ಬೆಳಗಾವಿ-
ಬೆಳಗಾವಿಯಲ್ಲಿ ಕಾಂಗ್ರೆಸ್ ಮುಖಂಡರ ಮನೆ ಮೇಲೆ ಐಟಿ ದಾಳಿ ಪ್ರಕರಣ. ಐಟಿ ದಾಳಿ ವಿಚಾರಕ್ಕೆ ರಾಜಕೀಯ ಬಣ್ಣ ಕಟ್ಟಲ್ಲ. ಪಕ್ಷಕ್ಕಿಂತ ಹೆಚ್ಚಾಗಿ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ದಾಳಿ ಮಾಡುತ್ತಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಲು ಕೆಲ ನಾಯಕರು ಐಟಿ ರೇಡ್ ಮಾಡಿಸಿದ್ದಾರೆ ಎಂಬ ಆರೋಪವಿದೆ.
ಈ ರೇಡ್ ಗಳು ಕೇವಲ ಕಾಟಾಚಾರಕ್ಕೆ ಸಿಮೀತವಾಗಬಾರದು.ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾದ್ಯಮಗಳ ಜೊತೆ ಮಾತನಾಡಿ ನೋಟ್ ಬ್ಯಾನ್ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರ ಜತೆ ಚೆಲ್ಲಾಟವಾಡಿದೆ. ನೋಟ ಬ್ಯಾನ್ ನಂತರ ಹೊಸ ನೋಟ್ ಸಂಗ್ರಹ ಮಾಡಿದ್ದಾರೆ. ಅಕ್ರಮ ಸಂಪತ್ತು ಹೊರ ಬರಬೇಕು.ಎಂದು ಕುಮಾರಸ್ವಾಮು ಒತ್ತಾಯಿಸಿದರು
ಸಿಎಂ ಸಿದ್ದರಾಮಯ್ಯ ಹಾಗೂ ಬಿ.ಎಸ್. ಯಡಿಯೂರಪ್ಪ ನಡವಳಿಗೆ ಎಚ್ ಡಿಕೆ ಟೀಕಿಸಿದರು ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಲಘುವಾಗಿ ನಡೆದುಕೊಳ್ಳುತ್ತಿವೆ ಯಡಿಯೂರಪ್ಪ ಸಿಎಂಗೆ ಕಾಮನಸೆನ್ಸ್ ಇಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ
ಸಿಎಂ ಯಡಿಯೂರಪ್ಪಗೆ ಕಾಮನಸೆನ್ಸ್ ಇಲ್ಲ ಎಂದಿದ್ದಾರೆ
ಸಿದ್ದರಾಮಯ್ಯ, ಯಡಿಯೂರಪ್ಪ ಇಬ್ಬರಿಗೆ ಆ ಪದದ ಅರ್ಥ ಗೊತ್ತಿದೆಯೆ ಬೆಳಗಾವಿಯಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ
ರಾಜ್ಯದಲ್ಲಿ ಕುಡಿಯುವ ನೀರು, ಮೇವಿನ ಸಮಸ್ಯೆ ಉದ್ಭವಿಸಿದೆ ಈ ಬಗ್ಗೆ ಯಾರು ಬರ ನಿರ್ವಹಣೆಯ ಕಡೆ ಗಮನ ಹರಿಸಿಲ್ಲ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ