ಬೆಳಗಾವಿ- ತಿರುಚನಾಪಳ್ಳಿಯಿಂದ ರಾಜಸ್ಥಾನದ ಗಂಗಾ ನಗರ ವರೆಗೆ ಬೆಳಗಾವಿ ಮಾರ್ಗವಾಗಿ ಸಂಚರಿಸುವ ಹಮ್ ಸಫರ್ ರೈಲಿನ ಪ್ರಯಾಣ ಆರಂಭ ವಾಗಿದ್ದು ಈ ರೈಲು ೧೦-೪೦ ಕ್ಕೆ ಬೆಳಗಾವಿಗೆ ಆಗಮಿಸಿತು
ಪ್ರಾಯೋಗಿಕವಾಗಿ ಈ ರೈಲು ರಾಜಸ್ಥಾನದ ಗಂಗಾ ನಗರದಿಂದ ಪ್ರಯಾಣ ಆರಂಭಿಸಿ ೧೦-೪೦ ಕ್ಕೆ ಬೆಳಗಾವಿ ರೈಲು ನಿಲ್ಧಾಣಕ್ಕೆ ಆಗಮಿಸಿತು
ಬೆಳಗಾವಿಯ ರೈಲ್ವೆ ಇಲಾಖೆಯ ಅಧಿಕಾರಿ ಗಳು ಹಮ್ ಸಫರ್ ರೈಲಿಗೆ ಹಸಿರು ಧ್ವಜ ತೋರಿಸಿ ಬರ ಮಾಡುಕೊಂಡರು
ರೇಲ್ವೆ ಇಲಾಖೆ ೨೦೧೬-೧೭ ರ ಬಜೆಟ್ ನಲ್ಲಿ ಈ ಹಮ್ ಸಫರ್ ರೈಲನ್ನು ಘೋಷಣೆ ಮಾಡಲಾಗಿತ್ತು ಈ ರೈಲಿನ ವಿಶೇಷತೆ ಏನೆಂದರೆ ಅತ್ಯಾಧುನಿಕ ಮತ್ತು ವಿಶಾಲವಾದ ಸ್ಲೀಪರ್ ಕೋಚ್ ಜಿಪಿಎಸ್ ಸೌಲಭ್ಯ ಜೊತೆಗೆ ರೈಲಿನ ಪ್ರತಿಯೊಂದು ಬೋಗಿಯಲ್ಲಿ ಡಿಜಿಟಲ್ ಸ್ಲ್ರೀನ್ ವ್ಯೆವಸ್ಥೆ ಇದೆ
ಪ್ರತಿಯೊಂದು ಬೋಗಿಯಲ್ಲಿ ಇನ್ ಸ್ಟಂಟ್ ಕಾಫಿ,ಇನ್ ಸ್ಟಂಟ್ ಟೀ ಪಾರ್ಲರ್ ಗಳು ಇವೆ ಪ್ರಯಾಣಿಕರ ಸುರಕ್ಷತೆ ದೃಷ್ಠಿಯಿಂದ ಅತ್ಯಾಧುನಿಕ ತಂತ್ರಜ್ಞಾನ ಬಳಿಸಿ ಬೋಗಿಗಳನ್ನು ಸಿದ್ಧಪಡಿಸಲಾಗಿದೆ ಹಮ್ ಸಫರ್ ರೈಲು ಪ್ರತಿ ಘಂಟೆಗೆ ೧೦೦ ಕಿಮಿ ಕ್ರಮಿಸುತ್ತದೆ
ಈ ಹಮ್ ಸಫರ್ ವಾರದಲ್ಲಿ ಒಂದು ಬಾರಿ ಬರುತ್ತದೆ ಒಂದು ಬಾರಿ ರಾಜಸ್ಥಾನದ ರಾಮ ನಗರದಿಂದ ಮರಳಿ ಬೆಳಗಾವಿ ಮಾರ್ಗವಾಗಿಯೇ ತಿರುಚನಾಪಳ್ಳಿಗೆ ಮರಳುತ್ತದೆ
ಬೆಳಗಾವಿ ಪ್ರಯಾಣಿಕರು ವಾರದಲ್ಲಿ ಒಂದು ಬಾರಿ ಬೆಳಗಾವಿಯಿಂದ ಬೆಂಗಳೂರಿಗೆ ವಾರದಲ್ಲಿ ಒಂದು ಬಾರಿ ಬೆಳಗಾವಿಯಿಂದ ಮುಂಬಯಿ ಗೆ ಪ್ರಯಾಣ ಮಾಡಬಹುದಾಗಿದೆ
ಬೆಳಗಾವಿಗೆ ಆಗಮಿಸಿದ ಹಮ್ ಸಫರ್ ರೈಲನ್ನು ರೇಲ್ವೆ ವ್ಯೆವಸ್ಥಾಕ ಸುರೇಶ ಹಾಗು ಕಣು ಭಾಯಿ ಠಕ್ಕರ್ ರಾಜು ಚಿಕ್ಕನಗೌಡ್ರ ಜಗದೀಶ್ ಹಿರೇಮನಿ ಮುಕ್ತಾರ್ ಪಠಾಣ ರಾಜಸ್ಥಾನಿ ಸಮಾಜದ ಇತರ ಗಣ್ಯರು ಬರಮಾಡಿಕೊಂಡರು