Breaking News

ಪಾಲಿಕೆಯ ಗ್ಲಾಸ್ ಹೌಸ್ ….ಮಹಿಳಾ ಮಂಡಳಕ್ಕೆ ಬಾಡಿಗೆ…!!

ಪಾಲಿಕೆಯ ಗ್ಲಾಸ್ ಹೌಸ್ ….ಮಹಿಳಾ ಮಂಡಳಕ್ಕೆ ಬಾಡಿಗೆ…!!

ಬೆಳಗಾವಿ- ಬೆಳಗಾವಿಯ ಮಹಾಂತೇಶ ನಗರದಲ್ಲಿರುವ ಗ್ಲಾಸ್ ಹೌಸ್ ಗೆ ಸಮಂಧಿಸಿದಂತೆ ಸ್ಥಳೀಯ ಮಹಿಳಾ ಮಂಡಳವೊಂದು ಸಾರ್ವಜನಿಕರಿಂದ ಸಾವಿರಾರು ರೂ ಬಾಡಿಗೆ ವಸೂಲಿ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ .

ಇಂದು ಬೆಳಿಗ್ಗೆ ಮಹಾಂತೇಶ್ ನಗರದ ವಿದ್ವಾನ್ ಕಿಡ್ಸ್ ನರ್ಸರಿ ಶಾಲೆಯವರು ಮಹಾನಗರ ಪಾಲಿಕೆಗೆ ಚಲನ್ ಮೂಲಕ 700 ರೂ ಬಾಡಿಗೆ ಪಾವತಿಸಿ ಪಾಲಿಕೆಯಿಂದ ಅನುಮತಿ ಪಡೆದುಕೊಂಡು ಗ್ಲಾಸ್ ಹೌಸ್ ಆವರಣದಲ್ಲಿ ಮಕ್ಕಳ ಕ್ರಿಡಾಕೂಟ ನಡೆಸುತ್ತಿರುವಾಗ ಸ್ಥಳಕ್ಕೆ ಆಗಮಿಸಿದ ಮಹಾಂತೇಶ್ ನಗರದ ಮಹಾಲಕ್ಷ್ಮೀ ಮಹಿಳಾ ಮಂಡಳದ ಪದಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಕ್ಕಳ ಕ್ರೀಡಾಕೂಟಕ್ಕೆ ಅಡ್ಡಿ ಪಡಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ .

ಮಹಿಳಾ ಮಂಡಳದ ಪದಾಧಿಕಾರಿಗಳು ವಿದ್ವಾನ್ ಕಿಡ್ಸ ಶಾಲೆಯ ಆಡಳಿತ ಮಂಡಳಿಗೆ ನೀವು ಯಾರ ಪರ್ಮಿಶನ್ ತಗೊಂಡಿದ್ದೀರಿ ? ಪಾಲಿಕೆಯವರು ಈ ಹ್ಲಾಸ್ ಹೌಸ್ ನ್ನು ಮಹಾಲಕ್ಷ್ಮೀ ಮಹಿಳಾ ಮಂಡಳಕ್ಕೆ ಬರೆದು ಕೊಟ್ಟಿದ್ದಾರೆ ,ನೀವು ಬಾಡಿಗೆ ನಮಗೆ ಕೊಡಬೇಕು ಎಂದು ತಕರಾರು ಮಾಡಿದಾಗ ಸಾರ್ವಜನಿಕರು ಮದ್ಯಪ್ರವೇಶಿಸಿ ಮಹಿಳಾ ಮಂಡಳದ ಪದಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ಅಲ್ಲಿ ನಡೆದಿದೆ .

ಮಹಾಂತೇಶ್ ನಗರದ ಜನ ಗ್ಲಾಸ್ ಹೌಸ್ ನಲ್ಲಿ ಬರ್ತ ಡೇ.ಸೇರಿದಂತೆ ಸಣ್ಣ ಪುಟ್ಟ ಕಾರ್ಯಕ್ರಮ ಮಾಡಬೇಕಾದ್ರೆ ಮಹಾಲಕ್ಷ್ಮಿ ಮಹಿಳಾ ಮಂಡಳಕ್ಕೆ ಹತ್ತು ಸಾವಿರ ರೂ ಯಿಂದ ಇಪ್ಪತ್ತು ಸಾವಿರ ರೂ ಬಾಡಿಗೆ ಕೊಡಬೇಕಾಗುತ್ತದೆ ಎನ್ನುವದು ಸಾರ್ವಜನಿಕರ ಆರೋಪವಾಗಿದೆ.

ಮಹಾನಗರ ಪಾಲಿಕೆ ಸಾರ್ವಜನಿಕರ ಅನಕೂಲಕ್ಕಾಗಿ ನಗರದಲ್ಲಿ ಗ್ಲಾಸ್ ಹೌಸ್ ಗಳನ್ನು ನಿರ್ಮಿಸಿದೆಯೋ.? ಅಥವಾ ಸಾರ್ವಜನಿಕರಿಂದ ಹಣ ಸುಲಿಗೆ ಮಾಡಲು ಗ್ಲಾಸ್ ಹೌಸ್ ಗಳನ್ನು ನಿರಗಮಿಸಿದೆಯೋ.? ಎನ್ನುವದು ಮಹಾಂತೇಶ ನಗರದ ರಹವಾಸಿಗಳ ಪ್ರಶ್ನೆ ಯಾಗಿದೆ.

ಸಾರ್ವಜನಿಕರಿಂದ ಬಾಡಿಗೆ ವಸೂಲಿ ಮಾಡುವ ಅಧಿಕಾರವನ್ನು ಮಹಾಲಕ್ಷ್ಮಿ ಮಹಿಳಾ ಮಂಡಳಕ್ಕೆ ಕೊಟ್ಟವರು ಯಾರು.? ಯಾವ ಆಧಾರದ ಮೇಲೆ ಈ ಗ್ಲಾಸ್ ಹೌಸ್ ನ್ನು ಮಹಿಳಾ ಮಂಡಳಕ್ಕೆ ಬರೆದು ಕೊಡಲಾಗಿದೆ ಎನ್ನುವ ಹಲವಾರು ಪ್ರಶ್ನೆಗಳಿಗೆ ಪಾಲಿಕೆ ಆಯುಕ್ತರು ಉತ್ತರ ಕೊಡಬೇಕಾಗಿದೆ.

ಪಾಲಿಕೆ ವತಿಯಿಂದ ನಗರದ ಹಲವಾರು ಪ್ರಮುಖ ಪ್ರದೇಶಗಳಲ್ಲಿ ಗ್ಲಾಸ್ ಹೌಸ್ ಗಳನ್ನು ನಿರ್ಮಿಸಲಾಗಿದ್ದು ಅವುಗಳ ಪರಿಸ್ಥಿತಿ ಏನಾಗಿದೆ ಯಾರ್ಯಾರು ಎಲ್ಲೆಲ್ಲಿ ಎಷ್ಟು ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎನ್ನುವದನ್ನು ಪತ್ತೆ ಮಾಡಿ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸುವದು ಪಾಲಿಕೆಯ ಅಧಿಕಾರಿಗಳ ಜವಾಬ್ದಾರಿಯಾಗಿದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *