Breaking News

ಪಂಪಸೆಟ್ ಕಳ್ಳರ ಗ್ಯಾಂಗ್ ಪತ್ತೆ ಮಾಡಿದ ಗೋಕಾಕ್ ಪೋಲೀಸರು.

ಬೆಳಗಾವಿ- ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಹಲವಾರು ಹಳ್ಳಿಗಳಲ್ಲಿ ಪಂಪಸೆಟ್ ಕಳವು ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಒಂದನ್ನು ಪತ್ತೆ ಮಾಡುವಲ್ಲಿ ಗೋಕಾಕ್ ಠಾಣೆಯ ಪೋಲೀಸರು ಯಶಸ್ವಿಯಾಗಿದ್ದಾರೆ.

ಪಂಪಸೆಟ್ ಕಳ್ಳತನ ಮಾಡಿದ ಆರೋಪದ ಮೇಲೆ
1. ಕುಮಾರ ರಮೇಶ ಕಂಬಾರ, ವಯಸ್ಸು: 21 ವರ್ಷ,ಸಾ: ಕೈತನಾಳ
2. ಯಲ್ಲಪ್ಪ ಮುದಕಪ್ಪ ನಂದಿ, ವಯಸ್ಸು: 35 ವರ್ಷ,ಸಾ: ಕೈತನಾಳ
3. ರವಿ ಅಜಿತ ಕಂಬಾರ, ವಯಸ್ಸು: 21 ವರ್ಷ, ಸಾ: ಕೈತನಾಳ
4. ಭೀಮಪ್ಪ ಹೊಳೆಪ್ಪ ಹಣಮಸಾಗರ, ವಯಸ್ಸು: 27 ವರ್ಷ, ಸಾ: ಕೈತನಾಳ

ಇವರನ್ನು ಬಂದಿಸಿರುವ ಪೋಲೀಸರು ಲಕ್ಷಾಂತರ ಮೌಲ್ಯದ ಪಂಪಸೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ.

ಗೋಕಾಕ್ ಪೋಲೀಸರು ಬಂಧಿಸಿರುವ ಆರೋಪಿಗಳು
1. ಸಜ್ಜಿಹಾಳ- 1
2. ವಡೇರಹಟ್ಟಿ- 2
3. ಖನಗಾಂವ- 1
4. ತವಗ- 1
5. ಬೆಣಚಿನಮರಡಿ- 1
6. ಗಿಳಿಹೊಸುರು- 1
7. ಕೈತನಾಳ- 2
8. ಕೇಶಪ್ಪನಹಟ್ಟಿ ಕಿನಾಲ್-
9. ಮೆಳವಂಕಿ- 1
10. ಹಡಗಿನಾಳ- 1
11. ಕೊಳವಿ ಕಿನಾಲ್- 1
12. ಮಿಡಕನಟ್ಟಿ- 1

ಈ ರೀತಿ ವಿವಿಧ ಹಳ್ಳಿಗಳಲ್ಲಿ ಪಂಪ್ ಸೆಟ್ ಗಳನ್ನು ಕದ್ದು ಮಾರಾಟ ಮಾಡಿದ್ದರು ಎಂದು ಗೊತ್ತಾಗಿದೆ.

Check Also

ಕೆಎಲ್ಇ ಡಾಕ್ಟರ್ ಗಳಿಗೆ ಯುದ್ಧ ಗೆದ್ದ ಸಂಭ್ರಮ

ಕೆಮ್ಮು ಮತ್ತು ಕಡಿಮೆ ರಕ್ತದೊತ್ತಡದೊಂದಿಗೆ ತೀವ್ರವಾದ ಉಸಿರಾಟದ ತೊಂದರೆ ಅನುಭವಿಸುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಗೆ ಪೆನುಂಬ್ರಾ ಡಿವೈಸ್ ಮೂಲಕ …

Leave a Reply

Your email address will not be published. Required fields are marked *