ಬೆಳಗಾವಿ- ಬೆಳಗಾವಿಯಲ್ಲಿ ಇಂದು ಮಂಗಳವಾರ ಸುರಿದ ಬಿರುಗಾಳಿ ಮಳೆಗೆ ಮರವೊಂದು ನೆಲಕ್ಕುರುಳಿದ ಪರಿಣಾಮ ಓರ್ವ ಬೈಕ್ ಸವಾರ ಮರದ ಬುಡಕ್ಕೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಬೆಳಗಾವಿಯ ಕಾಳಿ ಅಂಬ್ರಾಯಿ ಪ್ರದೇಶದಲ್ಲಿ ಇಂದು ಸಂಜೆ ಬಿರುಗಾಳಿ ಮಿಶ್ರಿತ ಮಳೆ ಸುರಿಯುತ್ತಿರುವಾಗ ದೊಡ್ಡ ಮರವೊಂದು ಬೈಕ್ ಸವಾರನ ಮೇಲೆ ಬಿದ್ದು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಬೈಕ್ ಚಾಲಕ
ವಿಜಯ ಕೊಲ್ಲಾಪುರಿ
ಮಾತಂಗಿ ಎಂದು ಗುರುತಿಸಲಾಗಿದ್ದು
ಕಾಳಿ ಅಂಬರಾಯಿ ಪ್ರದೇಶದ ನಿವಾಸಿಯಾಗಿದ್ದಾನೆ.
ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೋಂಡಾ ಆಕ್ಟಿವಾ ಮೇಲೆ ಸಂಚರಿಸುತ್ತಿರುವ ಸಮಯದಲ್ಲಿ ಈ ಅವಘಡ ಸಂಬವಿಸಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ

