ಯುವಕನ ಮರ್ಡರ್ ಗೋಕಾಕ್ ನಲ್ಲಿ ಕಲ್ಲು ತೂರಾಟ,ಬೈಕ್ ಜಖಂ..

ಬೆಳಗಾವಿ-ಗೋಕಾಕ ನಗರದಲ್ಲಿ ಹಳೇ ವೈಷ್ಯಮಕ್ಕೆ ರಾತ್ರಿ ಯುವಕನ ಬರ್ಬರ ಹತ್ಯೆಯಾಗಿದ್ದು ಗೋಕಾಕಿನಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ಯುವಕನ ಕೊಲೆಯಾಗುತ್ತಿದ್ದಂತೆಯೇ,ಆರೋಪಿ ಮನೆ ಮೇಲೆ ಉದ್ವಿಗ್ನರಿಂದ ಕಲ್ಲು ತೂರಾಟ ನಡೆದಿದೆ. ಸ್ಥಳದಲ್ಲಿ ತ್ವೇಷಮಯ ವಾತಾವರಣ ನಿರಗಮಾಣವಾಗಿದೆ.ಬೆಳಗಾವಿ ಜಿಲ್ಲೆಯ ಗೋಕಾಕಿನ ಆದಿಜಾಂಬವ ನಗರದಲ್ಲಿ ಈ ಘಟನೆ ನಡೆದದೆ.

ಪೆಟ್ರೊಲ್ ಬಂಕ್‌ನಲ್ಲಿ ಕೆಲಸ ಮಾಡ್ತಿದ್ದ ಶಾನೂರು ಪೂಜಾರಿ (27) ಕೊಲೆಯಾದ ದುರ್ದೈವಿಯಾಗಿದ್ದು,ಕೊಲೆ ಆಗ್ತಿದ್ದಂತೆ ಆರೋಪಿ ಮನೆಯ ಮೇಲೆ ಕಲ್ಲು ತೂರಿ ಗಲಾಟೆ ಮಾಡಿದ ಮತ್ತೊಂದು ಗುಂಪು, ಬೈಕ್, ಕಾರು ಜಖಂ ಗೊಳಿಸಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣವಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಕೆಎಸ್‌ಆರ್‌ಪಿ ತುಕಡಿ ನಿಯೋಜನೆ ಮಾಡಲಾಗಿದ್ದುತಕ್ಷಣವೇ ಆರೋಪಿಗಳ ಬಂಧನಕ್ಕೆ ಕೊಲೆಯಾದ ಯುವಕನ ಸಂಬಂಧಿಕರು ಪಟ್ಟು ಹಿಡಿದಿದ್ದಾರೆ.ಉದ್ವಿಗ್ನರನ್ನು ಸಮಾಧಾನ ಪಡಿಸಲು ಪೊಲೀಸರ ಹರಸಾಹಸ ಪಡುತ್ತಿದ್ದಾರೆ.ಪೊಲೀಸ್ ಠಾಣೆ ಎದುರು ನೂರಾರು ಸಂಖ್ಯೆಯಲ್ಲಿ ಯುವಕರ ಜಮಾವನೆಗೊಂಡಿದ್ದಾರೆ.

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *