆಳಗಾವಿಯಲ್ಲಿ ಅಷ್ಟೆ ಅಲ್ಲ ಕರ್ನಾಟಕದ ತುಂಬ ಮರಾಠಾ ಸಮುದಾಯ ಚದುರಿಕೊಂಡಿದೆ. ಅದರಂತೆ ಮಹಾರಾಷ್ಟ್ರದಲ್ಲಿಯೂ ಕರ್ನಾಟಕದ ಕನ್ನಡಿಗರು ವ್ಯಾಪ್ತಿಸಿಕೊಂಡಿದ್ದಾರೆ.
ಮರಾಠಾ ಸಮಾಜದ ಸಲುವಾಗಿ ಸಕಲ ಮರಾಠಾ ಸಮಾಜ ಬೆಳಗಾವಿ ಮರಾಠಿಗರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಲಿದ್ದಾರೆ. ಮರಾಠಿಗರನ್ನು ಆರ್ಥಿಕ,ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕವಾಗಿ ಮತ್ತು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿಗಳನ್ನಾಗಿಸುವ ಗುರಿಯನ್ನು ಸಕಲ ಮರಾಠಾ ಸಮಾಜ ಬೆಳಗಾವಿ ಉದ್ದೇಶವಾಗಿದೆ.
ಈ ನಿಟ್ಟಿನಲ್ಲಿ ಹತ್ತು ಹಲವು ಮರಾಠಾರ ಪರ ಸದೃಢ ನಿಲುವುಗಳನ್ನು ಗುರುತಿಸಿಕೊಂಡು ಸಮಾಜ ಸಂಘಟನೆಯದ್ದಾಗಿದೆ.
ಸಕಲ ಮರಾಠಾ ಸಮಾಜ ಬೆಳಗಾವಿ, ಕೇವಲ ಮರಾಠಾ ಸಮುದಾಯಕ್ಕೆ ಗುರುಗಳು ಇರುವುದನ್ನು ಪರಿಚಯಿಸುತ್ತಿಲ್ಲ. ಕಾರ್ಯಕ್ರಮ ಮುಗಿದ ಬಳಿಕವೂ ಮರಾಠಾ ಸಮಾಜದ ಏಳಿಗೆಗಾಗಿ ನಿರಂತರವಾಗಿ ಶ್ರಮಿಸಲಿದೆ. ಸಮಸ್ತ ಮರಾಠಾ ಸಮುದಾಯದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಕೊಟ್ಟು ಅವರನ್ನು ಸುಶಿಕ್ಷಿತರನ್ನಾಗಿ ಮಾಡಿ ದೇಶಕ್ಕೆ ಒಳ್ಳೆಯ ಪ್ರಜೆಯನ್ನಾಗಿಸುವ ಗುರಿ ಹೊಂದಿದೆ.
ಮರಾಠಾ ಸಮುದಾಯದ ಎಲ್ಲ ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಮುನ್ನಡೆಸಲು ಶಿಷ್ಯವೇತನ ನೀಡುವ ಗುರಿ ಹೊಂದಿದೆ. ಅದರಂತೆ ಸಮಾಜದ ವಿಧವೆಯರಿಗೆ ವಿಧವಾ ವೇತನ ನೀಡುವುದರ ಜೊತೆಗೆ ಅವರ ಆರ್ಥಿಕ ವೃದ್ಧಿಯಾಗಿ ಉದ್ಯೋಗ ಕಲ್ಪಿಸಿಕೊಡುವ ಯೋಜನೆ ರೂಪಿಸಿಕೊಂಡಿದೆ. ಬಹುತೇಕ ಮರಾಠಾ ಸಮುದಾಯದ ಕೃಷಿಯನ್ನು ಅವಲಂಬಿಸಿದೆ. ಸಮಾಜ ಬಾಂಧವರು ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವ ನಿಟ್ಟಿನಲ್ಲಿ ಕೃಷಿ ತಜ್ಞರೊಂದಿಗೆ ತರಬೇತಿ ಕೊಡಿಸಲಾಗುತ್ತಿದೆ
ಮರಾಠಾ ಸಮಾಜದ ಸಾರ್ವತ್ರಿಕ ಉನ್ನತಿಗೆ ಸರಕಾರ ವಿಶೇಷ ಮೀಸಲಾತಿ ನೀಡಬೇಕು. ಈ ನಿಟ್ಟಿನಲ್ಲಿ ಸಮಾಜ ನಿರಂತರವಾಗಿ ಹೋರಾಟ ನಡೆಸುವ ನಿಲುವಿನಲ್ಲಿದೆ.
ಇಂತಹ ಮಹತ್ತರ ಸಮಾಜದ ಉದ್ದಾರಕ ವಿಷಯಗಳನ್ನು ಇಟ್ಟು ಸಮಾಜದ ಸಂಘಟನೆ ಹೋರಾಟ ನಡೆಸಿ ದಶಮಾನಗಳಿಂದ ತುಳಿತಕ್ಕೆ ಒಳಗಾದ ಮರಾಠಾ ಸಮಾಜ ಬಾಂಧವರನ್ನು ಎಚ್ಚರಿಸುವ ಕಾರ್ಯ ಮಾಡುವುದಂತೂ ಶತ ಸಿದ್ಧ.
——
ಮರಾಠಾ ಸಮಾಜಕ್ಕೆ ಗುರುಗಳಿದ್ದಾರೆ. ಅವರನ್ನು ಬೆಳಗಾವಿ ಮರಾಠಿಗರಿಗೆ ಗುರುತಿಸುವ ನಿಟ್ಟಿನಲ್ಲಿ ಮೇ.15ರಂದು ಬೃಹತ್ ಶೋಭಾಯಾತ್ರೆ ಹಾಗೂ ಗುರುವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಬೆಳಗಾವಿಯ ಸಮಸ್ತ ಮರಾಠಾ ಸಮುದಾಯ ಆಗಮಿಸಿ ಯಶಸ್ವಿಗೊಳಿಸಬೇಕು.
– ಕಿರಣ ಜಾಧವ, ಸಕಲ ಮರಾಠಾ ಸಮಾಜ ಬೆಳಗಾವಿ, ಕಾರ್ಯಕ್ರಮದ ಆಯೋಜಕ