ಬೆಳಗಾವಿಯಲ್ಲಿ ರೈತ ಕ್ರಾಂತಿ..ಪ್ರತಿಯೊಬ್ಬ ರೈತನಿಂದ ಐವತ್ತು ರೂ ವಸೂಲಿ

 

ಬೆಳಗಾವಿ-

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ದ ಬೆಳಗಾವಿಯಲ್ಲಿ ರೈತರು ಬೀದಿಗಿಳಿದಿದ್ದಾರೆ. ತಮ್ಮ ಸಾಲವನ್ನ ಸಂಪೂರ್ಣ ಮನ್ನಾ ಮಾಡುವಂತೆ ಆಗ್ರಹಿಸಿ ವಿನೂತನ ಅರ್ಜಿ ಚಳುವಳಿಯನ್ನ ನಡೆಸಿದ್ರು. ೨೫ ಸಾವಿರಕ್ಕೂ ಹೆಚ್ಚು ರೈತರು ತಮ್ಮ ಸಾಲ ಮನ್ನಾ ಮಾಡುವಂತೆ ಪ್ರತ್ಯೇಕ ಅರ್ಜಿಗಳನ್ನ ಸಲ್ಲಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ‌ ನೀಡಿದರು.

ಬೆಳಗಾವಿಯಲ್ಲಿಂದು ರೈತರು ತಮ್ಮ ಸಾಲ ಮನ್ನಾಗೆ ಆಗ್ರಹಿಸಿ ವಿನೂತನ ಅರ್ಜಿ ಚಳುವಳಿ ನಡೆಸಿದ್ರು. ನಗರದ ಸರ್ದಾರ್ ಮೈದಾನಲ್ಲಿ ಜಮಾಯಿಸಿದ ಬೆಳಗಾವಿ ಜಿಲ್ಲೆಯ ಹತ್ತು ಸಾವಿರಕ್ಕೂ ಹೆಚ್ಚು ರೈತರು ಇಂದು ಬೀದಿಗಿಳಿದು ರಾಜ್ಯ ಮಾತ್ತು ಕೇಂದ್ರ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ರು. ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೄತ್ವದಲ್ಲಿ ಸಾವಿರಾರು ರೈತರು ಕೇಂದ್ರ ಸರ್ಕಾರಕ್ಕೆ ಸಾಲ ಮನ್ನಾ ಮಾಡುವಂತೆ ಪ್ರತ್ಯೇಕ ಅರ್ಜಿಗಳನ್ನ ಸಲ್ಲಿಸಿದ್ರು. ಇನ್ನು ಸಾವಿರಾರು ಸಂಖ್ಯೆಯಲ್ಲಿ ರೈತರು ಸೇರಿದ್ದರಿಂದ ರೈತರ ಭಾವನೆಗಳನ್ನ ಅರಿತುಕೊಂಡ ಜಿಲ್ಲಾಡಳಿತ ಮತ್ತು ಸ್ವತಹ ಜಿಲ್ಲಾಧಿಕಾರಿ ಜಿಯಾವುಲ್ಲಾ ಸರ್ದಾರ್ ಮೈದಾನದಲ್ಲಿಯೇ 20ಕ್ಕೂ ಹೆಚ್ಚು ಟೆಬಲ್ ಗಳನ್ನ ಇಟ್ಟು, ರೈತರ ಅರ್ಜಿಗಳನ್ನ ಸ್ವೀಕರಿಸಿದ್ರು.
ಇನ್ನು ಸರ್ದಾರ್ ಮೈದಾನಲ್ಲಿ ಜಮಾಯಿಸಿದ ಸಾವಿರಾರು ರೈತರು ಅಲ್ಲಿಂದ ಚನ್ನಮ್ಮ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ದಿಕ್ಕಾರಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಇನ್ನು ಸಾಲ ಮನ್ನಾ ಕುರಿತು ಮಾತನಾಡಿದ ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ್, ಕೇಂದ್ರ ಸರ್ಕಾರ ಕೂಡಲೇ ರೈತರ ಸಂಪೂರ್ಣ ಸಾಲವನ್ನ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ರು. ಒಂದು ವೇಳೆ ಸರ್ಕಾರ ನವ್ಹಂಬರ್ 20ನೇ ತಾರೀಖಿನ ಒಳಗೆ ರೈತರ ಸಾಲ ಮನ್ನಾಗೆ ಮುಂದಾಗಲಿಲ್ಲಾ ಅಂದ್ರೆ ಇದೇ ಸಂಖ್ಯೆಯಲ್ಲಿ ನಾವು ದಿಲ್ಲಿ ಚಲೋ ಕಾರ್ಯಕ್ರಮ ಹಮ್ಮಿಕೊಂಡು ಸಂಸತ್ ಅಧಿವೇಶದ ವೇಳೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ರು. ಆದ್ರೆ ಕೋಡಿ ಹಳ್ಳಿ ಚಂದ್ರಶೇಖರ್ ಬಂದ ರೈತರಿಂದ ತಲಾ ೫೦ತ್ತು ರೂಪಾಯಿ ಹಣ ವಸೂಲಿ ಮಾಡುವುದು ಕೆಲ ರೈತರಲ್ಲಿ ಆಕ್ರೋಶಕ್ಕೂ ಕಾರಣವಾಯಿತು.

ಇದೇ ವೇಳೆ ರೈತರ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿಯಾವುಲ್ಲಾ ರೈತರ ಸಮಸ್ಯೆಗಳಿಗೆ ಜಿಲ್ಲಾಡಳಿತ ಸ್ಪಂದಿಸುತ್ತಿದೆ. ತಮ್ಮ ಮನವಿಯನ್ನೂ ಕೂಡ ಸರ್ಕಾರದ ಗಮನಕ್ಕೆ ತರುವುದಾಗಿ ತಿಳಿಸಿದ್ರು.

ಒಟ್ನಲ್ಲಿ ಬೆಳಗಾವಿಯ ಚಳಿಗಾಲದ ಅಧಿವೇಶನ ಸಮೀಪಿಸುತ್ತಿದ್ದಂತೆ ರೈತ ಹೋರಾಟಗಳು ಗರಿಗೇದರುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಸರ್ಕಾರಕ್ಕೂ ರೈತರ ಹೋರಾಟದ ಬಿಸಿ ತಟ್ಟಲಿದೆ. ಇನ್ನಾದ್ರು ಕೇಂದ್ರ ಸರ್ಕಾರ ರೈತರ ನೆರವಿಗೆ  ಧಾವಿಸಲಿ ಅನ್ನೊದು ನಮ್ಮ ಕಳಕಳಿ ಅಷ್ಟೇ

Check Also

ವಕ್ಫ್ ವಿವಾದ,ಇಂದು ಬೆಳಗಾವಿಯಲ್ಲಿ ಒಂದೇ ದಿನ ಪರ,ವಿರೋಧ ಧರಣಿ

ಬೆಳಗಾವಿ- ವಕ್ಫ್ ಬೋರ್ಡ್ ನಿಂದ ರೈತರಿಗೆ ಜಾರಿಯಾಗಿರುವ ನೋಟೀಸ್ ಗಳ ಕುರಿತು ರಾಜ್ಯಾದ್ಯಂತ ವಿವಾದ ಸೃಷ್ಠಿಯಾಗಿದ್ದು ಈ ಕುರಿತು ಇವತ್ತು …

Leave a Reply

Your email address will not be published. Required fields are marked *