*ಬೆಳಗಾವಿಯಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಕ್ಕಿ; ಸ್ನೇಹಿತರಿಬ್ಬರು ದುರ್ಮರಣ*
ಬೆಳಗಾವಿ: ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಡಿಫ್ಕ್ಕಿರೆ ಹೊಡೆದ ಪರಿಣಾಮ ಆಪ್ತಸ್ನೇಹಿತರಿಬ್ಬರು ಸಾವನ್ನಪ್ಪಿದ ಘಟನೆ ತಾಲೂಕಿನ ಬಾಳೇಕುಂದ್ರಿಯ ಪಂತ ನಗರದಲ್ಲಿ ನಡೆದಿದೆ.
ತಾಲೂಕಿನ ಸುಳೇಭಾವಿ ಗ್ರಾಮದ ಸೋಮಯ್ಯ ಪ್ರಭು ಖವಾಶಿ (22) ಹಾಗೂ ಮೂಲತಃ ಕಿತ್ತೂರು ತಾಲೂಕಿನ ಶಿವನೂರು ಗ್ರಾಮದ ಸದ್ಯ ಸುಳೇಭಾವಿ ನಿವಾಸಿ ವಿಠ್ಠಲ ಗಣಪತಿ ಡವಳಿ(22) ಎಂಬ ಇಬ್ಬರು ಸ್ನೇಹಿತರು ಸಾವನ್ನಪ್ಪಿದ್ದಾರೆ.
ಮೃತ ಯುವಕರು ಬೆಳಗಾವಿಯಿಂದ ಸುಳೇಭಾವಿ ಕಡೆಗೆ ಬರುವಾಗ ಎದುರಿನಿಂದ ಟಿಪ್ಪರ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಟಿಪ್ಪರ್ ಕೆಳಗೆ ಸಿಕ್ಕಿ ಹಾಕಿಕೊಂಡಿತ್ತು. ವಿಠ್ಠಲ ಡವಳಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರೆ ಆತನ ಸ್ನೇಹಿತ ಸೋಮಯ್ಯ ಗಂಭೀರ ಗಾಯಗೊಂಡಿದ್ದನು.ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.ಆದ್ರೆ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಈಕುರಿತು ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ