ಬೆಳಗಾವಿ-ಜಿಲ್ಲಾಡಳಿತ ಲಾಕ್ ಡೌನ್ ಬಿಗಿಗೊಳಿಸಲು ಹಗಲು ಹೊತ್ತಿನಲ್ಲಿ ಬೆವರು ಸುರಿಸಿದ್ರೆ , ನಮ್ಮ ವ್ಯಾಪಾರಿಗಳು ಒಂದು ಹೆಜ್ಜೆ ಮುಂದಕ್ಕಿಟ್ಟು ರಾತ್ರಿ ಹೊತ್ತಿನಲ್ಲಿ ಮಾರ್ಕೆಟ್ ನಡೆಸಿ ಜನರ ಜೀವದ ಜತೆ ಚೆಲ್ಲಾಟ ವಾಡುತ್ತಿದ್ದಾರೆ
ಬೆಳಗಾವಿ ಜಿಲ್ಲೆ ಈಗ ರೆಡ್ ಝೋನ್,ಕೊರೋನಾ ಹಾಟ್ ಸ್ಪಾಟ್ ಬೆಳಗಾವಿ ಜಿಲ್ಲೆಯಲ್ಲಿ 72 ಜನರಿಗೆ ಸೊಂಕು ತಗುಲಿದೆ. ಈ ಮಹಾಮಾರಿ ವೈರಸ್ ದಿನದಿಂದ ದಿನಕ್ಕೆ ತಾಲ್ಲೂಕಿನಿಂದ ತಾಲ್ಲೂಕಿಗೆ ರಣಕೇಕೇ ಹಾಕುತ್ತಿದೆ. ಆದರೂ ಬುದ್ದಿ ಕಲಿಯದ ಜನ ಮದ್ಯರಾತ್ರಿ ಮಾರ್ಕೆಟ್ ನಡೆಸಿ ಈ ಮಾರ್ಕೆಟ್ ನಲ್ಲಿ ಜನ ಮಾಸ್ಕವೂ ಧರಿಸದೇ,ಸೋಸಿಯಲ್ ಡಿಸ್ಟನ್ಸ ಕಾಯದೇ ನೂರಾರು ಜನ ಒಂದು ಕಡೆ ಸೇರಿ ವ್ಯಾಪಾರು,ವಹಿವಾಟು ನಡೆಸಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್‌ನಲ್ಲಿ ನಡೆತುತ್ತಿರುವ ಮಿಡ್ ನೈಟ್ ಮಾರ್ಕೆಟ್ ನಲ್ಲಿ ತರಕಾರಿ, ಅಗತ್ಯವಸ್ತು ಖರೀದಿಗೆ ಜನ ಮುಗಿ ಬೀಳುತ್ತಿದ್ದಾರೆ.ಗೋಕಾಕ್ ನಗರದ ಸಿಂಧಿಕೂಟ್, ಮಟನ್ ಮಾರ್ಕೇಟ್‌ನಲ್ಲಿ ಮಿಡ್ ನೈಟ್ ನಡೆಯುತ್ತಿರುವ ಮಾರ್ಕೆಟ್ ನಲ್ಲಿ ಜನವೋ ಜನ…..
ಮಧ್ಯರಾತ್ರಿ ಮೂರು ಗಂಟೆಯಿಂದಲೇ ತರಕಾರಿ ಖರೀದಿಗೆ ಜನ ಮುಗಿಬೀಳುತ್ತಿದ್ದಾರೆ.ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ಮಾಡುತ್ತಿದ್ದಾರೆ. ಮಾಸ್ಕ್ ಧರಿಸದೇ ವ್ಯಾಪಾರ ವಹಿವಾಟುದಲ್ಲಿ ಜನ ತೊಡಗಿದ್ದಾರೆ.
ಈ ಭಯಾನಕ ಮಹಾಮಾರಿ ಹರಡುತ್ತಿರುವದನ್ನು ತಡೆಯಲು ಜಿಲ್ಲಾಡಳಿತ ಲಾಕ್ ಡೌನ್ ಬಿಗಿಗೊಳಿಸುವ ಪ್ರಯತ್ನ ಮಾಡುತ್ತಿದ್ದರೆ ಜನ ಮದ್ಯ ರಾತ್ರಿ ಮಾರ್ಕೆಟ್ ಏರ್ಪಡಿಸುತ್ತಿದ್ದಾರೆ .ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಬಾರದು ಎಂದು ಪೋಲೀಸರು ಹಗಲು ಹೊತ್ತಿನಲ್ಲಿ ಕಡಿವಾಣ ಹಾಕಿದ್ರೆ ಜನ ರಾತ್ರಿ ಹೊತ್ತಿನಲ್ಲಿ ಲಾಕ್ ಡೌನ್ ಉಲ್ಲಂಘಿಸಿ ಜಿಲ್ಲಾಡಳಿತದ ಕಾಳಜಿಗೆ ಕ್ಯಾರೆ ಅನ್ನುತ್ತಿಲ್ಲ…..