ಬೆಳಗಾವಿ- ಬಕ್ರೀದ ಹಬ್ಬದ ಸಂದರ್ಭದಲ್ಲಿ ಕುರಿ ಮತ್ತು ಆಡಿಗೆ ಎಲ್ಲಿಲ್ಲದ ಬೆಲೆ ಇದನ್ನು ಗಮನದಲ್ಲಿಟ್ಟುಕೊಂಡು ಗೋಕಾಕ ತಾಲೂಕಿನ ಪಿಜಿ ಮಲ್ಲಾಪೂರ ಗ್ರಾಮದ ರೈತನೊಬ್ಬ ಸಾಕಿದ ಕಮಲಾಪುರಿ ಜಾತಿಯ ಕುರಿಗೆ ಈಗ ಎಲ್ಲಿಲ್ಲದ ಬೇಡಿಕೆ ಕುರಿಯ ಮಾರಾಟಕ್ಕೆ ರೈತ ನಡೆಸಿದ ಬಹಿರಂಗ ಸವಾಲ್ ನಲ್ಲಿ ಕುರಿಗೆ ಒಂದು ಲಕ್ಷ 20 ಸಾವಿರ ರೂ ದರ ಫಿಕ್ಸ ಆದರೂ ಕುರಿ ಮಾರಾಟವಾಗಿಲ್ಲ
ಪಿಜಿ ಮಲ್ಲಾಪೂರ ಗ್ರಾಮದ ರೈತ ಸಾಕಿದ ಮಹಾ ಕುರಿಗೆ ಒಂದೂವರೆ ಲಕ್ಷ ದರ ಬಂದರೆ ಮಾತ್ರ ಕುರಿ ಮಾರಾಟ ಮಾಡುತ್ತೇನೆ ಅಂತಾರೆಮಲ್ಲಪ್ಪ ರಾಮಪ್ಪ ಚಲ್ಲಾಯಿ
ಹದಿನೇಳು ವರ್ಷದ ಹಿಂದೆ ಈ ರೈತ ಉತ್ತರಭಾರತದಿಂದ ಕಮಲಾಪುರಿಯ ಜಾತಿ ಕುರಿಯೊಂದನ್ನು ತಂದು ಸಾಕಿದ್ದ ಪ್ರತಿ ವರ್ಷ ಕರಿಯ ಮರಿಯನ್ನು ಸಾಕಿ ಪ್ರತಿ ವರ್ಷ ಮಾರಾಟ ಮಾಡುತ್ತಾನೆ ಈ ಹರಕೆಯ ಕುರಿ ಮೂರನೇಯ ಪೀಳಿಗೆಯದ್ದಾಗಿದೆ
ಈ ರೈತ ಕೇವಲ ಕುರಿ ಮಾತ್ರ ಮಾರಾಟ ಮಾಡುವದಿಲ್ಲ ಕುರಿಯ ವಿರ್ಯ ಮಾರಾಟ ಮಾಡಿ ಪ್ರತಿ ವರ್ಷ ಒಂದು ಲಕ್ಷ ರೂ ಗಳಿಸುತ್ತಾನೆ ಈಗ ಸದ್ಯಕ್ಕೆ ಈ ರೈತನ ಬಳಿ ಎರಡು ಕುರಿಗಳಿದ್ದು ಒಂದನ್ನು ಮಾರಾಟ ಮಾಡಿ ಇನ್ನೊಂದು ಕುರಿಯನ್ನು ವಂಶಾವಳಿ ಮುಂದುವರೆಸಲು ಸಾಕುತ್ತಿದ್ದಾನೆ
ಮುಸ್ಲೀಂ ಸಮಾಜದಲ್ಲಿ ಯಾರು ಬಲೀಷ್ಠವಾದ ಕುರಿಯನ್ನು ಬಳ ಕೊಡುತ್ತಾರೆಯೋ ಅವರಿಗೆ ಸಮಾಜದಲ್ಲಿ ವಿಶೇಷ ಗೌರವ ಹೀಗಾಗಿ ಮಹಾ ಕುರಿಯನ್ನು ಖರಿಧಿಸಿ ಮಹಾನ್ ರಾಗುವವರಿಗೆ ಕೊರತೆ ಇಲ್ಲ ಹೀಗಾಗಿ ಬಲೀ ಕಾ ಬಕ್ರಾ ಆದ್ರೂ ಬೆಲೆ ದುಬಾರಿ
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …