ಬೆಳಗಾವಿ- ಸೋಶಿಯಲ್ ಮಿಡಿಯಾ ಕ್ರಿಯಾಶೀಲ ವಾದಾಗಿನಿಂದ ಅನೇಕ ಸಾಮಾಜಿಕ ಲೋಪಗಳು ಬೆಳಕಿಗೆ ಬರುತ್ತಿವೆ.ಬಸ್ ನಿಲ್ಧಾಣದಲ್ಲಿ ಬಾಲಕಿಯೊಬ್ಬಳು ಕಸಗೂಡಿಸುವ ಚಿತ್ರ ಇವತ್ತು ಟ್ವೀಟರ್ ನಲ್ಲಿ ಬಿರುಗಾಳಿ ಎಬ್ಬಿಸಿತು .
ಬಸ್ ನಿಲ್ದಾಣದ ಕಸಗೂಡಿಸುವ ಕೆಲಸಕ್ಕೆ ಬಾಲಕಿ ನೇಮಕ ಘಟನೆ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಬಸ್ ನಿಲ್ದಾಣದಲ್ಲಿ ನಡೆದಿರುವ ಬಗ್ಗೆ ಟ್ವೀಟ್ ಮಾಡಲಾಗಿತ್ತು.ವಾಯವ್ಯ ಸಾರಿಗೆ ಅಧಿಕಾರಿಗಳ ವಿರುದ್ಧ ಟ್ವಿಟರ್‌ನಲ್ಲಿ ಭಾರೀ ಆಕ್ರೋಶ ವ್ಯಕ್ತವಾಯಿತು.
ವಿನಾಯಕ ಕಟ್ಟಿಕಾರ ಎಂಬಾತನ ಅಕೌಂಟಿನಿಂದ ಕಸಗೂಡಿಸುವ ಫೋಟೊ ಶೇರ್ ಆಗಿತ್ತು.ಬಾಲಕಿಯನ್ನು ಕಸಗೂಡಿಸುವ ಕೆಲಸಕ್ಕೆ ಸೇರಿಸಿಕೊಂಡಿದ್ದು ಎಷ್ಡು ಸರಿ ಎಂದು ಪ್ರಶ್ನೆ ಎದುರಾಯಿತು.ನಿಮ್ಮ ಮಕ್ಕಳನ್ನೂ ಬಾಲಕಾರ್ಮಿಕರನ್ನಾಗಿ ನೇಮಿಸುತ್ತಿರಾ ಎಂದು ಹಲವಾರು ಜನ ಪ್ರಶ್ನೆ ಮಾಡಿ ಕಾಮೆಂಟ್ ಮಾಡಿದ್ರು.ವ್ಯಾಯವ್ಯ ಸಾರಿಗೆ ಅಧಿಕಾರಿಗಳಿಗೆ ಫೋಟೊ ಟ್ಯಾಗ್ ಮಾಡಿರುವ ವಿನಾಯಕ ಇವತ್ತು ಎಲ್ಲರ ಗಮನ ಸೆಳೆದ್ರು.
ಟ್ವಿಟರ್‌ನಲ್ಲೇ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆ ಅಧಿಕಾರಿಗಳು.ನಿಮ್ಮ ದೂರನ್ನು ನೋಂದಾಯಿಸಿದ್ದೇವೆ.
ಈ ಬಗ್ಗೆ ಪರಿಶೀಲಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಾರಿಗೆ ಅಧಿಕಾರಿಗಳು ಟ್ವೀಟರ್ ನಲ್ಲೇ ಉತ್ತರ ನೀಡಿದ್ರು….
ಗೋಕಾಕ ಬಸ್ ತಂಗುದಾನದಲ್ಲಿ ಬಾಲ ಕಾರ್ಮಿಕಳನ್ನ ಕಸಗುಡಿಸುವ ಕೇಲಸಕ್ಕೆ ಸೇರಿಸಿಕೊಂಡದ್ದು ಏಷ್ಟು ಸರಿ..?
ನೀಮ್ಮ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿಯೇ ಮಾಡಿದ್ದಿರಾ..@KSRTC_Journeys pic.twitter.com/LLedHbhboM— vinayak kattikar (@vnayakkattikar) June 27, 2022