Breaking News

ಭಾರತದ ಯುವ ಶಕ್ತಿ ಸಂಘಟಿತವಾಗಲಿ-ವಿಶ್ವನಾಥ ಪಾಟೀಲ

ಬೆಳಗಾವಿ-ಭಾರತದ ಯುವ ಶಕ್ತಿಯೇ ನವ ಭಾರತ ನಿರ್ಮಾಣದ ಬುನಾದಿಯಾಗಿದ್ದು ಯುವಕರು ದೇಶಾಭಿಮಾನದೊಂದಿಗೆ ಭಾರತೀಯ ಸಂಸ್ಕøತಿಯ ರಕ್ಷಣೆ ಮಾಡಬೇಕೆಂದು ಬೈಲಹೊಂಗಲ ಶಾಸಕ ವಿಶ್ವನಾಥ ಪಾಟೀಲ ಕರೆ ನೀಡಿದರು
ಬೆಳಗಾವಿ ನಗರದ ಜೀರಗೆ ಸಭಾಭವನದಲ್ಲಿ ಬಸವ ಸೈನ್ಯ ಸ್ವಾತಂತ್ರ್ಯೋತ್ವದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು ಸ್ವಾತಂತ್ರ್ಯೋತ್ವದ ಸಂಧರ್ಭದಲ್ಲಿ ನಾವೆಲ್ಲರೂ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸಬೇಕು ಅವರ ತ್ಯಾಗ ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ ಎಂದರು
ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಾ ರವಿ ಪಾಟೀಲ ಭಾರತ ದೇಶ ಎಲ್ಲ ರಂಗಗಳಲ್ಲಿ ಬೆಳೆಯುತ್ತಿದೆ ಬಾರತೀಯ ಸಂಸ್ಕøತಿಗೆ ಇಡೀ ಜಗತ್ತು ಆಕರ್ಶಿತವಾಗಿದೆ ವಿವಿಧತೆಯಲ್ಲಿ ಏಕತೆ ಸಾರುವ ಭಾರತ ಪ್ರಬಲ ಪ್ರಜಾಪ್ರಭುತ್ವ ದೇಶವಾಗಿ ಬೆಳೆದು ಆರ್ಥಿಕವಾಗಿಯೂ ಬಲಾಡ್ಯವಾಗುತ್ತದೆ ಯುವಕರು ಸ್ವಾವಲಂಬಿಗಳಾಗಬೇಕು ಸರ್ಕಾರಿ ಊದ್ಯೋಗಕ್ಕಾಗಿ ಕಾಯದೇ ಸ್ವ ಉದ್ಯೋಗ ಮಾಡಿದರೆ ದೇಶ ಅತೀ ವೇಗದಿಂದ ಬೆಳೆಯಲು ಸಾದ್ಯ ಎಂದರು
ರಾಜ್ಯ ಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ ಪ್ರದಾನಿ ನರೇಂದ್ರ ಮೋದಿ ಆಡಳಿತ ದೇಶದಲ್ಲಿ ಹೊಸ ಸಂಚಲನ ಮೂಡಿಸಿದೆ ಮೋದಿ ಅವರ ಕಾರ್ಯಗಳು ದೇಶಾಭಿಮಾನಕ್ಕೆ ಸ್ಪೂರ್ತಿಯಾಗಿವೆ ಭಾರತ ಈಗ ಜಾಗತಿಕ ಭೂಪಟದಲ್ಲಿ ವಿಶೇಷವಾದ ಸ್ಥಾನ ಗಿಟ್ಟಿಸಿಕೊಂಡಿದೆ ಇಲ್ಲಿಯ ಸಂಸ್ಕøತಿ ಏಕತೆ ಭಾರತದ ಒಕ್ಕೂಟದ ವ್ಯೆವಸ್ಥೆಯನ್ನು ಗಟ್ಟಿಗೊಳಿಸಿದ್ದು ಹೆಮ್ಮೆಯ ಸಂಗತಿಯಾಗಿದೆ ಎಂದರು
ಬಸವ ಸೈನ್ಯ ಸ್ವಾತಂತ್ರ್ಯೋತ್ವದ ಅಂಗವಾಗಿ ಸಂಸ್ಕøತಿಕ ಕಾರ್ಯಕ್ರಮಗಳನ್ನು ನಡೆಸುವದರ ಜೊತೆಗೆ ರಂಗೋಲಿ ಸ್ಪರ್ದೆ,ಚಿತ್ರಕಲಾಸ್ಪರ್ದೆಹಮ್ಮಿಕೊಳ್ಳಲಾಗಿತ್ತು.
ಗುರು ಕಾರುಣ್ಯ ನಾಟ್ಯ ಶಾಲೆ ವತಿಯಿಂದ ಆಕರ್ಷಕ ಭರತ ನಾಟ್ಯ ನಡೆಯಿತು ಮಹೇಶ್ವರಿ ಅಂದ ಮಕ್ಕಳ ಶಾಲೆಯ ವಿಧ್ಯಾರ್ಥಿಗಳು ಪ್ರಸ್ತುತಪಡಿಸಿದ ವಂದೇ ಮಾತರಂ ಗೀತೆ ಎಲ್ಲರ ಮೈಮನ ರೋಮಾಂಚನಗೊಳಿಸಿತು
ನೃತ್ಯ ಸ್ಪರ್ದೆ,ಸೇರಿದಂತೆ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಪ್ರಭಾಕರ ಕೋರೆ ಅವರು ಬಹುಮಾನ ವಿತರಿಸಿದರು
ಹೈದ್ರಾಬಾದಿನ ಪರಶರಾಮ ನಾಯಿಕ,ಶಿವನಗೌಡಾ ಪಾಟೀಲ,ಮಂಗಳಾ ಮೆಟಗುಡ್ ಶಂಕರ ಗುಡುಸ ಸುರೇಶ ಖಿರಾಯಿ ರುದ್ರಣ್ಣ ಚಂದರಗಿ ಮೊದಲಾದವರು ಉಪಸ್ಥಿತರಿದ್ದರು ಸಿದ್ಧರಾಮ ಮಹಾಸ್ವಾಮಿಗಳು ಹಾಗು ಗುರುಸಿದ್ಧ ಮಹಾಸ್ವಾಮಿಗಳು ಸಾನಿದ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮೇಯರ್ ಸಿದ್ಧನಗೌಡಾ ಪಾಟೀಲ ಡಾ ಭೀಮರಾವ ಗಸ್ತಿ ಅವರನ್ನು ಸತ್ಕರಿಸಲಾಯಿತು
ಆಂದ್ರ ಪ್ರದೇಶದಲ್ಲಿ ನಕ್ಸಲರನ್ನು ಪರಿವರ್ತಿಸಿ ಅಪಾರ ಮೆಚ್ಚುಗೆ ಗಳಿಸಿರುವ ಪರಶರಾಮ ನಾಯಿಕ ಅವರನ್ನು ವಿಶೇಷವಾದ ಕಾಣಿಕೆ ನೀಡಿ ಗೌರವಿಸಲಾಯಿತು

Check Also

ಜಿಲ್ಲೆಯಲ್ಲಿ ಸುರಿದ ಮೊದಲ ಮಳೆಗೆ ಮೊದಲ ಬಲಿ…

ಬೆಳಗಾವಿ- ಸವದತ್ತಿಯಲ್ಲಿ ಧಾರಾಕಾರ ಮಳೆ ಸುರಿದಿದ್ದು ಸಿಡಿಲು ಬಡಿದು ಬೈಕ್ ಸವಾರನೊಬ್ಬ ಸ್ಥಳದಲ್ಲಿಯೇ ಮೃತ ಪಟ್ಟಿದ್ದು ಮಹಿಳೆಯೊಬ್ಬಳು ಗಂಭೀರವಾಗಿ ಗಾಯಗೊಂಡ …

Leave a Reply

Your email address will not be published. Required fields are marked *