ಬೆಳಗಾವಿ:
ಕಳೆದ 15-20 ವರ್ಷಗಳಿಂದ ರಾಜ್ಯದಲ್ಲಿ ರೇಷನ್ ಕಾರ್ಡನಲ್ಲಿ ಅವ್ಯವಹಾರ ಹಾಗೂ ಸಮಸ್ಯೆಗಳು ನಡೆಯುತ್ತಿತ್ತು. ಇದರಿಂದ ಅರ್ಹ ಫಲಾನುಭವಿಗಳಿಗೆ ಸಿಗಬೇಕಾದ ರೇಷನ್ ಕಾರ್ಡ ಸಿಗದೇ ವಂಚಿತರಾಗುತ್ತಿದ್ದರು. ಇದನ್ನೆಲ್ಲ ಮನಗೊಂಡು ಎಪಿಎಲ್ ಕಾರ್ಡ ಪಡೆದುಕೊಳ್ಳಲು ರಾಜ್ಯ ಸರ್ಕಾರ ಅಂತರ್ಜಾಲದಲ್ಲಿ ಎಪಿಎಲ್ ಕಾರ್ಡ ಪಡೆದುಕೊಳ್ಳುವ ವಿನೂತನ ಯೋಜನೆಯನ್ನು ಸೋಮವಾರದಿಂದ ಪ್ರಾರಂಭಗೊಳ್ಳಲಿದೆ ಎಂದು ಆಹಾರ ಸಚಿವ ಯು.ಟಿ.ಖಾದರ ಹೇಳಿದರು.
ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಧಾರ್ ಕಾರ್ಡ ನಂಬರ್ ಹಾಕಿದರೇ ಸಾಕು ತಮ್ಮ ಎಪಿಎಲ್ ಕಾರ್ಡ ಬರುತ್ತದೆ. ಬೇಕಾದರೆ ನಕಲು ಪ್ರಿಂಟ್ ತೆಗೆದುಕೊಳ್ಳಬಹುದು. ಓರಿಜಿನಲ್ ಪಡೆದುಕೊಳ್ಳಲು ಆನ್‍ಲೈನಲ್ಲಿ ನಮೂದಿಸಬೇಕು. ನಂತರ ಸ್ಪೀಡ್ ಪೋಸ್ಟ ಮೂಲಕ 15 ದಿನದೊಳಗೆ ತಮ್ಮ ಮನೆಗೆ ಬರುತ್ತದೆ. ಕಾರ್ಡ ಬಂದಾಗ 100 ರು ಕೊಟ್ಟು ತೆಗೆದುಕೊಳ್ಳಬೇಕು. ಈ ಮೊದಲು ಅರ್ಜಿ ಸಲ್ಲಿಸಲು ಐಡಿ ಕಾರ್ಡ, ಮನೆ ನಂಬರ್, ವಿದ್ಯುತ್ ಬಿಲ್ ಸೇರಿದಂತೆ ಇತರೆ ದಾಖಲಾತಿಗಳನ್ನು ನೀಡಬೇಕಾಗಿತ್ತು. ಆದರೆ ಈಗ ಆಧಾರ್ ಕಾರ್ಡ ಇದ್ದರೇ ಸಾಕು. ಇಂತದ್ದೊಂದು ವಿನೂತನ ಯೋಜನೆ ಸರ್ಕಾರ ಜಾರಿಗೆ ತರಲಾಗಿದೆ ಎಂದು ಹೇಳಿದರು.
ಎಪಿಎಲ್ ನಂತೆ ಬಿಪಿಎಲ್ ಕಾರ್ಡನ್ನೂ ಆನ್‍ಲೈನ್ ಮೂಲಕ ಪಡೆದುಕೊಳ್ಳಲು ಯೋಜನೆ ಹಮ್ಮಿಕೊಳ್ಳಲಾಗಿತ್ತು. ಆದರೆ ಕಾರಣಾಂತರಗಳಿಂದ ಹದಿನೈದು ದಿನಗಳ ನಂತರ ಮುಂದೂಡಲಾಗಿದೆ. ಅದನ್ನೂ ಆನ್‍ಲೈನ್ ಮೂಲಕ ಪಡೆದುಕೊಳ್ಳಲು ಗ್ರಾಮ ಪಂಚಾಯಿತಿಯಲ್ಲಿ ಅರ್ಜಿ ಸಲ್ಲಿಸಿ ನಂತರ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸುತ್ತಾರೆ. ನಂತರ ಸತ್ಯವಾದರೆ ಸ್ಪೀಡ್‍ಪೋಸ್ಟ ಮೂಲಕ ಮನೆಗೆ ಬರುತ್ತದೆ. ನಂತರ 75 ರು ನೀಡಿ ಕಾರ್ಡ ಪಡೆದುಕೊಳ್ಳಬಹುದು ಎಂದು ಹೇಳಿದರು.
ರಾಜು ಸೇಠ್, ವಿನಯ ನಾವಲಗಟ್ಟಿ ರಾಜಾ ಸಲೀಂ ಖಾಶಿಮನವರ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.
———————————–
ಬೆಳಗಾವಿ:
ಪ್ರಧಾನಿ ನರೇಂದ್ರ ಮೋದಿ ಅವರು ನೋಟ್ ಬ್ಯಾನ್ ಮಾಡಿ ಐವತ್ತು ದಿನ ಕಳೆದ ನಂತರ ಮಾಡಿದ ಭಾಷಣ ಕೇವಲ ಚುನಾವಣೆ ಗಿಮಿಕ್ ಆಗಿತ್ತೇ ಹೊರತು ಜನರ ಭಾವನೆಗೆ ಸ್ಪಂದಿಸುವುದಾಗÀಲಿಲ್ಲ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ರವಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ನೋಟ್ ಬ್ಯಾನ್ ಮಾಡಿ ಐವತ್ತು ದಿನ ಕಳೆದಿವೆ ಆದರೆ ಸಮಸ್ಯೆ ಮಾತ್ರ ಬಗೆಹರಿಯಲಿಲ್ಲ. ಇನ್ನೂ ಹತ್ತರಿಂದ ಹದಿನೈದಿನ ಕಾಲಾವಕಾಶ ಕೇಳಬೇಕಾಗಿತ್ತು. ಆದರೆ ಅದನ್ನೂ ಮಾಡದೇ ಕೇವಲ ಭಾಷಣ ಮಾಡಿದ್ದಾರೆ. ಇದು ಕೇವಲ ಚುನಾವಣೆ ಗಿಮಿಕ್ ಅಷ್ಟೇ. ಜನರ ಭಾವನೆಯನ್ನು ಆಲಿಸದೇ ಸರ್ವಾಧಿಕಾರಿಯಂತೆ ವರ್ತಿಸಿ ಐದನೂರು ಹಾಗೂ ಒಂದು ಸಾವಿರ ರು. ನೋಟ್ ಬ್ಯಾನ್ ಮಾಡಿದ್ದಾರೆ ಎಂದು ಹೇಳಿದರು.
Check Also
ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??
ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …