Breaking News

ಕಡಲ ತೀರದ ಬಾನಂಗಳದಲ್ಲಿ ಬಣ್ಣದ ಚಿತ್ತಾರ….!

ಪಣಜಿ:- ಇಲ್ಲಿನ ಮೀರಾಮಾರ ಕಡಲತಡಿ ಎಂದಿನಂತಿರಲಿಲ್ಲ. ಆಗಸದಲ್ಲಿ ಬಣ್ಣ ಬಣ್ಣದ ಚಿತ್ತಾರ, ಚಿಣ್ಣರ ಕೇಕೆ, ಯುವಕ–ಯುವತಿಯರ ಶಿಳ್ಳೆ, ಚಪ್ಪಾಳೆ ಸುರಿಮಳೆ .. ಈ ದೃಶ್ಯಾವಳಿ ಕಂಡುಬಂದಿದ್ದು ಗೋವಾ 3ನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ.

ಗಾಳಿ ಪಟ ಉತ್ಸವವು ನೋಡುಗರ ಕಣ್ಮನ ಸೆಳೆಯಿತು. ಲೋಹದ ಹಕ್ಕಿಗೆ ಸವಾಲು ಹಾಕಿದಂತೆ ಆಗಸಕ್ಕೆ ಚಿಮ್ಮಿದ ವಿವಿಧ ಚಿತ್ತಾರದ ಗಾಳಿಪಟಗಳು ನೋಡು ಗರನ್ನು ಮಂತ್ರಮುಗ್ಧಗೊಳಿಸಿದವು. ಫೈಟರ್ ಕೈಟ್ , ರಾಷ್ಟ್ರ ಧ್ವಜ ಟ್ರೈನ್ ಕೈಟ್, ಆಕ್ಟೋಪಸ್, ಹನುಮಾನ ಕೈಟ್ ಎಲ್ಲ ದೇಶಗಳನ್ನು ಬಿಂಬಿಸುವ ಎಲ್ಲ ದೇಶಗಳನ್ನು ಬಿಂಬಿಸುವ
ಹೀಗೆ ವಿವಿಧ ರೂಪಗಳ ಗಾಳಿಪಟಗಳು ಬಾನಂಗಳದಲ್ಲಿ ಚಿತ್ತಾರ ಬಿಡಿಸಿದವು. ಹಿರಿಯರು, ಕಿರಿಯರು ಎನ್ನದೇ ಎಲ್ಲರೂ ಬಣ್ಣ, ಬಣ್ಣದ ಗಾಳಿಪಟ ಹಾರಿಸಿ ಸಂತಸಪಟ್ಟರು.

ಗಾಳಿ ಪಟ ಉತ್ಸವಕ್ಕೆ ಚಾಲನೆ ನೀಡಿದ ನಿವೃತ್ತ ರಕ್ಷಣಾ ಇಲಾಖೆ ಅಧಿಕಾರಿ ಡಿ.ಟಿ. ಬರಡೆ ಮಾತನಾಡಿ, ಬೆಳಗಾವಿ ಮಾಜಿ ಶಾಸಕ ಅಭಯ ಪಾಟೀಲ ಅವರು ಗೋವಾದಲ್ಲಿ ಕಳೆದ ಮೂರು ವರ್ಷಗಳಿಂದ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವವನ್ನು ಹಮ್ಮಿಕೊಳ್ಳುತ್ತ ಬಂದಿರುವುದು ಶ್ಲಾಘನೀಯ. ದೇಶ, ವಿದೇಶಿ ಗಾಳಿಪಟ ಹಾರಿಸುವ ಅವಕಾಶ ದೊರೆತಿದೆ. ದೇಶ, ವಿದೇಶಗಳ ಸಾಂಸ್ಕೃತಿಕ ಪ್ರತಿಬಿಂಬ ಅನಾವರಣಗೊಳಿಸಿದೆ ಎಂದು ಹೇಳಿದರು.
ಗಾಳಿ ಪಟ ಉತ್ಸವದ ರೂವಾರಿ ಅಭಯ ಪಾಟೀಲ ಮಾತನಾಡಿ, ಮೂರು ವರ್ಷಗಳಿಂದ ಗೋವಾ ಅಂತಾರಾಷ್ಟ್ರೀಯ ಗಾಳಿ ಪಟ ಉತ್ಸವ ಹಮ್ಮಿಕೊಳ್ಳಲಾಗಿದೆ. ಗೋವಾ ಪ್ರವಾಸೋದ್ಯಮ ಇಲಾಖೆ ಪ್ರೋತ್ಸಾಹ ನೀಡುತ್ತಿದೆ. ಇಲ್ಲಿ ಉತ್ತಮ ಸ್ಪಂದನೆ ದೊರೆಯುತ್ತಿದೆ ಎಂದು ಹೇಳಿದರು.
ಕರ್ನಾಟಕ  ಕೆರಳ, ಮಹಾರಾಷ್ಟ್ರ, ಗುಜರಾತ್, ಸೇರಿದಂತೆ ಅಂತಾರಾಷ್ಟ್ರೀಯ ಗಾಳಿ ಪಟ ಪಟುಗಳು ತಮ್ಮ ದೇಶದ ಪ್ರತಿಬಿಂಬಿಸುವ ವಿವಿಧ ಆಕಾರ ಮತ್ತು ವರ್ಣರಂಜಿತ ಗಾಳಿ ಪುಟಗಳನ್ನು ಹಾರಿಸಿದರು.
ಈ ಸಂದರ್ಭದಲ್ಲಿ ಪರಿವರ್ತನ ಪರಿಹಾರದ ಚೈತನ್ಯ ಕುಲಕರ್ಣಿ, ಪ್ರದೀಪ್ ಶೆಟ್ಟಿ,ಸತೀಶ ಕುಲಕರ್ಣಿ, ಗಣೇಶ ಮಳ್ಳಿಕರ
ಮೊದಲಾದವರು ಇದ್ದರು

Check Also

ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಪೋಲೀಸರಿಗೆ ಸಿಕ್ಕಿದ್ದೇನು ಗೊತ್ತಾ.?

ಬೆಳಗಾವಿ- ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದ್ದ ಗಾಂಜಾ ,ಬೆಳಗಾವಿಯ ಸಿಇಎನ್ ಸೈಬರ್ ಕ್ರೈಂ ಪೋಲೀಸರು ವಶಪಡಿಸಿಕೊಂಡಿದ್ದಾರೆ. ಬೆಳಗಾವಿ ನಗರದ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.