ಬೆಳಗಾವಿ- ಕಳೆದ 20 ವರ್ಷಗಳಿಂದ ಗ್ರಾಮ ಪಂಚಾಯತಿ ಚುನಾವಣೆ ಗೆಲ್ಲಲು ಸಾಧ್ಯವಾಗಿರಲಿಲ್ಲ ಆದ್ರೆ ಇವತ್ತು ಗೆಲುವಿನ ಸುದ್ಧಿ ಕೇಳಿ ಮತೆಣಿಕೆ ಕೇಂದ್ರದ ಹೊರಗೆ ಆ ಅಭ್ಯರ್ಥಿ ಕಣ್ಣೀರು ಸುರಿಸಿದ ಘಟನೆ ನಡೆಯಿತು.
ಗೆಲುವಿನ ಖುಷಿಯಲ್ಲಿ ಕಣ್ಣೀರು ಹಾಕಿದ ನೂತನ ಗ್ರಾ.ಪಂ.ಸದಸ್ಯ ಹಾಗೂ ಕುಟುಂಬ 20 ವರ್ಷದ ನಂತರ ಮೊದಲ ಬಾರಿಗೆ ಸಂಭ್ರಮಿಸಿತು.
ಬೆಳಗಾವಿಯ ಮತಎಣಿಕೆ ಕೇಂದ್ರದ ಹೊರಗೆ ಈ ರೀತಿಯ ಘಟನೆ ನಡೆಯಿತು. ಮುತಗಾ ಗ್ರಾ.ಪಂ. ವಾರ್ಡ್ ನಂಬರ್ 4ರಲ್ಲಿ ಶ್ಯಾಮ್ ಮುತಗೇಕರ್ ಗೆಲುವು ಸಾಧಿಸಿದರು. ಕಳೆದ 20 ವರ್ಷದಿಂದ ಗ್ರಾ.ಪಂ.ಚುನಾವಣೆ ಗೆಲ್ಲಲು ಪ್ರಯತ್ನಿಸಿದ್ದ ಶ್ಯಾಮ್ ಇವತ್ತು ಗೆದ್ದೇ ಬಿಟ್ಟರು.36 ಮತಗಳ ಅಂತರದಿಂದ ಗೆಲುವು ಸಾಧಿಸಿದ ಶ್ಯಾಮ್ ಮುತಗೇಕರ್ ಗೆಲುವಿನ ಸುದ್ಧಿ ಕೇಳಿದಾಗ ಕಣ್ಣೀರು ಕಪಾಳಕ್ಕೆ ಬಂದಿತು, ಶ್ಯಾಮ್ ಮುತಗೇಕರ್ ಪತ್ನಿ, ಮಕ್ಕಳಿಂದ ಆನಂದಭಾಷ್ಪಗಳು ಸುರಿದವು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ