ಬೆಳಗಾವಿ- ನಗರದ ಸಮೀಪದಲ್ಲಿರುವ ಏಕಸ್ ಕಂಪನಿ ಅಘೋಷಿತ ಲಾಕ್ ಔಟ್ ಮಾಡಿ ಕಾರ್ಮಿಕರನ್ನು ಕಾನೂನು ಬಾಹಿರ ವಾಗಿ ವಜಾ ಮಾಡಿದ್ದು ಮುಖ್ಯಮಂತ್ರಿ ಗಳು ಕೂಡಲೇ ಮದ್ಯಪ್ರವೇಶಿಸಿ ಕಾರ್ಮಿಕರಿಗೆ ನ್ಯಾಯದೊರಕಿಸಿ ಕೊಡುವಂತೆ ಒತ್ತಾಯಿಸಿ ಏಕಸ್ ಕಂಪನಿಯ ನೂರಾರು ಜನ ಕಾರ್ಮಿಕರು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ತಮ್ಮ ಆಕ್ರೋಶವನ್ನು ಹೊರಹಾಕಿದರು
ಏಕಸ್ ಕಂಪನಿಯು ಕಾರ್ಮಿಕರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲು ಮಾಡಿದ್ದು ಕೂಡಲೇ ಅದನ್ನು ವಾಪಸ್ ಪಡೆಯಬೇಕು ಕಳೆದ ಮೂರು ತಿಂಗಳ ವೇತನ ಪಾವತಿಸಬೇಕು, ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಮಿಕರು ಒತ್ತಾಯಿಸಿದರು
ಕಂಪನಿಯ ಲಾಕ್ ಔಟ್ ತೆರವು ಮಾಡಬೇಕು ವಜಾ ಗೊಂಡ ಕಾರ್ಮಿಕರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಜೊತೆಗೆ ಕರ್ನಾಟಕ ಕೇರಳ, ಮತ್ತು ಲಕ್ಷದೀಪಗಳಿಗೆ ಪ್ರಾದೇಶಿಕ ಕಚೇರಿಯನ್ನು ಕೊಚ್ಚಿನ್ ದಲ್ಲಿ ಸ್ಥಾಪಿಸಿದ್ದು ಕಾರ್ಮಿಕ ಕಾನೂನುಗಳ ಜಾರಿ ಅಧಿಕಾರವನ್ನು ಕೇರಳದಂತೆ ಕರ್ನಾಟಕ ಸರ್ಕಾರ ಕಾರ್ಮಿಕ ಕಚೇರಿಯನ್ನು ಮರಳಿ ಪಡೆಯಬೇಕು ಎಂದು ಒತ್ತಾಯಿಸಿದರು
ಕ್ರಾಂತಿಕಾರಿ ಕಾಮಗಾರ್ ಯೂನಿಯನ್ ಇವೆಲ್ಲ ಬೇಡಿಕೆ ಈಡೇರಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು