Breaking News

ಖಾಸಗಿ ಆಸ್ಪತ್ರೆಗಳ ಮೇಲಿನ ನಿಯಂತ್ರಣ ವಿಧೇಯಕ ಮಂಡನೆಗೆ ನಿರ್ಧಾರ

ಬೆಳಗಾವಿ-
ಬೆಳಗಾವಿಯಲ್ಲಿ ಆರೋಗ್ಯ ಇಲಾಖೆಯ ವತಿಯಿಂದ ಇಂದ್ರಧನುಷ್ ಅಭಿಯಾನಕ್ಕೆ ಆರೋಗ್ಯ ಸಚಿವ ರಮೇಶಕುಮಾರರಿಂದ ಚಾಲನೆ ದೊರೆಯಿತು.
ನಗರದ ಬಿಮ್ಸ್ ಆವರಣದಲ್ಲಿ ಇಂದ್ರಧನುಷ್ ಅಭಿಯಾನ ಚಾಲನೆ ನೀಡಿದ ಸಚಿವರು
ಇಂದ್ರ ಧನುಷ್ ಅಭಿಯಾನದ ಐಇಸಿ,ಪ್ರಚಾರ ಸಾಮಗ್ರಿಗಳನ್ನು ಬಿಡುಗಡೆ ಮಾಡಿದ್ರು.
ಇಂದ್ರಧನುಷ್ ಲಸಿಕೆಯಲ್ಲಿ ಗರ್ಭಿಣಿಯರಿಗೆ ಟಿಟಿ ಲಸಿಕೆ.ಎರಡು ವರ್ಷದ ಮಕ್ಕಳಿಗೆ ಬಿಸಿಜಿ, ಪೊಲಿಯೋ ,ರುಬೆಲ್ಲಾ, ದಡಾರ ಪ್ರತ್ಯೇಕ ಲಸಿಕೆ ಹಾಕಬಹುದಾಗಿದೆ.
ಕಾರ್ಯಕ್ರಮದಲ್ಲಿ
ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್, ಶಾಸಕ ಫಿರೋಜ್ ಶೇಠ್, ಗಣೇಶ ಹುಕ್ಕೇರಿ
ಸೇರಿದಂತೆ ಹಲವು ಗಣ್ಯರು ಭಾಗಿದ್ದರು.
ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು
ಖಾಸಗಿ ಆಸ್ಪತ್ರೆಗಳ ಮೇಲಿನ ನಿಯಂತ್ರಣ ವಿಧೇಯಕ ವಿಚಾರಚಾಗಿ ಬೆಳಗಾವಿ ಅಧಿವೇಶನಕ್ಕೂ ಮುನ್ನ ಮಂಡಿಸಲಾಗುವುದು.
ಸಿಎಂ ಜೊತೆಗೆ ಚರ್ಚೆಸಿ ವಿಶೇಷ ಅಧಿವೇಶನಧಲ್ಲಿ ಮಂಡನೆ ಮಾಡಲಾಗುತ್ತದೆ.
ಒಂದುವೇಳೆ ವಿಶೇಷ ಅಧಿವೇಶನದಲ್ಲಿ ಕರೆಯಲು ಸಾಧ್ಯವಾಗದಿದ್ದರೆ.
ಮುಂದಿನ ದಿನ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಮಂಡನೆ ಮಾಡಲಾಗುವುದು ಎಂದರು. ಇನ್ನು
ವಿಪಕ್ಷ ನಾಯಕ ಈಶ್ವರಪ್ಪ ಮನೆ ಮನೆಗೆ ಕಾಂಗ್ರೆಸ ನಡಿಗೆ ಬಗ್ಗೆ ಟೀಕಿಸಿದ್ರು ಈ ಹೇಳಿಕೆಗೆ ಕಾರವಾಗಿ ಸಚಿವ ರಮೇಶಕುಮಾರ ಪ್ರತಿಕ್ರಿಯೆ ನೀಡಿ ಈಶ್ವರಪ್ಪ ದೊಡ್ಡವರು ನಾನು ಅಷ್ಟು ಎತ್ತರಕ್ಕೆ ಹೋಗಿಲ್ಲ. ನಾಲಿಗೆ ಎನ್ನುವುದು ಸಂಸ್ಕಾರ ತಿಳಿಸಿ ಕೊಡುತ್ತದೆ, ಭಾಷೆ ಬಳಸುವಾಗ ಎಚ್ಚರವಿರಬೇಕು. ನಾವು ನಾಯಕರು ದೇಶದ ಮಕ್ಕಳಿಗೆ ಮಾದರಿ ಇದ್ದಂತೆ
ನಮ್ಮ ಭಾಷೆ ನಮ್ಮ ಸಂಸ್ಕೃತಿಯನ್ನ ತಿಳಿಸುತ್ತದೆ‌. ಈಶ್ಚರಪ್ಪವರು ಹಾಗೇ ಇರಲಿ. ಇನ್ನ ವು ಮನೆ ಮನೆಗೆ ಹೋದಾಗ ಜನರು ನಮಗೆ ಓಡಿಸಲಿ ನಾವೇ ಜನರನ್ನ ಕ್ಷಮಿಸಿ ಅಂತಾ ಹೇಳ್ತಿವಿ ಅಷ್ಟೇ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದರು

ಔಷಧಿ ಮಳಿಗೆಗೆ ಶಾಲಿನಿ ರಜನೀಶ್ ಹಠಾತ್ ಭೇಟಿ

ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಶಾಲಿನಿ ರಜನೀಶ್ ಅವರು ಬಿಮ್ಸ್ ಬಳಿ ಇರುವ ಔಷಧ ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದರು.
ಮೆಡ್ ಪ್ಲಸ್ ಔಷಧ ಮಳಿಗೆಗೆ ಹಠಾತ್‌ ಭೇಟಿ ನೀಡಿದ ಅವರು, ವೈದ್ಯರ ಚೀಟಿ ಇಲ್ಲದೇ ಔಷಧ-ಗುಳಿಗೆ ಮಾರಾಟವನ್ನು ಪತ್ತೆ ಹಚ್ಚಿದರು.
ವೈದ್ಯರ ಚೀಟಿ ಇಲ್ಲದೇ ಮಾರಾಟ ಮಾಡುತ್ತಿದ್ದ ಅಂಗಡಿಯವರ ವಿರುದ್ಧ ಕ್ರ‌ಮ ಕೈಗೊಳ್ಳುವಂತೆ ಸಹಾಯಕ ಔಷಧ ಮಾರಾಟ ನಿಯಂತ್ರಕರಿಗೆ ಸೂಚನೆ ನೀಡಿದರು.

Check Also

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಕತ್ತಿ…

ಬೆಳಗಾವಿ-ಬೆಳಗಾವಿ ಜಿಲ್ಲೆಯ ಪಾಲಿಗೆ ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ.ಬೆಳಗಾವಿ ಡಿಸಿಸಿ ಬ್ಯಾಂಕ್ ನಲ್ಲಿ ನಡೆದ ಮಹತ್ತರ ಬೆಳವಣಿಗೆಯಿಂದಾಗಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.