Breaking News

ಬೆಳಗಾವಿಯಲ್ಲಿ ಕ್ವಾರಂಟೈನ್ ನಲ್ಲಿದ್ದ 150 ಕ್ಕೂ ಹೆಚ್ಚು  ರಾಜಸ್ತಾನಿ ಕಾರ್ಮಿಕರಿಗೆ ಬಿಡುಗಡೆಯ ಭಾಗ್ಯ

ಬೆಳಗಾವಿ- ಹುಬ್ಬಳ್ಳಿ,ಧಾರವಾಡ,ದಾವಣಗೇರೆ,ಹಾವೇರಿ ,ಸೇರಿದಂತೆ, ವಿವಿಧ ಭಾಗಗಳಿಂದ ಲಾರಿಗಳ ಮೂಲಕ ಕದ್ದು ಮುಚ್ಚಿ ರಾಜಸ್ಥಾನ ಕ್ಕೆ ತೆರಳುವ ಸಂಧರ್ಭದಲ್ಲಿ ಬೆಳಗಾವಿಯಲ್ಲಿ ಕ್ವಾರಂಟೈನ್ ಆಗಿದ್ದ 150  ಕ್ಕೂ ಹೆಚ್ಚು ರಾಜಸ್ಥಾನ ಮೂಲದ ಕಾರ್ಮಿಕರಿಗೆ ಇಂದು ಬಿಡುಗಡೆಯ ಭಾಗ್ಯ ಬಂದಿದೆ.

ಬೆಳಗಾವಿಯ ರಾಮದೇವ ಹೊಟೇಲ್ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಆವರಣದಲ್ಲಿರುವ ಮೆಟ್ರಿಕ್ ಪೂರ್ವ ವಿಧ್ಯಾರ್ಥಿಗಳ ಹಾಸ್ಟೇಲ್ ನಲ್ಲಿ 169 ಕಾರ್ಮಿಕರನ್ನು ಕ್ವಾರಂಟೈನ್ ಮಾಡಲಾಗಿತ್ತು .

ನಿನ್ನೆ ಕಾರ್ಮಿಕ ದಿನಾಚರಣೆಯ ದಿನದಂದು ಈ ಕಾರ್ಮಿಕರ ಕ್ವಾರಂಟೈನ್ ಅವಧಿ ಮುಕ್ತಾಯವಾಗಿದೆ ಎಂದು ಹೇಳಲಾಗಿದ್ದು ಈ ಎಲ್ಲ ಕಾರ್ಮಿಕರ ರಿಪೋರ್ಟ್ ನೆಗೆಟಿವ್ ಬಂದಿರುವದರಿಂದ ಕಾರ್ಮಿಕರನ್ನು ಇಂದು ಜಿಲ್ಲಾಡಳಿತ ಬಿಡುಗಡೆ ಮಾಡುತ್ತಿದೆ .

ಆರು ಬಸ್ ಗಳಲ್ಲಿ ಕಾರ್ಮಿಕರು ಇನ್ನು ಕೆಲವೇ ಗಂಟೆಗಳಲ್ಲಿ ರಾಜಸ್ತಾನಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

 

109 ಜನ ಕ್ವಾರಂಟೈನ್ ನಲ್ಲಿರುವವರಿಗೂ ಬಿಡುಗಡೆಯ ಭಾಗ್ಯ

ಬೆಳಗಾವಿ ನಗರದ ವಿವಿಧ ಲಾಡ್ಜ್ ಗಳಲ್ಲಿ ಕ್ವಾರಂಟೈನ್ ಮಾಡಲಾಗಿದ್ದ 109 ಜನರನ್ನು ಇಂದು ಬಿಡುಗಡೆ ಮಾಡುವ ಪ್ರಕ್ರಿಯೆ ನಡೆದಿದೆ,ಹಿರೇಬಾಗೇವಾಡಿ ಸೇರಿದಂತೆ ವಿವಿಧ ಗ್ರಾಮಗಳ ಒಟ್ಟು 109 ಜನ ಕೆಲವೇ ಗಂಟೆಗಳಲ್ಲಿ ಬಿಡುಗಡೆಯಾಗಲಿದ್ದಾರೆ.

Check Also

ಶ್ರೀ ಮಹಾಲಕ್ಷ್ಮೀ ಜಾತ್ರೆ, ಭಂಡಾರ ಇಲ್ಲ….,ಬ್ಯಾನರ್ ಕೂಡಾ ಬ್ಯಾನ್….!!!

ಬೆಳಗಾವಿ: ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿ ಪಡೆದಿರುವ ಬೆಳಗಾವಿ ತಾಲೂಕಿನ ಸುಳೇಭಾವಿ ಗ್ರಾಮದ ಶ್ರೀ ಮಹಾಲಕ್ಷ್ಮೀ …

Leave a Reply

Your email address will not be published. Required fields are marked *