ಬೆಳಗಾವಿ- ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತ ಗಾದೆ ಇದೆ,ಈ ಗಾದೆಗೆ ಅತ್ಯಂತ ಸೂಕ್ತವಾದ,ಮತ್ತು ಈ ಗಾದೆಗೆ ಹತ್ತಿರವಾದ ಸಂಪ್ರದಾಯ ಬೆಳಗಾವಿ ಜಿಲ್ಲೆಯಲ್ಲಿದೆ.
ಈ ವ್ಯಕ್ತಿಯ ಮನೆ,ನೀರಿನ ಟ್ಯಾಕ್ಸ್ ತುಂಬಿದವರಿಗೆ ಗ್ರಾ.ಪಂ.ಚುನಾವಣೆ ಗೆಲುವು ಗ್ಯಾರಂಟಿ, ಎನ್ನುವ ನಂಬಿಕೆ ಈ ಗ್ರಾಮದಲ್ಲಿ ಇದೆ.ಅದಕ್ಕಾಗಿಯೇ ಚುನಾವಣೆಗೆ ಸ್ಪರ್ದಿಸುವ ಅಭ್ಯರ್ಥಿಗಳು ಈ ವ್ಯೆಕ್ತಿಯ ಟ್ಯಾಕ್ಸ್ ತುಂಬಲು ಮುಗಿಬೀಳುತ್ತಾರೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮಳಗಲಿ ಗ್ರಾಮದಲ್ಲಿ ಇದ್ದಾನೆ ಈ ಲಕ್ಕಿ ಮ್ಯಾನ್, ಪ್ರತಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಶಿವಪ್ಪ ಹೊರಕೇರಿ ಲಕ್ ಬದಲಾಗುತ್ತೆ, ಕರ ತುಂಬಿ ತಮ್ಮ ಪರ ಸೂಚಕರಾಗುವಂತೆ ಇವರ ಹಿಂದೆ ಬಿದ್ದು ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ದಂಡು ಇವರ ಮನೆಗೆ ಹೋಗುತ್ತದೆ. ಕಾಕಾ ನಿಂದ ಟ್ಯಾಕ್ಸ್ ನಾ ತುಂಬ್ತೇನಿ ನೀನು ನನಗೇ ಸೂಚಕನಾಗಬೇಕು ಅಂತ ಈ ಕಾಕಾ ಗೆ ಗಂಟು ಬೀಳ್ತಾರೆ.ಪಂಚಾಯತಿ ಇಲೆಕ್ಷನ್ ಬಂದ್ರೆ ಸಾಕು ಈ ಕಾಕಾಗೆ ಡಿಮ್ಯಾಂಡೋ ಡಿಮ್ಯಾಂಡು….
ಇಪ್ಪತ್ತು ವರ್ಷಗಳಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಡೆದುಕೊಂಡ ಬಂದಿರುವ ನಂಬಿಕೆ ಇದಾಗಿದ್ದು, ಒಬ್ಬರಿಗೆ ನಾಲ್ಕು ಬಾರಿ, ಇನ್ನೊಬ್ಬರಿಗೆ ಮೂರು ಬಾರಿ ಸೂಚಕರಾಗಿದ್ದ ಶಿವಪ್ಪನ ಕೈಗುಣ ಸಕ್ಸೆಸ್ ಆಗಿದೆ. ಈತ ಯಾರಿಗೆ ಸೂಚಕನಾಗಿದ್ದಾನೆಯೋ ಅವರೆಲ್ಲರೂ ಗೆಲುವು ಸಾಧಿಸಿದ್ದರಿಂದ ಶಿವಪ್ಪನಿಗೆ ಎಲ್ಲಿಲ್ಲದ ಬೇಡಿಕೆ.
ಈ ಬಾರಿಯ ಗ್ರಾ.ಪಂ. ಚುನಾವಣೆಯಲ್ಲೂ ಶಿವಪ್ಪನ ಬೆನ್ನ ಹಿಂದೆ ಬಿದ್ದ ಹಲವು ಅಭ್ಯರ್ಥಿ ಗಳು,ಈ ಲಕ್ಕಿ ಮ್ಯಾನ್ ಕರ ತುಂಬಲು ಮುಂದಾಗಿದ್ದಾರೆ. ನಮಗೆ ಸೂಚಕರಾಗಿ ಅಂತ ಶಿವಪ್ಪನ ಮನವೂಲಿಸಿದ್ದಾರೆ.
ಈ ಲಕ್ಕಿ ಮ್ಯಾನ್ ಈ ಬಾರಿಯ ಚುನಾವಣೆಯಲ್ಲೂ ಓರ್ವ ಅಭ್ಯರ್ಥಿಗೆ ಸೂಚಕರಾಗಿದ್ದಾರೆ.