ಬೆಳಗಾವಿ- ಮಸೀದಿಯಲ್ಲಿ ಸಾಮೂಹಿಕವಾಗಿ ನಮಾಜ್ ಮಾಡುತ್ತಿದ್ದವರನ್ನ ಹೊರ ಕರೆತಂದು ಲಾಠಿ ಚಾರ್ಜ್ ಮಾಡಿದ ಘಟನೆ
ಬೆಳಗಾವಿ ಜಿಲ್ಲೆಯ ಗೋಕಾಕ್ ಪಟ್ಟಣದ ಮಸೀದಿಯೊಂದರಲ್ಲಿ ನಡೆದಿದೆ.
ಲಾಕ್ ಡೌನ್ ಇದ್ದರು ಕ್ಯಾರೆ ಎನ್ನದೇ ನಮಾಜ್ ಗೆ ಜನ ಸೇರಿದ್ದಾರೆಂಬ ಮಾಹಿತಿ ಪಡೆದ ಪೋಲೀಸರು ಲಾಠಿ ಚಾರ್ಜ ಮಾಡಿ ಜನರನ್ನು ಚದುರಿಸಿದ್ದಾರೆ.
ಎರಡು ಮಸೀದಿಗಳಲ್ಲಿ ನಮಾಜ್ ಮಾಡುತ್ತಿದ್ದ ಮೂವತ್ತಕ್ಕೂ ಅಧಿಕ ಜನರನ್ನು ಮಸೀದಿಯಿಂದ ಹೊರಗೆ ಕರೆದು ಪೋಲೀಸರು ಲಾಠಿ ರುಚಿ ತೋರಿಸಿದ್ದಾರೆ.
ಗೋಕಾಕ್ ಶಹರ ಪೊಲೀಸರಿಂದ ಲಾಠಿ ಚಾರ್ಜ್ ಮಾಡಲಾಗಿದ್ದು ಲಾಠಿ ಏಟು ಬೀಳುತ್ತಿದ್ದಂತೆ ಓಡೊಡಿ ಮನೆ ಸೇರಿಕೊಂಡು ಕೆಲವರು.
ಮಸೀದಿ ಮುಖಂಡರನ್ನ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ