ಬೆಳಗಾವಿ-ಕ್ರಿಕೆಟ್ ಟೂರ್ನಾಮೆಂಟ್ ಇರಲಿ ಅಥವಾ ಇನ್ಯಾವುದೇ ಸ್ಪರ್ದೆ ಇರಲಿ, ಒಂದು ಲಕ್ಷ,ಎರಡು ಲಕ್ಷ,ಐದು ಲಕ್ಷ,ಹತ್ತು ಲಕ್ಷ ಹನ್ನೊಂದು ಲಕ್ಷ ರೂ ವರೆಗೆ ಬಹುಮಾನ ಇಟ್ಟಿದ್ದನ್ನು,ಕೊಟ್ಟಿದ್ದನ್ನು ನಾವು ಕೇಳಿದ್ದೇವೆ,ನೋಡಿದ್ದೇವೆ.ಆದ್ರೆ ಬೆಳಗಾವಿ ಜಿಲ್ಲೆಯ ಅಪ್ಪ ಮಗ, ಈ ವಿಚಾರದಲ್ಲಿ ಎಲ್ಲ ರಿಕಾರ್ಡ್ ಗಳನ್ನು ಬ್ರೇಕ್ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹಿರಿಯ ನಾಯಕ, ವರ್ಕರ್, ಮಾಜಿ ಮಂತ್ರಿ,ಹಾಲಿ ವಿಧಾನ ಪರಿಷತ್ತಿನ ಸದಸ್ಯ, ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ,ಬೆಳಗಾವಿ ಜಿಲ್ಲೆಯ ಎಲ್ಲರ ಅಚ್ಚುಮೆಚ್ಚಿನ ಮೀಸೆ ಮಾವ, ಪ್ರಕಾಶ್ ಹುಕ್ಕೇರಿ ಅವರ ಜನುಮ ದಿನದ ನಿಮಿತ್ಯ ಎತ್ತಿನಗಾಡಿ ಓಡಿಸುವ ಸ್ಪರ್ದೆಯನ್ನು ಆಯೋಜಿಸಿದ್ದು ಈ ಸ್ಪರ್ದೆಯಲ್ಲಿ ವಿಜೆತರಾದವರಿಗೆ ಬರೊಬ್ಬರಿ 51 ಲಕ್ಷ ರೂ ಬಹುಮಾನ ನೀಡುವ ಮೂಲಕ,ಶಾಸಕ ಗಣೇಶ್ ಹುಕ್ಕೇರಿ ಹೊಸ ದಾಖಲೆ ಮಾಡಿದ್ದಾರೆ.
ಅಂತರರಾಜ್ಯ ಭವ್ಯ ಎತ್ತಿನಗಾಡಿ ಓಡಿಸುವ ಈ ಸ್ಪರ್ದೆ ಮಾರ್ಚ್ 5 ರಂದು ಮಧ್ಯಾಹ್ನ 3 ಗಂಟೆಗೆ ಚಿಕ್ಕೋಡಿಯ ಎಕ್ಸಂಬಾ ಪಟ್ಟಣದ ಮೈದಾನದಲ್ಲಿ ನಡೆಯಲಿದೆ. ಈ ಸ್ಪರ್ದೆಯ ಟೈಟಲ್ ಸಾಹುಕಾರ್ ಶರ್ಯತ್ತು. ಈ ಸ್ಪರ್ದೆಯಲ್ಲಿ ವಿಜೇತರಾದವರಿಗೆ ಒಟ್ಟು 51 ಲಕ್ಷ ರೂ ಬಹುಮಾನ ನೀಡುವ ಮೂಲಕ ಪ್ರಕಾಶ್ ಹುಕ್ಕೇರಿ,ಮತ್ತು ಗಣೇಶ್ ಹುಕ್ಕೇರಿ ಅವರು ರಿಕಾರ್ಡ್ ಬ್ರೇಕ್ ಮಾಡಿದ್ದಾರೆ.