ಬೆಳಗಾವಿ- ಮಹಾಮಾರಿ ಕೊರೋನಾ ಬಂದಾಗಿನಿಂದ ಬೆಳಗಾವಿ ಜಿಲ್ಲಾ ಆಸ್ಪತ್ರೆ ಕೋವೀಡ್ ಆಸ್ಪತ್ರೆಯಾಗಿರುವ ಈ ದವಾಖಾನೆಯಲ್ಲಿ ಓಪಿಡಿ ಬಂದ್ ಆಗಿದೆ ಹೀಗಾಗಿ ಈ ಆಸ್ಪತ್ರೆಯಲ್ಲಿ ಸಾಮಾನ್ಯ ರೋಗಿಗಳು ಚಿಕಿತ್ಸೆಗಾಗಿ ಪರದಾಡುವ ಪರಿಸ್ಥಿತಿ ಎದುರಾಗಿದೆ.
ನಿನ್ನೆ ರಾತ್ರಿ ಜಿಲ್ಲಾ ಆಸ್ಪತ್ರೆಯಲ್ಲಿ ,ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳಿಗೆ ಛೀ..ಥೂ ಎನ್ನುವ ,ಭೀಮ್ಸ್ ಡೈರೆಕ್ಟರ್ ಮುಖದ ಮೇಲೆ ಉಗುಳುವ,ಜಿಲ್ಲಾಧಿಕಾರಿಗಳಿಗಳೇ ನಿಮಗೆ ಹೃದಯ ಇದೆಯಾ…? ಎಂದು ಪ್ರಶ್ನೆ ಮಾಡುವಂತಹ ಕರಾಳ ಘಟನೆಯೊಂದು ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನಡೆದಿದೆ…
ನಿನ್ನೆ ರಾತ್ರಿ ಗರ್ಭಿಣಿ ಮಹಿಳೆಯೊಬ್ಬಳು ಹೆರಿಗೆಗಾಗಿ ಜಿಲ್ಲಾ ಆಸ್ಪತ್ರೆಗೆ ಬರುತ್ತಾಳೆ ,ಭೀಮ್ಸ್ ಆಸ್ಪತ್ರೆಯ ವೈದ್ಯರು ಇದು ಈ ಮಹಿಳೆಗೆ ಇದು ಕೋವೀಡ್ ಆಸ್ಪತ್ರೆ ಬೇರೆ ಆಸ್ಪತ್ರೆಗೆ ಹೋಗಮ್ಮಾ ಅಂತಾ ಹೇಳ್ತಾರೆ,ಈಗ ಮದ್ಯರಾತ್ರಿ ಯಾರು ನನ್ನನ್ನು ತಗೋತಾರೆ ನನಗೆ ಪ್ರಸವ ವೇದನೆ ಆಗುತ್ತಿದೆ.ನನ್ನ ಹೆರಿಗೆ ಮಾಡಿಸಿ ಎಂದು ಕೈಕಾಲು ಮುಗಿದರೂ ಕಸಾಯಿಖಾನೆ ಆಗಿರುವ ಈ ದವಾಖಾನೆಯ ವೈದ್ಯರು ಗರ್ಭಿಣಿಯ ಮೇಲೆ ಕರುಣೆ ತೋರಲಿಲ್ಲ…
ಭೀಮ್ಸ್ ಆಸ್ಪತ್ರೆಯಲ್ಲಿ ಖಾಸಗಿ, ಅಂಬ್ಯುಲೆನ್ಸ್ ಸೇವೆ ಒದಗಿಸುತ್ತಿರುವ ಕರವೇ ಮುಖಂಡ ಗಣೇಶ್ ರೋಕಡೆ ಅವರಿಗೆ ಗರ್ಭಿಣಿ ಮಹಿಳೆಯ ವಿಷಯ ಗೊತ್ತಾದ ಬಳಿಕ ,ಗಣೇಶ್ ರೋಕಡೆ ಈ ಗರ್ಭಿಣಿ ಮಹಿಳೆಯ ನೆರವಿಗೆ ಧಾವಿಸಿದ್ದಾರೆ,ಬೆಳಗಾವಿಯ ನವಜೀವನ್ ಆಸ್ಪತ್ರೆಗೆ ಸಂಪರ್ಕಿಸಿ ವಿಷಯ ತಿಳಿದ್ದಾರೆ,ಬಡ ಗರ್ಭಿಣಿಯ ಪರಿಸ್ಥಿತಿ ತಿಳಿದುಕೊಂಡ ಖಾಸಗಿ ಆಸ್ಪತ್ರೆ ವೈದ್ಯರು ಕರುಣೆ ತೋರಿ ಮಹಿಳೆಯ ಹೆರಿಗೆ ಮಾಡಿಸಿದ್ದಾರೆ,ಮದ್ಯರಾತ್ರಿ ಈ ಗರ್ಭಿಣಿಯ ಹೆರಿಗೆಗೆ ರಕ್ತ ಬೇಕಾಗಿತ್ತು ,ಗಣೇಶ್ ರೋಕಡೆ ಅಕ್ಷರಶಃ ಆ ಗರ್ಭಿಣಿಯ ಅಣ್ಣನಾಗಿ ರಕ್ತದ ವ್ಯೆವಸ್ಥೆ ಮಾಡಿದ್ದಾರೆ ,ಈ ಮೊದಲು ಮೂರು ಹೆಣ್ಣು ಪಡೆದಿದ್ದ ಆ ಮಹಾತಾಯಿ ಮದ್ಯರಾತ್ರಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ .
ಬೆಳಗಾವಿ ನವಜೀವನ್ ಆಸ್ಪತ್ರೆ ಬಡ ಮಹಿಳೆಯೊಬ್ಬಳ ಹೆರಿಗೆ ಮಾಡಿಸಿ ಮಾನವೀಯತೆ ಮೆರೆದಿದೆ.ಖಾಸಗಿ ಆಸ್ಪತ್ರೆಯೊಂದು ಸಾಮಾಜಿಕ ಜವಾಬ್ದಾರಿ ನಿಭಾಯಿಸಿದೆ.
ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಓಪಿಡಿ ಆರಂಭಿಸಿ ಎಂದು ಲಬಾ,ಲಬಾ ಹೋಯ್ಕೊಂಡ್ರೂ ,ಭೀಮ್ಸ್ ಆಸ್ಪತ್ರೆಯ ಡೈರೆಕ್ಟರ್ ಗೆ ಅದು ಕೇಳಿಸುತ್ತಿಲ್ಲ ,ಇವರ ಮೇಲೆ ಕ್ರಮ ಕೈಗೊಳ್ಳಲು ಜಿಲ್ಲಾ ಮಂತ್ರಿ ರಮೇಶ್ ಜಾರಕಿಹೊಳಿ ಮನಸ್ಸು ಮಾಡುತ್ತಿಲ್ಲ,ಹೃದಯವೇ ಇಲ್ಲದ ಅಧಿಕಾರಿಯೊಬ್ಬ ಬಡವರ ದವಾಖಾನೆಯ ಮುಖ್ಯಸ್ಥನಾದರೆ ದವಾಖಾನೆ ,ಕಸಾಯಿಖಾನೆ ಆಗುವದು ಸಹಜ…
ಕೋವೀಡ್ ನೆಪದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಓಪಿಡಿ ಬಂದ್ ಮಾಡಿದ್ದಾರೆ,ಕಾಲು ಮುರಿದರೂ,ಜಾರಿಬಿದ್ದರೂ,ಇಲ್ಲಿ ಚಿಕಿತ್ಸೆ ಸಿಗೋದಿಲ್ಲ,ಡಯಾಲಿಸಸ್ ಬಂದ್ ಮಾಡಿದ್ದಾರೆ,ಜನರಲ್ ಟ್ರೀಟ್ಮೆಂಟ್ ಇಲ್ಲಿ ಸಿಗೋದೆ ಇಲ್ಲ
ಜಿಲ್ಲಾ ಮಂತ್ರಿಗಳೇ,,,ಜಿಲ್ಲಾಧಿಕಾರಿಗಳೇ….ಅನೀಲ ಬೆನಕೆ ಅವರೇ…ಅಭಯ ಪಾಟೀಲರೇ ನಿಮಗಾದರೂ ಹೃದಯ ಇದೆಯಾ..? ಬಡವರ ಬಗ್ಗೆ ಕಾಳಜಿ ಇದೆಯಾ..? ನೂರಾರು ಜನ ಬಡ ರೋಗಿಗಳು ಚಿಕಿತ್ಸೆ ಸಿಗದೇ ಪರದಾಡುತ್ತಿದ್ದು ಓಪಿಡಿ ಆರಂಭಿಸಿ ಪುಣ್ಯ ಸಂಪಾದಿಸಿ
ಮದ್ಯರಾತ್ರಿ ಬಡ ಗರ್ಭಿಣಿಯ ಹೆರಿಗೆ ಮಾಡಿಸಿದ ನವಜೀವನ್ ಆಸ್ಪತ್ರೆಯ ವೈದ್ಯರೇ ಗರ್ಭಿಣಿಯ ವಿಷಯವನ್ನು ತಮ್ಮ ಗಮನಕ್ಕೆ ತಂದಿದ್ದಕ್ಕೆ ಗಣೇಶ್ ರೋಕಡೆಯನ್ನು ಆಸ್ಪತ್ರೆಗೆ ಕರೆಯಿಸಿ ಸಮ್ಮಾನ ಮಾಡಿದ್ದಾರೆ.