ಎಐಸಿಸಿ ಗೋವಾ ಉಸ್ತುವಾರಿ ದಿನೇಶ್ ಗೂಂಡುರಾವ್ ಅಧ್ಯಕ್ಷತೆಯಲ್ಲಿ ಪೂರ್ವ ಸಿದ್ದತಾ ಸಭೆ
ಗೋವಾ ಚುನಾವಣೆ; ಕಾಂಗ್ರೆಸ್ ಗೆಲುವಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ರಣತಂತ್ರ
ಪಣಜಿ: ಬೆಳಗಾವಿ ಜಿಲ್ಲೆಯಲ್ಲಿ ವಿಧಾನ ಪರಿಷತ್, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಣತಂತ್ರ ಹೆಣದು ಗೆಲುವು ಸಾಧಿಸಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಈಗ ಗೋವಾ ವಿಧಾನಸಭೆ ಚುನಾವಣೆಯಲ್ಲೂ” ಕೈ” ಗೆಲುವಿಗೆ ರಣತಂತ್ರ ರೂಪಿಸಿ, ಅವರ ನೇತೃತ್ವದ ತಂಡ ರಚಿಸಿದ್ದಾರೆ.
ಎಐಸಿಸಿ ಗೋವಾ ವೀಕ್ಷಕ ಸುನೀಲ್ ಹಣಮನವರ್, ಬೆಳಗಾವಿ ಗ್ರಾಮೀಣ ಜಿಲ್ಲಾ ಪ್ರದಾನ ಕಾರ್ಯದರ್ಶಿ ಪ್ರದೀಪ್ ಎಂ.ಜೆ ನೇತೃತ್ವದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರ ಸೂಚನೆ ಮೇರೆಗೆ ಎಐಸಿಸಿ ಗೋವಾ ಉಸ್ತುವಾರಿ ದಿನೇಶ್ ಗೂಂಡುರಾವ್ ಅಧ್ಯಕ್ಷತೆಯಲ್ಲಿ ಗೋವಾ ಚುನಾವಣೆಯ ಪೂರ್ವ ಸಿದ್ದತಾ ಸಭೆ ನಗರದ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಮಂಗಳವಾರ ನಡೆಯಿತು.
ಗೋವಾದ 40 ವಿಧಾನಸಭೆ ಕ್ಷೇತ್ರಗಳಲ್ಲಿ ಕೈ ಅಭ್ಯರ್ಥಿಗಳನ್ನು ಗೆಲ್ಲಿಸುವ ಕಾರ್ಯ ತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಪಕ್ಷದ ಮುಖಂಡರಿಗೆ ಪ್ರತಿಯೊಂದು ಕ್ಷೇತ್ರದ ಜವಾಬ್ದಾರಿ ನೀಡಲಾಯಿತು.
ಇದೇ ವೇಳೆ ಮಾತನಾಡಿದ ಎಐಸಿಸಿ ಗೋವಾ ಉಸ್ತುವಾರಿಯಾದ ದಿನೇಶ್ ಗೂಂಡುರಾವ್, ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಇದ್ದು, ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ವಿರೋಧಿ ಅಲೆಯನ್ನು ಬಂಡವಾಳವಾಗಿ ಇಟ್ಟುಕೊಂಡು ಪಕ್ಷದ ಗೆಲುವಿಗೆ ಶ್ರಮಿಸಬೇಕೆಂದರು.
ಕಳೆದ ಎರಡೂ ದಶಕದಿಂದ ಗೋವಾದಲ್ಲಿ ಕಾಂಗ್ರೆಸ್ ಅಧಿಕಾರ ವಂಚಿತವಾಗಿತ್ತು. ಆದರೆ ಈ ಬಾರಿ ಗೋವಾದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ತರಲು ಮುಖಂಡರು ಪಣತೊಡಬೇಕು. ಇದಕ್ಕೆ ಪೂರಕವಾಗುವ ದಿಶೆಯಲ್ಲಿಸತೀಶ್ ಜಾರಕಿಹೊಳಿ ಅವರು ತಮ್ಮದೇಯಾದ ಚುನಾವಣೆ ಪೂರ್ವ ಸಮೀಕ್ಷೆಗಾಗಿ ತಂಡವೊಂದನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿಎಐಸಿಸಿ ಹಿರಿಯ ಉಪಾಧ್ಯಕ್ಷ ಎಂ.ಕೆ. ಶೇಖ್ ಸೇರಿದಂತೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಮುಖಂಡರುಗಳಾದ ಸಿದ್ದು ಸುಣಗಾರ, ಸಿದ್ದಕ್ಕಿ ಅಂಕಲಗಿ, ಮಂಜು ಕಾಂಬಳೆ, ಆನಂದ ತುಪ್ಪದ, ಶೋಯ್ಯಬ್ ಅತ್ತಾರ್, ಪಪ್ಪುಗೌಡಾ ಪಾಟೀಲ್, ವೀರಣ್ಣಬಿಸಿರೊಟ್ಟಿ, ರವಿ ಜಿಡ್ರಾಳೆ, ದಸ್ತಗೀರ್ ಬಸಾಪುರೆ, ಕುಶಪ್ಪಾ ನಾಯಿಕ ಇತರರು ಇದ್ದರು.