ಬೆಲಗಾವಿ-ನಗರದ ಟೆಂಗಿನಕರ ಗಲ್ಲಿಯಲ್ಲಿರುವ ಅಂಗಡಿಯಲ್ಲಿ ಸಿಲಿಂಡರ್ ಗ್ಯಾಸ್ ಸೋರಿಕೆಯಿಂದಾಗಿ ಚುರಮರಿ ಅಂಗಡಿಗೆ ಬೆಂಕಿ ತಗಲಿ ಅಪಾರ ಪ್ರಮಾನದ ಹಾನಿಯಾದ ಘಟನೆ ಬಾನುವಾರ ಮಧ್ಯಾಹ್ನ ನಡೆದಿದೆ
ರಾಕೇಶ ಪರಶರಾಮ ಶಹಾಪೂರಕರ ಅವರಿಗೆ ಸೇರಿದ ಅಶ್ವಿನಿ ಪರ್ಸನ್ ಅಂಗಡಿಯಲ್ಲಿ ಈ ಬೆಂಕಿ ಅವಘಡ ಸಂಬವಿಸಿದೆ,ಬೆಳಿಗ್ಗೆ ಅಂಗಡಿಯಲ್ಲಿ ಭಜಿ ಮಡಲು ಗ್ಯಾಸ್ ಹೊತ್ತಿಸಿದ ಸಂಧರ್ಭದಲ್ಲಿ ಗ್ಯಾಸ್ ಪೈಪ್ ಲೀಕೇಜ್ ಆಗಿ ಅಂಗಡಿಯಲ್ಲಿ ಬೆಂಕಿ ಹರಡಿದಾಗ ಅಂಡಿಯಲ್ಲಿದ್ದವರು ಹೊರ ಬಂದಿದ್ದಾರೆ
ನಂತರ ಭಂಡ ಧೈರ್ಯ ಪ್ರದರ್ಶಿಸಿದ ಅಂಗಡಿ ಮಾಲಿಕ ರಾಕೇಶ ಅಂಗಡಿಗೆ ನುಗ್ಗಿ ತುಂಬಿದ ಸಿಲಿಂಡರ್ ಅಂಗಡಿಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾದ ಕಾರಣ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ
ಸಿಲಿಂಡರ್ ಹೊರ ತೆಗೆದ ನಂತರ ಸೇರಿದ ಸಾರ್ವಜನಿಕರು ಪಕ್ಕದಲ್ಲಿದ್ದ ಪಾಲಿಕೆ ಬಾವಿಯಿಂದ ನೀರು ತೆಗೆದು ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ
