ಬೆಳಗಾವಿ-ಸರ್ಕಾರಿ ಕಚೇರಿಯ ಬಾಗಿಲು ತರೆದ್ರೆ ಸಾಕು,ಮೋಬೈಲ್ ಹಿಡಿದುಕೊಂಡು ಪೋಟೋ ಕ್ಲಿಕ್ ಮಾಡುವ,ಪ್ರಶ್ನೆಗಳ ಸುರಿಮಳೆಗೈದು ಮೋಬೈಲ್ ನಲ್ಲೇ ವಿಡಿಯೋ ಶೂಟಿಂಗ್ ಮಾಡುವವರ ಹಾವಳಿ ಹೆಚ್ಚಾಗಿರುವ ಹಿನ್ನಲೆಯಲ್ಲಿ,ಸರ್ಕಾರ ಇದಕ್ಕೆ ಕಡಿವಾಣ ಹಾಕಲು ಮಹತ್ವದ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರಿ ನೌಕರರ ಸಂಘ,ರಾಜ್ಯ ಸರ್ಕಾರಕ್ಕೆ ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಸರ್ಕಾರ,ಸರ್ಕಾರಿ ಕಚೇರಿಗಳಲ್ಲಿ ,ಪೋಟೋ ವಿಡಿಯೋ ತೆಗೆಯುವದನ್ನು ನಿಷೇಧಿಸಿ ಆದೇಶ ಹೊರಡಿಸಿದೆ.
ಇನ್ಮುಂದೆ ಯಾರಾದರೂ ಸರ್ಕಾರಿ ಕಚೇರಿಗಳಿಗೆ ಹೋಗಿ ಪೋಟೋ ವಿಡಿಯೋ ತೆಗೆದಲ್ಲಿ ಕಚೇರಿಯ ಮುಖ್ಯಸ್ಥರು ಕ್ರಮ ಕೈಗೊಳ್ಳುವದು ಖಚಿತ,ಸರ್ಕಾರದ ಆದೇಶ ಉಲ್ಲಂಘಿಸಿದ್ರೆ ಶಿಕ್ಷಾರ್ಹ ಅಪರಾಧ ಆಗುತ್ತದೆ.ಹುಷಾರ್….!!!
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
