Breaking News

ಕನ್ನಡ ನಾಡು- ನುಡಿಯ ಬಗ್ಗೆ ಅಭಿಮಾನವಿರಲಿ- ಶಾಂತಿನಾಥ ದಿಬ್ಬದ

ಬೆಳಗಾವಿ.ಜ.8: ಕನ್ನಡ ನಾಡು-ನುಡಿಯ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಿದರೆ ಮಾತ್ರ ಕನ್ನಡ ಭಾಷೆ ಬೆಳೆಯಲು ಸಾಧ್ಯ ಎಂದು ಸಾಹಿತಿ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ನಿವೃತ ಕುಲಸಚಿವ ಡಾ.ಶಾಂತಿನಾಥ ದಿಬ್ಬದ ಅವರು ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು.
ಬೆಳಗಾವಿಯ ಧರ್ಮನಾಥ ಭವನದಲ್ಲಿಂದು ಬೆಳಗಾವಿಯ ಧರ್ಮನಾಥ ಭವನದಲ್ಲಿಂದು ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಸಂಸ್ಥೆಯ ಶತಮಾನೋತ್ಸವ ಸಮಾರಂಭದ ಅಂಗವಾಗಿ ಹಮ್ಮಿಕೊಳ್ಳಲಾದ ಕನ್ನಡ ಜೈನ ಸಾಹಿತ್ಯ ಸಮ್ಮೇಳನಾಧ್ಯಕ್ಷರ ನುಡಿಗಳನ್ನಾಡಿದ ಅವರು, ಹಳೆಗನ್ನಡದ ಬಗ್ಗೆ ಇಂದಿನ ಜನಾಂಗಕ್ಕೆ ಹೆಚ್ಚಿನ ಮಾಹಿತಿ ಇಲ್ಲ. ಸರಳವಾದ ಕನ್ನಡ ಅಧ್ಯಯನ ಇಂದು ಎಲ್ಲರಿಗೂ ಅಗತ್ಯವಾಗಿದೆ. ಕನ್ನಡ ನಾಡು, ನುಡಿಯ ಬಗ್ಗೆ ಆಸಕ್ತಿ ಹೊಂದಿ ಭಾಷೆಯ ಬೆಳವಣಿಗೆಯಲ್ಲಿ ಎಲ್ಲರೂ ಸಹಕರಿಸಬೇಕಾಗಿದೆ ಎಂದು ಅವರು ಹೇಳಿದರು.
ಆದಿಕವಿ ಪಂಪನ ಕಾಲದಲ್ಲಿ ಸಂಸ್ಕøತ ಮತ್ತು ಪ್ರಾಕೃತ ಭಾಷೆಗಳೆರಡೂ ಸಹ ಚಾಲ್ತಿಯಲ್ಲಿದ್ದರೂ ಸಹ ಪಂಪ ಹಳೆಗನ್ನಡ ಮತ್ತು ದೇಶಿ ಭಾಷೆಯಾದ ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ರಚಿಸಿದನು.ಪಂಕ ರಚಿಸಿದ ಹಾಗೂ ಇನ್ನುಳಿದ ಸಾಹಿತಿಗಳು ರಚಿಸಿದ ಸಾಹಿತ್ಯ. ಕವನಗಳ ಬಗ್ಗೆ ನಿರಂತರ ಅಧ್ಯಯನಗಳು ಹಾಗೂ ಕಮ್ಮಟ ಕಾರ್ಯಕ್ರಮಗಳನ್ನು ನಡೆಸುವ ಕಾರ್ಯ ಆಗಬೇಕಾಗಿದೆ ಎಂದು ಅವರು ತಿಳಿಸಿದರು.
ಇಂದಿನ ಜಾಗತೀಕರಣದ ಬಗ್ಗೆ ನಾವು ಚಿಂತನೆ ಮಾಡುವ ಸಂದರ್ಭದಲ್ಲಿ ನಮ್ಮ ಸಂಸ್ಕøತಿ, ನಾಡು-ನುಡಿ ಭಾಷೆ .ಕವನ, ಕವಿತೆ, ಬಗ್ಗೆಯೂ ಚಿಂತನೆ ನಡೆಸಬೇಕು. ಕನ್ನಡ ಭಾಷೆಗೆ ಕೊಡುಗೆ ನೀಡಿದ ವಿದ್ವಾಂಸರ ಬಗ್ಗೆಯೂ ಅಧ್ಯಯನ ಮತ್ತು ಅವರ ಇತಿಹಾಸವನ್ನು ತಿಳಿದುಕೊಳ್ಳುವ ಕಾಳ ಇದೀಗ ಬಂದೊದಗಿದೆ. ಮುಂಬರುವ ದಿನಗಳಲ್ಲಿ ಆದಿ ಕವಿ ಪಂಪನ ಸಾಹಿತ್ಯ ಕುರಿತು ಚರ್ಚೆಗಳು, ವಿಚಾರ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗುವುದೆಂದು ಅವರು ತಿಳಿಸಿದರು.
ಸಮಾರಂಭದಲ್ಲಿ ದಕ್ಷಿಣ ಭಾರತ ಜೈನ ಸಭೆಯ ಅಧ್ಯಕ್ಷ ರಾವಸಾಹೇಬ ಪಾಟೀಲ ಅವರು ಮಾತನಾಡಿ, ಕನ್ನಡ ಜೈನ ಸಾಹಿತ್ಯ ಪರಿಷತ ಸ್ಥಾಪನೆಗೆ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು. ಇದಕ್ಕೆ ಶಾಂತಿನಾಥ ದಿಬ್ಬದ ಅವರು ನೇತೃತ್ವ ವಹಿಸಿಕೊಂಡು ಕಾರ್ಯಕ್ರಮ ಏರ್ಪಡಿಸಿದ್ದಲ್ಲಿ ತಮ್ಮ ಸಂಸ್ಥೆ ಸಹಕರಿಸಲು ಸಿದ್ದ ಎಂದು ಅವರು ತಿಳಿಸಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಹೊಂಬುಜ ಜೈನ ಮಠದ ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಆರ್ಶಿವಚನ ನೀಡಿ ಮಾತನಾಡಿದ ಅವರು, ಜೈನ ಸಾಹಿತಿಗಳು ಕನ್ನಡ ಸಾರಸ್ವತ ಲೊಕಕ್ಕೆ ತಮ್ಮ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ. ಜೈನ ಸಾಹಿತ್ಯಕರು ಹಾಗೂ ಸಮಾಜ ಈ ಮೊದಲಿನಿಂದಲೂ ಅಕ್ಷರಸ್ಥ ಸಮಾಜ ಎಂದು ಗುರುತಿಸಿಕೊಂಡಿದೆ. ಆದರೆ ಇತ್ತಿಚಿನ ದಿನಗಳಲ್ಲಿ ಸಾಹಿತ್ಯದ ಬಗ್ಗೆ ಅಧ್ಯಯನ ಮತ್ತು ಸಂಶೊಧನೆಗಳ ಕೊರತೆಯಿಂದಾಗಿ ಸಮಾಜ ಕ್ಷೀಣಿಸುತ್ತ ಹೊರಟಿದೆ. ಈ ಬಗ್ಗೆ ಚಿಂತನೆಗಳು ನಡೆಯಬೇಕಾಗಿದೆ ಎಂದು ಹೇಳಿದ ಅವರು ಇಂದು ನಡೆದ ಕನ್ನಡ ಜೈನ ಸಾಹಿತ್ಯ ಸಮ್ಮೇಳನ ಸಮಾಜದಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದ್ದು, ಪ್ರತಿ ಎರಡು ವರ್ಷಕ್ಕೊಮ್ಮೆ ಇಂತಹ ಸಾಹಿತ್ಯ ಸಮ್ಮೇಳನಗಳು ಜರುಗಲಿ ಎಂದು ಹಾರೈಸಿದರು.
ಸಮಾರಂಭದ ವೇದಿಕೆ ಮೇಲೆ ದಕ್ಷಿಣ ಭಾರತ ಜೈನ ಸಭೆಯ ಹಿರಿಯ ಉಪಾಧ್ಯಕ್ಷ ಡಿ.ಎ.ಪಾಟೀಲ, ಚೇರಮನ್ ಸಾಗರ ಚೌಗುಲೆ, ಸಹ ಖಜಾಂಚಿ ಎ.ಎ.ನೇಮಣ್ಣವರ, ಟ್ರಸ್ಟಿ ಅಶೋಕ ಜೈನ, ಮಾಣಿಕಬಾಗ ದಿಗಂಬರ ಜೈನ ಬೋರ್ಡಿಂಗ ಅಧ್ಯಕ್ಷ ಪುಷ್ಪದಂತ ದೊಡ್ಡಣವರ, ಉಪಾಧ್ಯಕ್ಷ ಕೀರ್ತಿಕುಮಾರ ಕಾಗವಾಡ, ಕಾರ್ಯದರ್ಶಿ ಬಾಹುಬಲಿ ಸಾವಂತ, ಉಪ ಕಾರ್ಯದರ್ಶಿ ಅಣ್ಣಾಸಾಹೇಬ ಉಪ್ಪಿನ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

ಕನ್ನಡ ಜೈನ ಸಾಹಿತ್ಯ ಸಮ್ಮೇಳನದ ನಿರ್ಣಯಗಳು:
1)ಮಿರ್ಜಿ ಅಣ್ಣಾರಾವ ಪ್ರತಿಷ್ಠಾನ ಸ್ಥಾಪನೆ ಕುರಿತು ಸರಕಾರ ಮಟ್ಟದಲ್ಲಿ ಪ್ರಯತ್ನ ಮಾಡುವುದು.
2) ಕನ್ನಡ ಜೈನ ಸಾಹಿತ್ಯ ಪರಿಷತ್ ಸ್ಥಾಪನೆ ಮಾಡುವ ಕುರಿತು ಕಾರ್ಯಸೂಚಿ ನಿರ್ಮಿಸಿ ಅನುಷ್ಠಾನಕ್ಕೆ ತರುವುದು.
3) ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ ಪದವಿ ನೀಡುವ ಸಂದರ್ಭದಲ್ಲಿ ಜೈನ ಸಮುದಾಯದ ವಿದ್ವಾಂಸರನ್ನು ಗಣನೆಗೆ ತೆಗೆದುಕೊಳ್ಳಬೇಕೆಂಬ ನಿರ್ಣಯ.

Check Also

ನಾಳೆ ಬೆಳಗಾವಿಯಲ್ಲಿ ಗಾಂಜಾವಾಲಾ, ಕೋಕೀಲಾ ಲೈವ್ ರಸಮಂಜರಿ….

ಕಿತ್ತೂರು ಉತ್ಸವ: ಅ.22 ರಂದು ಬೆಳಗಾವಿ ನಗರದಲ್ಲಿ ಕುನಾಲ್ ಗಾಂಜಾವಾಲಾ, ಸಾಧು ಕೋಕಿಲ ರಸಮಂಜರಿ ಬೆಳಗಾವಿ,-: ಕಿತ್ತೂರು ಉತ್ಸವ ಹಾಗೂ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.