ಬೆಳಗಾವಿ-ನಗರ ಪೋಲಿಸ್ ಇಲಾಖೆ ಈ ಬಾರಿಯ ಗಣೇಶ ವಿಸರ್ಜನಾ ಮಾರ್ಗದ ಕರಿತು ಚರ್ಚಿಸಲು ನಗರದ ಗಣೇಶ ಮಹಾಮಂಡಳದ ಜೊತೆ ಸಭೆ ನಡೆಸಿ ಮಾರ್ಗದ ಕುರಿತು ಚರ್ಚೆ ನಡೆಸಿತು,
ಸಭೆಯಲ್ಲಿ ಶಾಸಕ ಸಂಬಾಜಿ ಪಾಟೀಲ ಸೇರಿದಂತೆ ಗಣೇಶ ಮಂಡಳಗಳ ನೂರಾರು ಜನ ಭಾಗವಸಿದ್ದರು ಸಭೆಯಲ್ಲಿ ಮಾತನಾಡಿದ ಹಲವಾರು ಜನ ನಾಯಕರು ಸಂಪ್ರದಾಯಿಕ ಮಾರ್ಗವನ್ನೇ ನಿಗದಿ ಮಾಡಬೇಕೆಂದು ಒತ್ತಾಯಿಸಿದರು
ನಗರ ಪೋಲಿಸ್ ಆಯುಕ್ತರು ಮಾತನಾಡಿ ಕಪಿಲೇಶ್ವರ ರಸ್ತೆಯಲ್ಲಿ ರೆಲ್ವೆ ಮೆಲ್ಸೆತುವೆ ಕಾಮಗಾರಿ ನಡೆಯುತ್ತಿದೆ ಹೀಗಾಗಿ ಈ ಬಾರಿ ಗಣೇಶ ವಿಸರ್ಜನೆ ಮೆರವಣಿಗೆ ಹುತಾತ್ಮ ವೃತ್ತದಿಂದ ಆರಂಭವಾಗಿ ಸಮಾದೇವಿ ಗಲ್ಲಿ ಈಂಡಿ ಚೌಕ ಧಂವೀರ ಸಂಬಾಜಿ ವೃತ್ತ ರಾಮಲಿಂಗ ಖಿಂಡ ಗಲ್ಲಿ ಹೆಮು ಕಲಾನಿ ಚೌಕ ಮೂಲಕ ಸಂಚರಿಸಿ ಅಂಬಾ ಭವನ ಮೂಲಕ ಹಾಯ್ದು ಗೋವಾ ವೇಸ್ ಮೂಲಕ ಕಪಿಲೇಶ್ವರ ಹೊಂಡ ತಲುಪುತ್ತದೆ ಎಂದು ಹೇಳಿದಾಗ ಸಭೆಯಲ್ಲಿ ಗುಸು ಗುಸು ಆರಂಭವಾಯಿತು
ಈ ಸಂಧರ್ಭದಲ್ಲಿ ಮಾತನಾಡಿದ ಶಾಸಕ ಸಂಬಾಜಿ ಪಾಟೀಲ ಇದೇ ಅಂತಿಮ ಮಾರ್ಗ ಅಲ್ಲ ಇನ್ನೊಂದು ಬಾರಿ ಚರ್ಚೆ ಮಾಡೋಣ ಎಂದು ಬೀಸುವ ದೊಣ್ಣೆಯನ್ನು ತಪ್ಪಿಸಿದರು
ಸಭೆಯಲ್ಲಿ ನಗರದ ಎಲ್ಲ ಪೋಲಿಸ್ ಅಧಿಕಾರಿಗಳು ಊಪಸ್ಥಿತರಿದ್ದರು

The Ganesha idols immersion at Kapileshwar Honda in Belgaum on Wednesday. KPN