Breaking News

ಗಣೇಶ ಹುಕ್ಕೇರಿ,ಅಣ್ಣಾಸಾಬ ಜೊಲ್ಲೆ ನಡುವೆ ಬಿಗ್ ಫೈಟ್….!!!

ಬೆಳಗಾವಿ-ಬೆಳಗಾವಿ ಜಿಲ್ಲೆಯ ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಚುನಾವಣೆ ನಡೆಯಲಿದೆ,ನಿರ್ದೇಶಕರ ಸ್ಥಾನಕ್ಕೆ ಅಕ್ಟೋಬರ್ 22 ರಿಂದ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಲಿದೆ‌

ಬೆಳಗಾವಿ ಜಿಲ್ಲೆಯ ಹತ್ತು ತಾಲ್ಲೂಕುಗಳಿಂದ ತಲಾ ಒಬ್ಬರು ನಿರ್ದೇಶಕರು ಚುನಾಯಿತರಾಗುತ್ತಾರೆ,ಚಿಕ್ಕೋಡಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಲು,ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ,ಮತ್ತು ಶಾಸಕ ಗಣೇಶ್ ಹುಕ್ಕೇರಿ ನಡುವೆ ಬಿಗ್ ಫೈಟ್ ನಡೆಯಲಿದೆ.

ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಡಿಸಿಸಿ ಬ್ಯಾಂಕಿನ ಹಾಲಿ ನಿರ್ದೇಶಕರಾಗಿದ್ದಾರೆ, ಈ ಸ್ಥಾನ ಗಿಟ್ಟಿಸಿಕೊಳ್ಳಲು ಗಣೇಶ ಹುಕ್ಕೇರಿ ಫುಲ್ ತಯಾರಿ ಮಾಡಿಕೊಂಡಿದ್ದು,ಇಬ್ಬರ ನಡುವೆ ಬಿಗ್ ಫೈಟ್ ನಡೆಯುವ ಎಲ್ಲ ಸಾಧ್ಯತೆಗಳು ಕಂಡು ಬಂದಿವೆ.

ಡಿಸಿಎಂ ಲಕ್ಷ್ಮಣ ಸವದಿ ಮತ್ತು ರಮೇಶ್ ಕತ್ತಿ ಗುಂಪು ಒಂದುಗೂಡಿಸಿ ಈ ಬಾರಿ ಹತ್ತೂ ತಾಲ್ಲೂಕುಗಳಲ್ಲಿ ಅವಿರೋಧ ಆಯ್ಕೆ ಮಾಡುವಂತೆ RSS ಸೂಚನೆ ನೀಡಿದೆ,ಆದ್ರೆ ಚಿಕ್ಕೋಡಿ ಮತ್ತು ಖಾನಾಪೂರ ತಾಲ್ಲೂಕುಗಳಲ್ಲಿ ಅವಿರೋಧ ಆಯ್ಕೆ ನಡೆಯುವದು ಕಷ್ಟ.

ಚಿಕ್ಕೋಡಿ ತಾಲ್ಲೂಕಿನಿಂದ ಡಿಸಿಸಿ ಬ್ಯಾಂಕಿನ ನಿರ್ದೇಶಕನಾಗಲು ಶಾಸಕ ಗಣೇಶ್ ಹುಕ್ಕೇರಿ ಪಟ್ಟು ಹಿಡಿದು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದು ಬಿಜೆಪಿ ನಾಯಕರು ಅಣ್ಣಾಸಾಹೇಬ್ ಜೊಲ್ಲೆ ಅವರನ್ನು ಮನವೊಲಿಸುತ್ತಿದ್ದಾರೆ ಎಂದು ತಿಳಿದು ಬಂದಿದ್ದು ಬಿಜೆಪಿ ನಾಯಕರ ಸಂದಾನ ಸಫಲವಾದಲ್ಲಿ ಚಿಕ್ಕೋಡಿಯಲ್ಲೂ ಅವಿರೋಧ ಆಯ್ಕೆ ನಡೆಯಬಹುದು

ಖಾನಾಪೂರ ತಾಲ್ಲೂಕಿನಲ್ಲಿ ಎಂ ಈ ಎಸ್ ಮಾಜಿ ಶಾಸಕ ಅರವಿಂದ ಪಾಟೀಲ ನಿರ್ದೇಶಕರಾಗಿದ್ದಾರೆ,ಈ ಬಾರಿ ಅವರನ್ನು ಸೋಲಿಸಲು ಖಾನಾಪೂರ ತಾಲ್ಲೂಕಿನಲ್ಲಿ ಬಿಗ್ ಪಾಲಿಟಿಕ್ಸ್ ನಡೆಯುತ್ತಿದೆ. ಬಿಜೆಪಿ ನಾಯಕ ವಿಠ್ಠಲ ಹಲಗೇಕರ,ಶಾಸಕಿ ಅಂಜಲಿ ನಿಂಬಾಳ್ಕರ್ ಇಬ್ಬರೂ ತಯಾರಿ ಮಾಡಿಕೊಂಡಿದ್ದಾರೆ,ಕೊನೆಯ ಘಳಿಗೆಯಲ್ಲಿ ಶಾಸಕಿ ಅಂಜಲಿ ನಿಂಬಾಳ್ಕರ್ ವಿಠ್ಠಲ ಹಲಗೇಕರ ಅವರಿಗೆ ಬೆಂಬಲ ಸೂಚಿಸುವ ಸಾದ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಒಟ್ಟಾರೆ ಬೆಳಗಾವಿ ಜಿಲ್ಲೆಯ ಡಿಸಿಸಿ ಬ್ಯಾಂಕ್ ಚುನಾವಣೆ ಬಿಜೆಪಿ ಪಾಲಿಗೆ ಪ್ರತಿಷ್ಠೆಯಾಗಿದೆ.ಈ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರು ಯಾವ ರೀತಿಯ ಆಟ ಆಡುತ್ತಾರೆ ಅನ್ನೋದನ್ನು ಚಿಕ್ಕೋಡಿ ಮತ್ತು ಖಾನಾಪೂರ ತಾಲ್ಲೂಕುಗಳಲ್ಲಿ ನೋಡಲು ಸಿಗುತ್ತದೆ.

ಬಾಲಚಂದ್ರ ಜಾರಕಿಹೊಳಿ ಬೆಳಗಾವಿಯಲ್ಲಿ ಠಿಖಾನಿ

ಡಿಸಿಸಿ ಬ್ಯಾಂಕಿನ ಚುನಾವಣೆಯಲ್ಲಿ ಅರಬಾಂವಿ ಶಾಸಕ,ಕೆ.ಎಂ.ಎಫ್ ಅದ್ಯಕ್ಷ ಬಾಲಚಂದ್ರ ಜಾರಕಿಹೊಳಿ ಪ್ರಮುಖ ಪಾತ್ರವಹಿಸುತ್ತಾರೆ

ಈಗ ಅವರು ಬೆಳಗಾವಿಯಲ್ಲೇ ಠಿಖಾನಿ ಹೂಡಿದ್ದು ಡಿಸಿಸಿ ಬ್ಯಾಂಕಿಗೆ ಹತ್ತೂ ತಾಲ್ಲೂಕಗಳಿಂದ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡುವ ಕಸರತ್ತು ನಡೆಸಲಿದ್ದಾರೆ,ಈ ಚುನಾವಣೆಯಲ್ಲಿ ಬಾಲಚಂದ್ರ ಜಾರಕಿಹೊಳಿ ಅವರು ಸೂತ್ರವಾದಿ,ರಮೇಶ್ ಕತ್ತಿ ಪಾತ್ರವಾದಿ ಅನ್ನೋದು ಸತ್ಯ

ಈಗ ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ರಮೇಶ್ ಕತ್ತಿ ಅವರೇ ಡಿಸಿಸಿ ಬ್ಯಾಂಕಿನ ಅದ್ಯಕ್ಷರಾಗಿ ಮತ್ತೇ ಮುಂದುವರೆಯುವದರಲ್ಲಿ ಎರಡು ಮಾತಿಲ್ಲ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *