ಬೆಳಗಾವಿ- ಕೊರೋನಾ ವಿಪತ್ತು ನಿರ್ವಹಣೆಗಾಗಿ ಕೆಪಿಸಿಸಿ ಜಿಲ್ಲಾವಾರು ಟಾಸ್ಕಫೋರ್ಸ ಸಮೀತಿಗಳನ್ನು ರಚಿಸಿ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದು ಬೆಳಗಾವಿ ಜಿಲ್ಲಾ ಅದ್ಯಕ್ಷರನ್ನಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ನೇಮಿಸಿದೆ.
ಜಿಲ್ಲಾ ಕಾಂಗ್ರೆಸ್ ಸಮೀತಿಯ ಜಿಲ್ಲಾದ್ಯಕ್ಷರ ಸಹಕಾರದೊಂದಿಗೆ ಈ ಟಾಸ್ಕಫೋರ್ಸ ಕಾರ್ಯ ನಿರ್ವಹಿಸಲಿದೆ.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಟಾಸ್ಕಪೋರ್ಸ ಅದ್ಯಕ್ಷರನ್ನು ನೇಮಿಸಿ ಡಿಕೆ ಶಿವಕುಮಾರ್ ಆದೇಶ ಹೊರಡಿಸಿ ಅದ್ಯಕ್ಷರ ಪಟ್ಟಿಯನ್ನು ಮಾದ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ನೇತ್ರತ್ವದಲ್ಲಿ ಕಾರ್ಯ ನಿರ್ವಹಿಸುವ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಟಾಸ್ಕ ಪೋರ್ಸ್ ಕೊರೋನಾ ಲಾಕ್ ಡೌನ್ ಸಂಧರ್ಭದಲ್ಲಿ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಸ್ಪಂದಿಸಲಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ