ಬೆಳಗಾವಿ-ಜಗತ್ತು ಎಲ್ಲಿ ಹೊರಟಿದೆ ನೋಡಿ ಜನ ದುಡ್ಡಿಗಾಗಿ ಏನೆಲ್ಲಾ ಮಾಡ್ತೀದ್ದಾರೆ ನೋಡಿ,50 ಲಕ್ಷ ಇನ್ಸೂರೆನ್ಸ್ ಹಣಕ್ಕಾಗಿ ಒಡಹುಟ್ಟಿದ ಅಣ್ಣನನ್ನೇ ತಮ್ಮ ಕೊಲೆಗೈದಿದ್ದಾನೆ.ಈ ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯಲ್ಲಿ.
ಮೃತನ ಶವ ಪತ್ತೆಯಾಗುತ್ತಿದ್ದಂತೆ ಊರು ಬಿಟ್ಟವರು ತಿಂಗಳ ಬಳಿಕ ಪೊಲೀಸರ ಬಲೆಗೆ ಬಿದ್ದಿದ್ದಾರೆ.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದ ಬಳಿ ನಡೆದಿದ್ದ ಘಟನೆ ತನಿಖೆಯ ಬಳಿಕ ಬೆಳಕಿಗೆ ಬಂದಿದೆ.
ಹಣಮಂತ ಗೋಪಾಲ ತಳವಾರ(35) ಕೊಲೆಯಾಗಿದ್ದ ದುರ್ದೈವಿ. ಬಸವರಾಜ ತಳವಾರ ತನ್ನ ಮೂವರು ಸ್ನೇಹಿತರ ಜೊತೆಗೂಡಿ ಅಣ್ಣನ ಹತ್ಯೆಗೈದ ಪಾಪಿ.
ಹಣಮಂತನ ಹೆಸರಲ್ಲಿ 50 ಲಕ್ಷ ಇನ್ಸೂರೆನ್ಸ್ ಮಾಡಿಸಿದ್ದ ಬಸವರಾಜ್.ಹಣಮಂತನ ಹೆಸರಲ್ಲಿದ್ದ ಇನ್ಸೂರೆನ್ಸ್‌ಗೆ ನಾಮಿನಿ ಆಗಿದ್ದ ಬಸವರಾಜ್.ಅಣ್ಣ ಸತ್ತರೆ ತನಗೆ ಲಾಭ ಎಂದು ಭಾವಿಸಿ ಚಟ್ಟ ಕಟ್ಟಿದ ಸಹೋದರ.
ಕಂಠಪೂರ್ತಿ ಕುಡಿಸಿ ತನ್ನ ಸ್ನೇಹಿತರೊಂದಿಗೆ ಅಣ್ಣನನ್ನು ಕರೆದೊಯ್ದಿದ್ದ ಸಹೋದರ ಅಣ್ಣನ ಹತ್ಯೆ ಮಾಡಿದ್ದಾನೆ.
ಶ್ರೀಗಂಧದ ಕಟ್ಟಿಗೆಗಳಿವೆ ಅದನ್ನು ತರಲು ಹೋಗೋಣ ಬಾ ಎಂದು ಕರೆದುಕೊಂಡು ಹೋಗಿದ್ದ ಚಾಲಾಕಿ ತಮ್ಮ
ಈ ವೇಳೆ ಹನಮಂತನ ತಲೆಗೆ ರಾಡ್ ನಿಂದ ಹೊಡೆದು ಕೊಲೆ ಮಾಡಿದ್ದಮೃತನ ಸಹೋದರ ಬಸವರಾಜ್ ತಳವಾರ, ಬಾಪು ಶೇಖ್, ಈರಪ್ಪ ಹಡಗಿನಾಳ, ಸಚಿನ್ ಕಂಟೆನ್ನವರ್ ಎಂಬಾತರನ್ನು ಪೋಲೀಸರು ಬಂಧಿಸಿದ್ದಾರೆ.
ಸ್ವಂತ ತಮ್ಮನ್ನಿಂದಲೇ ಕೊಲೆಯಾದ ಅಣ್ಣ…
ಬೆಳಗಾವಿ ಜಿಲ್ಲೆಯ ಘಟಪ್ರಭಾ ಠಾಣೆಯ ಪೋಲೀಸರು ಕೊಲೆ ಪ್ರಕರಣವನ್ನು ಭೇದಿಸಿದ್ದಾರೆ.