ಬೆಳಗಾವಿ- ರಾಜಕೀಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸದ್ದಿಲ್ಲದೇಸಿನಿಮಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ.ಎನ್ನುವ ಸುದ್ದಿ ಈಗ ವೈರಲ್ ಆಗಿದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್,ರಾಜಕಾರಣ ಜೊತೆಗೆ ಸಿನಿಮಾ ಕ್ಷೇತ್ರದಲ್ಲೂ ಛಾಪು ಮೂಡಿಸಲು ಪ್ಲ್ಯಾನ್ ಮಾಡಿದ್ದಾರೆ.
ಮೊಮ್ಮಗಳ ಹೆಸರಲ್ಲಿ ಪ್ರೊಡಕ್ಷನ್ ಹೌಸ್ ತೆರೆದಿದ್ದಾರೆ.ಐರಾ ಪ್ರೊಡಕ್ಷನ್ ಹೌಸ್‌ನಿಂದಲೇ
ಈಗಾಗಲೇ ಎರಡು ಕನ್ನಡ ಚಿತ್ರಗಳ ನಿರ್ಮಾಣ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.ಐರಾ ಪ್ರೊಡಕ್ಷನ್‌ಹೌಸ್‌ನಿಂದ ನಿರ್ಮಾಣ ಹಂತದಲ್ಲಿರುವ ಎರಡೂ ಕನ್ನಡದ ಸಿನಿಮಾಗಳಲ್ಲಿ
ಚಂದನವನದ ಖ್ಯಾತನಾಮ ನಟರಾದ ರಮೇಶ್ ಅರವಿಂದ, ಗೋಲ್ಡನ್ ಸ್ಟಾರ್ ಗಣೇಶ.
ಡಾಲಿ ದನಂಜಯ್ ಚಿತ್ರಗಳಲ್ಲಿ ಅಭಿನಯ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಐರಾ ಪ್ರೊಡಕ್ಷನ್ ಹೌಸ್ ತೆರೆದ ಬಗ್ಗೆ ಈವರೆಗೆ ಎಲ್ಲೂ ಮಾಹಿತಿ ಹಂಚಿಕೊಳ್ಳದ ಸಚಿವೆ ಹೆಬ್ಬಾಳ್ಕರ್.
ಆದರೆ ಪ್ರೊಡಕ್ಷನ್ ಹೌಸ್ ತೆರೆದ ಬಗ್ಗೆ ಸಚಿವೆ ಲಕ್ಷ್ಮಿಹೆಬ್ಬಾಳ್ಕರ್ ಆಪ್ತಮೂಲಗಳಿಂದ ಅಧಿಕೃತ ಮಾಹಿತಿ ಲಭ್ಯವಾಗಿದೆ.