ಬೆಳಗಾವಿ-ಯುದ್ಧಪೀಡಿತ ಉಕ್ರೇನ್‌ನಿಂದ ಬೆಳಗಾವಿ ಮೂಲದ ಮೆಡಿಕಲ್ ವಿಧ್ಯಾರ್ಥಿನಿ ಫೈಜಾ ಯಾವುದೇ ಅಡೆತಡೆ ಇಲ್ಲದೇ ತವರೂರಿಗೆ ಸುರಕ್ಷಿತವಾಗಿ ತಲುಪಿದ್ದಾಳೆ.
ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದ ನಿವಾಸಿ ಆಗಿರುವ ಫೈಜಾ ಸುಬೇದಾರ್ ರೊಮೇನಿಯಾ ಗಡಿಗೆ ಬಂದು ಅಲ್ಲಿಂದ 12 ಗಂಟೆ ಪ್ರಯಾಣ ಮಾಡಿ ಮುಂಬೈ ಏರ್‌ಪೋರ್ಟ್ ತಲುಪಿ ಬೆಳಗಾವಿಗೆ ಮರಳಿದ್ದಾಳೆ.
ನಿನ್ನೆ ರಾತ್ರಿ ಮುಂಬೈಗೆ ಆಗಮಿಸಿದ್ದ ಫೈಜಾ ಅಲ್ತಾಫ್ ಸುಬೇದಾರ್,
ರೋಮೆನಿಯಾದಿಂದ ಮುಂಬೈಗೆ ಬಂದಿದ್ದ ಫೈಜಾ ಅವರ ತಂದೆ ಅಲ್ತಾಫ್
ಮಗಳನ್ನ ಬೆಳಗಾವಿಗೆ ಕರೆದುಕೊಂಡು ಬಂದಿದ್ದಾರೆ. ಪೈಜಾ,ಎರಡನೇ ವರ್ಷದ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿನಿ ಆಗಿದ್ದಾಳೆ.
ಬೆಳಗಾವಿಗೆ ಇಂದು ಬೆಳಿಗ್ಗೆ ಆಗಮಿಸಿದ ಫೈಜಾಗೆ, ಅಂಬೇಡ್ಕರ್ ಜನಜಾಗೃತಿ ವೇದಿಕೆಯಿಂದ ಅದ್ಧೂರಿ ಸ್ವಾಗತ ದೊರೆತಿದೆ. ಮಗಳು ಸುರಕ್ಷಿತವಾಗಿ ಮರಳಿದ ಹಿನ್ನೆಲೆ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.
ಬೆಳಗಾವಿಗೆ ಮರಳಿದ ಫೈಜಾ ಹೇಳಿದ್ದು….
ನಾವು ಉಕ್ರೇನ್ ಪಶ್ಚಿಮ ಭಾಗದಲ್ಲಿ ಇದ್ವಿ ಅಲ್ಲಿ ಅಷ್ಟೊಂದು ತೊಂದರೆ ಇರಲಿಲ್ಲ,ನಮ್ಮ ಭಾರತ ಸರ್ಕಾರ ಬಗ್ಗೆ ನನಗೆ ಹೆಮ್ಮೆ ಇದೆ,ಭಾರತೀಯ ರಾಯಭಾರ ಕಚೇರಿ, ಭಾರತ ಸರ್ಕಾರಕ್ಕೆ ಧನ್ಯವಾದ ಹೇಳುವೆ.
ನಾವು ವಾಪಾಸ್ ಆಗಿರುವುದು ಬಹಳ ಸಂತೋಷ ಆಗ್ತಿದೆ, ಇದಕ್ಕೆ ಕಾರಣವಾದ ಪ್ರಧಾನಿ ಮೋದಿ ಅವರಿಗೂ ಧನ್ಯವಾದ ಹೇಳುತ್ತೇನೆ. ಯುದ್ದ ಆರಂಭವಾದಗ ನಮಗೆ ಬಹಳ ಭಯ ಅನಿಸಿತ್ತು,ನಾನು ವೆಸ್ಟರ್ನ್ ಉಕ್ರೇನ್‌ದಲ್ಲಿದ್ದೆ ಅಲ್ಲಿ ಯುದ್ಧದ ಭೀತಿ ಇರಲಿಲ್ಲ,
ಏಕಾಏಕಿ ಯುದ್ದ ಆರಂಭವಾಗಿದ್ದನ್ನ ಕೇಳಿ ಶಾಕ್ ಆಯ್ತು, ಬೆಳಂ ಬೆಳಗ್ಗೆ ಐದು ಗಂಟೆಗೆ ಯುದ್ಧ ಆರಂಭವಾದ ಸುದ್ದಿ ತಿಳಿತು, ಯಾರು ಕೂಡ ರಷ್ಯಾ ಯುದ್ದ ಮಾಡುತ್ತೆ ಅಂತಾ ಊಹೆ ಮಾಡಿಕೊಂಡಿರಲಿಲ್ಲ
ಮೊದಲ ವಿಮಾನದಲ್ಲಿ ನಾನು ವಾಪಸ್ ಬಂದಿದ್ದಕ್ಕೆ ಬಹಳ ಖುಷಿಯಾಗ್ತಿದೆ.
ನಮ್ಮ ವಿಮಾನದಲ್ಲಿ ಹದಿನೈದು ಜನ ವಿದ್ಯಾರ್ಥಿಗಳು ವಾಪಸ್ ಬಂದ್ರು,ಮುಂಬೈನಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ನಮ್ಮನ್ನ ಸ್ವಾಗತಿಸಿದ್ರು, ಖಾರ್ಕೀವ್‌ನಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿದೆ ಖಾರ್ಕೀವ್, ಕೀವ್‌ನಲ್ಲಿದ್ದ ವಿದ್ಯಾರ್ಥಿಗಳನ್ನು ಆದಷ್ಟು ಬೇಗ ಕರೆಯಸಿಕೊಳ್ಳಬೇಕು
ಎಟಿಎಂಗಳಲ್ಲಿ ಹಣ ಸಿಗುತ್ತಿಲ್ಲ, ಊಟಕ್ಕೂ ಅವರಿಗೆ ತುಂಬಾ ತೊಂದರೆ ಆಗ್ತಿದೆ, ಎಂದು ಬೆಳಗಾವಿಗೆ ಮರಳಿದ ಪೈಜಾ ಯುದ್ದಪೀಡಿತ ಉಕ್ರೇನ್ ಪರಿಸ್ಥಿತಿಯನ್ನು ಮಾದ್ಯಮಗಳ ಎದುರು ಹೇಳಿಕೊಂಡಿದ್ದಾಳೆ…