ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಈಗ ರಿಯಲ್ ಪಾಲಿಟಿಕ್ಸ ಆರಂಭವಾಗಿದೆ ಸೇಡಿಗೆ ಸೇಡು ತೀರಿಸಿಕೊಳ್ಳಲು ಅವಮಾನ ಮಾಡಿದವರನ್ನು ಅವಮಾನ ಮಾಡಲು ಈಗ ಬಡ ರೈತರನ್ನು ಮುಂದೆ ಮಾಡಿ ಸಂಘರ್ಷ ಆರಂಭವಾಗಿರುವದು ರೈತ ಸಂಘರ್ಷ ಅಲ್ಲ ಇದೊಂದು ರಾಜಕೀಯ ಸಂಘರ್ಷ ಎನ್ನುವದು ಎಲ್ಲರಿಗೂ ಗೊತ್ತಾಗಿದೆ
ರೈತರು ಕಬ್ಬಿನ ಬಾಕಿ ಬಿಲ್ ಉಳಿಸಿಕೊಂಡ ಸಕ್ಕರೆ ಕಾರ್ಖಾನೆ ಮಾಲೀಕರ ವಿರುದ್ಧ ಸಮರ ಸಾರಿದ್ದಾರೆ ಬೆಳಗಾವಿ ಜಿಲ್ಲೆಯ ಬಹುತೇಕ ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ಉಳಿಸಿಕೊಂಡಿದ್ದರೂ ಜಿಲ್ಲಾ ಮಂತ್ರಿ ರಮೇಶ್ ಜಾರಕಿಹೊಳಿ ಅವರೊಬ್ಬರೇ ಟಾರ್ಗೆಟ್ ಆಗುತ್ತಿರುವದನ್ನು ಗಮನಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ರಿಯಲ್ ಪಾಲಿಟಿಕ್ಸ ಆರಂಭ ಆಗಿದೆ ಅನ್ನೋದಕ್ಕೆ ಇದೇ ಪ್ರತ್ಯಕ್ಷ ಸಾಕ್ಷಿಯಾಗಿದೆ
ಎಂ ಕೆ ಹುಬ್ಬಳ್ಳಿಯ ಮಲಪ್ರಭಾ ಸಕ್ಕರೆ ಕಾರ್ಖಾನೆ ಅತೀ ಹೆಚ್ಚು ಕಬ್ನಿನ ಬಿಲ್ ಬಾಕಿ ಉಳಿಸಿಕೊಂಡಿದೆ ಆದರೆ ಈ ಬಗ್ಗೆ ಯಾವುದೇ ಒಬ್ಬ ಚಳುವಳಿಗಾರ ಇನ್ನುವರೆಗೆ ಧ್ವನಿ ಎತ್ತಿಲ್ಲ ಕೇವಲ ಜಾರಕಿಹೊಳಿ ಅವರನ್ನೇ ಟಾರ್ಗೆಟ್ ಮಾಡುತ್ತಿರುವದರಿಂದ ಚಳುವಳಿಯಲ್ಲಿ ಪಾಲಿಟಿಕ್ಸ ದುರ್ವಾಸನೆ ಬಡೆಯುತ್ತಿದೆ
ರಮೇಶ್ ಜಾರಕಿಹೊಳಿ ಜಿಲ್ಲಾ ಮಂತ್ರಿಯಾಗಿ ರೈತರ ಬಿಲ್ ಬಾಕಿ ಉಳಿಸಿಕೊಂಡಿದ್ದರೆ ಮಹಾ ತಪ್ಪು ಆದರೆ ಉಳಿದ ಕಾರ್ಖಾನೆ ಮಾಲೀಕರನ್ನು ಕ್ಷಮಿಸಿ ಅವರ ಹೆಸರು ಪ್ರಸ್ತಾಪ ಮಾಡದೇ ಇರುವದು ಮಹಾತಪ್ಪು ರೈತ ನಾಯಕರು ಚಳುವಳಿ ಮಾಡುವಾಗ ಎಲ್ಲರನ್ನು ಟಾರ್ಗೆಟ್ ಮಾಡಬೇಕು ಎಲ್ಲ ಮಾಲೀಕರಿಂದ ನ್ಯಾಯ ಪಡೆಯಬೇಕು ಎನ್ನುವದು ಹೋರಾಟದ ಏಕಾಗ್ರತೆ ಮತ್ತು ಉದ್ದೇಶವನ್ನು ತಿಳಿಸುತ್ತದೆ
ಬೆಳಗಾವಿಯಲ್ಲಿ ನಡೆಯುತ್ತಿರುವದು ಕಬ್ಬಿನ ಹೋರಾಟ ಅಲ್ಲವೇ ಅಲ್ಲ ಇದೊಂದು ರಾಜಕೀಯ ಸಂಘರ್ಷ ಅಷ್ಡೇ ಇದಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ರೈತರ ವಿರೋಧಿಯಾಗಿದ್ದು ದೊಡ್ಡಪ್ರಶ್ನೆ
ಮುಖ್ಯಮಂತ್ರಿ ಕುಮಾರಸ್ವಾವಿ ಬೆಳಗಾವಿಗೆ ಬರ್ತೀನಿ ಅಂತಾ ಯಾರ ಹತ್ತಿರ ಹೇಳಿದ್ರು ?
ಬೆಳಗಾವಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಗಾವಿಗೆ ಬರ್ತಾರೆ ಅಂತ ಹಲವಾರು ಜನ ಸುದ್ಧಿ ಮಾಡಿದ್ರು ಆದರೆ ಮುಖ್ಯಮಂತ್ರಿ ಕುಮಾರಸ್ವಾಮಿ ಬೆಳಗಾವಿಗೆ ಬರ್ತೀನಿ ಅಂತಾ ಯಾರ ಮುಂದೆ ಹೇಳಿದ್ರು ಅವರ ಬೆಳಗಾವಿ ಕಾರ್ಯಕ್ರಮ ಪಿಕ್ಸ ಆಗಿಲ್ಲ ಅದು ರದ್ದಾಗುವ ಪ್ರಶ್ನೇಯೇ ಇಲ್ಲ ಅನ್ನೋದು ಜೆಡಿಎಸ್ ನಾಯಕರ ಪ್ರಶ್ನೆ