Breaking News
Home / Breaking News / ಬೈಲಹೊಂಗಲದ ಕೃಷಿ ಮೇಳಕ್ಕೆ ಅದ್ಧೂರಿ ಚಾಲನೆ

ಬೈಲಹೊಂಗಲದ ಕೃಷಿ ಮೇಳಕ್ಕೆ ಅದ್ಧೂರಿ ಚಾಲನೆ

ಬೆಳಗಾವಿ/ಬೈಲಹೊಂಗಲ:(ಸಂಗೊಳ್ಳಿ ರಾಯಣ್ಣ ಸಭಾಂಗಣ)
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದೀ ಯೋಜನೆ ವತಿಯಿಂದ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ನಗರದ ವಿದ್ಯಾನಗರದ ಮೂಗಿಯವರ ಹೊಲದಲ್ಲಿ ಆಯೋಜಿಸಿರುವ 37ನೇ ರಾಜ್ಯ ಕೃಷಿ ಮೇಳ ಉದ್ಘಾಟನೆಯಾಯಿತು..
ಕೃಷಿ ವಸ್ತು ಪ್ರದರ್ಶನವನ್ನು ಗಣಿ ಭೂವಿಜ್ಞಾನ ಇಲಾಖೆ ಸಚಿವ ವಿನಯ ಕುಲಕರ್ಣಿ ಉದ್ಘಾಟಿಸಿದರು. ಕೃಷಿ ಯಂತ್ರೋಪಕರಣ ವಿಭಾಗವನ್ನು ರಾಜ್ಯಸಭಾ ಸದಸ್ಯ ಹಾಗೂ ಕೆಎಲ್‍ಇ ಆಡಳಿತ ಮಂಡಳಿ ಚೇರಮನ ಡಾ. ಪ್ರಭಾಕರ ಕೋರೆ, ಕರಕುಶಲ ವಸ್ತುಪ್ರದರ್ಶನವನ್ನು ಬೆಳಗಾವಿ ಸಂಸದ ಸುರೇಶ ಅಂಗಡಿ ಹಾಗೂ ಮೌಲ್ಯವರ್ಧಿತ ಕೃಷಿ ಉತ್ಪನ್ನಗಳ ಮಳಿಗೆಗಳನ್ನು ನಬಾರ್ಡ ಬೆಂಗಳೂರು ಕಚೇರಿ ಮುಖ್ಯ ಮಹಾಪ್ರಭಂಧಕ ಎಂ. ಐ. ಗಣಗಿ ಉದ್ಘಾಟಿಸಿದರು. ಧಾರವಾಡ ಕೃಷಿ ವಿವಿ ಕುಲಪತಿ ಡಾ. ಖ. ಪಿ. ಬಿರಾದರ ದಿಕ್ಸೂಚಿ ಬಾಷಣ ಮಾಡಿದರು. ಕಿತ್ತೂರು ಮತಕ್ಷೇತ್ರದ ಶಾಸಕ ಡಿ. ಬಿ. ಇನಾಮದಾರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ಐಹೊಳೆ, ಮಾಜಿ ವಿದಾನಪರಿಷತ್ ಸದಸ್ಯ ಮಹಾಂತೇಷ ಕೌಜಲಗಿ, ಟ್ರಸ್ಟಿ ಎಸ್. ಖ. ಅಂಪತ್ ಸಾಮ್ರಾಜ್ಯ ಹಾಗೂ ಅಧಿಕಾರಿ, ಜನಪ್ರತಿನಿಧಿಗಳು ಭಾಗವಹಿಸಿದ್ದರು. ಗಣೇಶ ಸ್ತುತಿ, ರೈತ, ನಾಡಗೀತೆಯೊಂದಿಗೆ ಕಾರ್ಯಕ್ರಮ ಚಾಲನೆ ಪಡೆಯಿತು.
ಧರ್ಮಸ್ಥಳ ಧರ್ಮಾಧಿಕಾರಿ ಪೂಜ್ಯ ಡಾ. ವಿರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಿದರು. ಇಂಚಲ ಸಾಧು ಸಂಸ್ಥಾನ ಮಠದ ಶ್ರೀ ಶಿವಾನಂದ ಭಾರತಿ ಸ್ವಾಮೀಜಿ ಹಾಗೂ ಬೈಲಹೊಂಗಲ ರುದ್ರಾಕ್ಷಿಮಠದ ಪೂಜ್ಯ ಡಾ. ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ಕೃಷಿ ಮೇಳ ಉದ್ಘಾಟಿಸಿ ಸಂಸದ ಸುರೇಶ ಅಂಗಡಿ ಮಾತನಾಡಿ ಶ್ರೀ ಮಂಜುನಾಥನ ಸ್ಪರ್ಷದಿಂದ ಬೈಲಹೊಂಗಲ ನಾಡು ಇಂದು ಹಸಿರಾಗುವ ಕಾಲ ಬಂದಾಗಿದೆ. ಬೈಲಹೊಂಗಲ ಸ್ವಾಭಿಮಾನದ ನಾಡು . ರಾಣಿ ಚನ್ನಮ್ಮ ಮತ್ತು ಅವಳ ಬಂಟ ಸಂಗೊಳ್ಳಿ ರಾಯಣ್ಣನ ಸ್ವಾಭೀಮಾನ ಬೆಳೆಸಿದ ವೀರರು. 120 ಕೋಟಿ ಭಾರತದ ಜನಸಂಖ್ಯೆ ಕೃಷಿ ಮೇಲೆ ಅವಲಂಬಿತವಾಗಿದೆ. ಜಗತ್ತಿನ ವಿಸ್ತೀರ್ಣದಲ್ಲಿ 7ನೇ ದೊಡ್ಡ ರಾಷ್ಟ್ರವಾದಭಾರತಕ್ಕೆ ಸಾಕಷ್ಟು ಕೃಷಿ ಬೂಮಿ ಇದೆ. ಯುವಕರು ಮತ್ತು ನಮ್ಮ ಜನತೆ ಕೃಷಿಯತ್ತ ಮುಖ ಮಾಡಬೇಕು ಎಂದರು.

ಹುಸಿನಗೆಗೆ ಕಾರಣವಾದ ‘ಮೇಟಿ ವಿಧ್ಯೆ ಮೇಲು’:
ಕೋಟಿ ವಿಧ್ಯೆಯಲ್ಲಿ ‘ಮೇಟಿ’ ವಿಧ್ಯೆಯೇ ಮೇಲು ಎಂದು ತಮ್ಮ ಉದ್ಘಾಟನಾ ಭಾಷಣದ ಮಧ್ಯೆ ಬೆಳಗಾವಿ ಸುರೇಶ ಅಂಗಡಿ ಸುರೇಶ ಅಂಗಡಿ ನುಡಿಯುತ್ತಿದ್ದಂತೆ ಸಭಾಂಗಣದಲ್ಲಿ ಸೇರಿದ್ದ ಜನತೆ ಮುಸಿಯಾಡಿದರು. ಸಚಿವ ಮೇಟಿ ಲೈಂಗಿಕ ಪ್ರಕರಣದ ನಂತರ ಹುಟ್ಟಿಕೊಂಡ ಜೋಕ್ ಗಳಿಂದ ಪ್ರೇರಿತ ಜನತೆ ಕೋಟಿ ವಿಧ್ಯೆಗಿಂತ ಮೇಟಿ ವಿಧ್ಯೆ ಮೇಲು ಎನ್ನುತ್ತಿದ್ದಂತೆ ಜನತೆ ನಗಾಡಿಕೊಂಡರು.

Check Also

ಲಕ್ಷ್ಮಣ ಸವದಿ ಕ್ಷೇತ್ರದಿಂದಲೇ ಪ್ರಿಯಾಂಕಾ ಪ್ರಚಾರ ಆರಂಭ…

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಕರೆ ಅಥಣಿ: ದೇಶಕ್ಕೆ ಕಾಂಗ್ರೆಸ್ ಪಕ್ಷ ಹಲವು ಕೊಡುಗೆಗಳನ್ನು ನೀಡಿದೆ. …

Leave a Reply

Your email address will not be published. Required fields are marked *