ಬೆಳಗಾವಿ- ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಧಾರಾಕಾರ ಮಳೆಯಿಂದಾಗಿ,26 ಜಿಲ್ಲಾ ಮುಖ್ಯ ರಸ್ತೆ, ರಾಜ್ಯ ಹೆದ್ದಾರಿ,26 ರಾಜ್ಯ ಹೆದ್ದಾರಿಗಳ ಸಂಪರ್ಕ ಕಡಿತಗೊಂಡಿದ್ದು ಪರ್ಯಾಯ ರಸ್ತೆ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ಡಿಸಿಎಂ,ಹಾಗೂ ಲೋಕೋಪಯೋಗಿ ಸಚಿವ ಗೋವೀಂದ್ ಕಾರಜೋಳ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಮಾದ್ಯಮಗಳ ಜೊತೆ ಮಾತನಾಡಿ ಈ ವಿಷಯ ತಿಳಿಸಿದ್ರು ಬೆಳಗಾವಿ ಜಿಲ್ಲೆಯಲ್ಲಿ 24 ಗಂಟೆಯಿಂದ ವ್ಯಾಪಕವಾಗಿ ಮಳೆ ಹಿನ್ನೆಲೆಯಲ್ಲಿ
ಬೆಳಗಾವಿ 26 ಜಿಲ್ಲಾ ಮುಖ್ಯ ರಸ್ತೆ, 21 ರಾಜ್ಯ ಹೆದ್ದಾರಿ ಸಂಪರ್ಕ ಕಡಿತ. ಹೆದ್ದಾರಿಗಳಲ್ಲಿ ಸಂಚಾರ ಡೈವರ್ಟ್ ಮಾಡಲಾಗಿದೆ. ತುರ್ತು ರಸ್ತೆ ರಿಪೇರಿಗೆ 50 ಕೋಟಿ ರೂಪಾಯಿ ಬೇಕಾಗುತ್ತದೆ. ಎಂದರು.
ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಜಿಲ್ಲೆ ಸೇರಿ 400 ಕೋಟಿಯಷ್ಟು ಹಾನಿ ಆಗಿದೆ.
ರಸ್ತೆ, ಸೇತುವೆಗಳಿಗೆ ಹಾನಿ ಆಗಿದೆ.
ಹಣ ಬಿಡುಗಡೆಗೆ ಸಿಎಂ ನೇತೃತ್ವದ ಸಭೆಯಲ್ಲಿ ಒತ್ತಾಯ ಮಾಡುತ್ತೇವೆ.
ಕಳೆದ 24 ಗಂಟೆಯಲ್ಲಿ 300 m m ಗಿಂತ ಹೆಚ್ಚು ಮಳೆ ಆಗಿದೆ. ಕೊಯ್ನಾ ಡ್ಯಾಂ ಅಧಿಕಾರಿಗಳ ಜತಗೆ ನಿರಂತರ ಸಂಪರ್ಕ ಹೊಂದಿದ್ದು
ಜನರಿಗೆ ತೊಂದರೆ ಆಗದಂತೆ ಗಂಜಿ ಕೇಂದ್ರ, ಜಾನುವಾರು ರಕ್ಷಣೆಗೆ ಕ್ರಮ ಕೈಗೊಳ್ಳಲಾಗಿದೆ.
ನೋಡಲ್ ಅಧಿಕಾರಿಗಳನ್ನು ಸಹ ನೇಮಕ ಮಾಡಲಾಗಿದೆ ಎಂದು ಕಾರಜೋಳ ತಿಳಿಸಿದ್ರು