Breaking News

ರಿಲೀಸ್ ಆಗುವ ಮುನ್ನವೇ ರಾಜ್ಯಾದ್ಯಂತ ಸದ್ದು ಮಾಡಿರುವ ಬೆಳಗಾವಿ ಹುಡುಗರ “ಪರ್ಯಾಯ” ಸಿನಿಮಾ..!!

ಬೆಳಗಾವಿ ಹುಡುಗರ ಪರ್ಯಾಯ ಸಿನಿಮಾ ಹವಾ….!!

ಬೆಳಗಾವಿ-ಬೆಳಗಾವಿ ಹುಡುಗರು ಸೇರಿಕೊಂಡು,ಬೆಳಗಾವಿಯಲ್ಲೇ ಶೂಟಿಂಗ್ ಮಾಡುವ ಮೂಲಕ ಮಾಡಿದ ಪರ್ಯಾಯ ಸಿನಿಮಾ ರಿಲೀಸ್ ಆಗುವ ಮೊದಲೇ ಫುಲ್ ಹವಾ ಮಾಡಿದೆ.

ಮುಂದಿನ ತಿಂಗಳಲ್ಲಿ ರಿಲೀಸ್ ಆಗಲಿರುವ ಬೆಳಗಾವಿ ಹುಡುಗರ ಪರ್ಯಾಯ ಸಿನಿಮಾ ಮ್ಯೂಸಿಕ್, ಮತ್ತು ಟ್ರೇಲರ್ ಲಕ್ಷಾಂತರ ಜನ ಲೈಕ್ ಮಾಡಿದ್ದು ಈ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಉತ್ತರ ಕರ್ನಾಟಕದ ಪರಿಮಳವನ್ನು ಪಸರಿಸಿದ್ದು ಈ ಸಿನಿಮಾ ಬಿಡುಗಡೆ ಆಗುವ ಮೊದಲೇ ಹೆಸರು ಮಾಡಿದೆ.

ಬೆಳಗಾವಿ ಜಿಲ್ಲೆಯ ಕಲಾವಿದರು ಆಗಿರುವ,
ನಿರ್ಮಾಪಕರು- ರಾಜ್ ಕುಮಾರ್ ಮತ್ತು ಇಂದು ಕುಮಾರ್ ರಾಜಕುಮಾರ್ ನಿರ್ಮಾಣದ ರಮಾನಂದ ಮಿತ್ರಾ ನಿರ್ದೇಶನ ಮಾಡಿದ ಸಿನಿಮಾದಲ್ಲಿ ರಾಜಕುಮಾರ್,ಮುರುಘೇಶ ಶಿವಪೂಜೆ,ನಂಜನ್ ಕುಮಾರ್,ರೋಹನ್ ಕುಬಸದ್, ಭೀಮಾ ನಾಯಕ್,ಸುರೇಶ್ ಬೆಳಗಾವಿ,ಬೆಳಗಾವಿ ಕಟ್ಟಪ್ಪ, ನಟಿ- ಅರ್ಚನಾ ಶೆಟ್ಟಿ,ಜಯಂತಿ ರೇವಡಿ,ಪ್ರೀಯಾ ಕೋಠಾರಿ, ಪುಷ್ಪಾ ಕೋಲಕಾರ ಮುಂತಾದವರು ನಟಿಸಿ ತಮ್ಮ ಪ್ರತಿಭೆಯನ್ನು ಪರ್ಯಾಯ ಸಿನಿಮಾದಲ್ಲಿ ತೋರಿಸಿದ್ದಾರೆ.ಬೆಳಗಾವಿ,ಖಾನಾಪೂರ ತಾಲ್ಲೂಕಿನ ಚಿಗುಳೆ ಗ್ರಾಮದಲ್ಲಿ ಪರ್ಯಾಯ ಸಿನಿಮಾದ ಶೂಟೀಂಗ್ ಆಗಿದೆ.

ಕಿವುಡ, ಮೂಕ, ಮತ್ತು ಕುರುಡ,ಈ ಮೂರು ಜನ ವಿಕಲಚೇತನರು ಬದುಕಿಗಾಗಿ ಪರ್ಯಾಯ ಮಾರ್ಗ ಅನುಸರಿಸುವುದು ಪರ್ಯಾಯ ಸಿನಿಮಾದ ಕಥೆಯಾಗಿದೆ. ಬೆಳಗಾವಿಯ ಹುಡುಗರು ಸೇರಿಕೊಂಡು ಮಾಡಿರುವ ಈ ಸಿನಿಮಾ ಮುಂದಿನ ತಿಂಗಳು ರಿಲೀಸ್ ಆಗಲಿದ್ದು ರಾಜ್ಯಾದ್ಯಂತ ರಿಲೀಸ್ ಆಗುವ ಮುನ್ನವೇ ಸದ್ದು ಮಾಡಿದ್ದು ಸಂತೋಷದ ಸಂಗತಿಯಾಗಿದೆ.

Check Also

ಶಾಲಿನಿ ರಜನೀಶ್, ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ..

ಬೆಂಗಳೂರು: ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯೆಲ್‌ ಅವರ ಇದೇ ಜುಲೈ 31ಕ್ಕೆ ನಿವೃತ್ತಿಯಾಗುತ್ತಿದ್ದು, ಅವರ​ ಪತ್ನಿ ಶಾಲಿನಿ …

Leave a Reply

Your email address will not be published. Required fields are marked *