ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಪಯಣ ಮುಂದುವರೆದಿದೆ.ಮೂರು ಚಿರತೆ ,ಎರಡು ಕತ್ತೆ ಕಿರುಬು,ಜಿಂಕೆಯ ಬಳಿಕ ಇವತ್ತು ಆನೆಯೂ ರಸ್ತೆಗೆ ಬಂದಿದೆ.
ಉಮೇಶ್ ಕತ್ತಿ ಅವರಿಗೆ ಕಾಡು ಪ್ರಾಣಿಗಳ ಮೇಲೆ ಪ್ರೀತಿಯೋ..? ಅಥವಾ ಕಾಡು ಪ್ರಾಣಿಗಳಿಗೆ ಅರಣ್ಯ ಸಚಿವ ಉಮೇಶ್ ಕತ್ತಿ ಅವರ ಭೀತಿಯೋ ಗೊತ್ತಿಲ್ಲ.ಆದ್ರೆ ಒಂದರ ಮೇಲೊಂದು ಕಾಡು ಪ್ರಾಣಿಗಳು ಗ್ರಾಮಗಳಿಗೆ ನುಗ್ಗುತ್ರಿವೆ.ಸಚಿವರ ತವರು ಜಿಲ್ಲೆಗೆ ಕಾಡು ಪ್ರಾಣಿಗಳು ಲಗ್ಗೆ ಇಟ್ಟಿರುವುದು ಎಲ್ಲರಲ್ಲಿ ಅಚ್ಚರಿ ಮೂಡಿಸಿದೆ.
ಖಾನಾಪೂರ ತಾಲ್ಲೂಕಿನ ಕೊಡುಗೈಯಿ ರಸ್ತೆಯ ಮೇಲೆ ಇಂದು ಗಜರಾಜ ಓಡಾಡುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.ಖಾನಾಪೂರ ತಾಲ್ಲೂಕಿನಲ್ಲಿ ವಿಶಾಲವಾದ ಅರಣ್ಯ ಪ್ರದೇಶ ಇದೆ. ಇಲ್ಲಿ ಆಗಾಗ್ಗೆ ಆನೆಗಳು ಬರುವುದು ಸಾಮಾನ್ಯ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ