ಬೆಳಗಾವಿ-ಸತೀಶ್ ಶುಗರ್ಸ್ ಅವಾರ್ಡ್ ಕಾರ್ಯಕ್ರಮದ ಮೂಲಕ ಸಾಂಸ್ಕೃತಿಕ ಲೋಕದ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟು,ಗ್ರಾಮೀಣ ಪ್ರತಿಭೆಗಳು ಬೆಳಕಿಗೆ ಬರಲು ವೇದಿಕೆ ಕಲ್ಪಿಸಿಕೊಟ್ಟಿರುವ ಆದರ್ಶ ರಾಜಕಾರಣಿ, ಸತೀಶ್ ಜಾರಕಿಹೊಳಿ ಅವರು ವಿಶೇಷವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.
ಪ್ರಬಂಧ ಸ್ಪರ್ದೆ ಏರ್ಪಡಿಸಿ ,ಸ್ಪರ್ದೆಯಲ್ಲಿ ವಿಜೇತರಾದವರಿಗೆ ಬಹುಮಾನ ಕೊಡುವದು ಸಂಪ್ರದಾಯ,ಆದ್ರೆ ಸತೀಶ್ ಜಾರಕಿಹೊಳಿ ಸಾರಥ್ಯದ ಮಾನವ ಬಂಧುತ್ವ ವೇದಿಕೆ ಈ ವಿಚಾರದಲ್ಲಿ ವಿನೂತನವಾದ,ಆಕರ್ಷಕವಾದ,ಮೌಲ್ಯಾಧಾರಿತ ಸಂಪ್ರದಾಯವನ್ನು ಶುರು ಮಾಡಿದ್ದಾರೆ.
ಹೊಸ ವರ್ಷ,ಹೊಸ ಯೋಜನೆ ,ಹೊಸ ಆಲೋಚನೆಯೊಂದಿಗೆ ಸತೀಶ್ ಜಾರಕಿಹೊಳಿ ಅವರು 2021 ಹೊಸ ವರ್ಷವನ್ನು ಬರಮಾಡಿಕೊಳ್ಳುತ್ತಿದ್ದಾರೆ.
ಜನೇವರಿ 10 ರಂದು ಗೋಕಾಕಿನ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಸಾವಿತ್ರಿಬಾಯಿ ಪುಲೆ ಅವರ ಸಾಧನೆ ಮತ್ತು ಬದುಕಿನ ಕುರಿತು ಪ್ರಬಂಧ ಬರೆಯುವ ಸ್ಪರ್ದೆ ಏರ್ಪಡಿಸಿದ್ದಾರೆ. ಈ ಸ್ಪರ್ದೆಯಲ್ಲಿ ವಿಜೇತರಾದವರಗೆ,ಹೆಲಿಕಾಪ್ಟರ್ ನಲ್ಲಿ ವಿಹರಿಸುವ ಭಾಗ್ಯವನ್ನು ಕಲ್ಪಿಸಿಕೊಡಲಿದ್ದಾರೆ.
ಸಾವಿತ್ರಿಬಾಯಿ ಪುಲೆ ಅವರ ಸಾಧನೆ,ಅವರ ಶೈಕ್ಷಣಿಕ ಕಾಳಜಿ,ಮತ್ತು ಅವರ ಬದುಕು ಹೇಗಿತ್ತು ಅನ್ನೋದು ಜಗತ್ತಿಗೆ ಗೊತ್ತಾಗಬೇಕು,ಸಾವಿತ್ರಿಬಾಯಿ ಪುಲೆ ಅವರ ಚರಿತ್ರೆ ಇಂದಿನ ಯುವ ಪೀಳಿಗೆಗೆ ಪ್ರೇರಣೆ ಸ್ಪೂರ್ತಿ ನೀಡಬೇಕು ಎನ್ನುವದು ಸತೀಶ್ ಜಾರಕಿಹೊಳಿ ಅವರ ಸಂಕಲ್ಪವಾಗಿದೆ.
ಈ ಸ್ಪರ್ದೆಯಲ್ಲಿ ಯಾರು ಭಾಗವಹಿಸಬಹುದು,ಎಷ್ಟು ಜನ ಬಹುಮಾನದ ರೂಪದಲ್ಲಿ ಹೆಲಿಕಾಪ್ಟರ್ ವಿಹಾರ ಮಾಡಬಹುದು ಅನ್ನೋದರ ಬಗ್ಗೆ ಮಾನವ ಬಂಧುತ್ವ ವೇದಿಕೆ ಶೀಘ್ರದಲ್ಲೇ ಪ್ರಕಟಣೆ ಹೊರಡಿಸಲಿದೆ…..