Breaking News

ಕಿರುಕಳ ಕೊಟ್ಟಿದ್ದು ಅವರಲ್ಲ,ಆ ಬಿಜೆಪಿ ಮುಖಂಡ ಮತ್ತು ಅವನ ಮಗ…..!!!

ಬೆಳಗಾವಿ- ಇತ್ತೀಚಿಗೆ ನವವಿವಾಹಿತೆ ಯೊಬ್ಬಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ನನ್ನ ಗಂಡ ಮತ್ತು ಮಾವ ವರದಕ್ಷಿಣೆ ಕಿರುಕಳ ಕೊಡುತ್ತಿದ್ದಾರೆ, ಗಂಡನ ಮಾವ ಲೈಂಗಿಕ ಕಿರುಕಳ ಕೊಟ್ಟಿದ್ದಾನೆ ಎಂದು ಆರೋಪಸಿದ್ದ ಆ ಮಹಿಳೆ ನಿನ್ನೆ ತಡರಾತ್ರಿ ಬೆಳಗಾವಿ ಪೋಲೀಸ್ ಕಮಿಷ್ನರ್ ಕಚೇರಿಗೆ ಬಂದು ಅದೆಲ್ಲಾ ಮಾಡಿದ್ದು ಗಂಡ ಮತ್ತು ಮಾವ ಅಲ್ಲ, ಆ ಬಿಜೆಪಿ ಮುಖಂಡ ಮತ್ತು ಅವನ ಮಗ ಎಂದು ಆ ಮಹಿಳೆ ಈಗ ಗಂಭೀರ ಆರೋಪ ಮಾಡಿದ್ದಾಳೆ.

ಈ ಮಹಿಳೆ ಕೊಟ್ಟ ದೂರಿನ ಮೇರೆಗೆ ಆ ಬಿಜೆಪಿ ಮುಖಂಡ ಮತ್ತು ಅವನ ಮಗ ಹಾಗು ಅವರ ಇಬ್ಬರು ಸಹಚರರ ಮೇಲೆ ಬೆಳಗಾವಿಯ ಖಡೇ ಬಝಾರ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಆ ಬಿಜೆಪಿ ಮುಖಂಡ ಮತ್ತು ಅವನ ಮಗ ನನಗೆ ಲೈಂಗಿಕ ಕಿರುಕಳ ಕೊಟ್ಟಿದ್ದಾರೆ.ಒತ್ತಾಯಪೂರ್ವಕವಾಗಿ ನನಗೆ ಮದುವೆ ಮಾಡಿಸಿದವನೇ ಆ ಬಿಜೆಪಿ ಮುಖಂಡ, ನಮ್ಮ ಸಂಸಾರ ಚನ್ನಾಗಿಯೇ ನಡೆದಿತ್ತು ನಮ್ಮ ಸಂಸಾರದಲ್ಲಿ ನಂತರ ಹುಳಿ ಹಿಂಡಿದ್ದು ಆ ಬಿಜೆಪಿ ಮುಖಂಡ, ನನಗೆ ಹೆದರಿಸಿ ಬೆದರಿಸಿ ನನಗೆ ವಿಷ ಕುಡಿಸಿ ನನ್ನ ಗಂಡ ಮತ್ತು ಅವನ ಮಾವನ ಮೇಲೆ ವರದಕ್ಷಿಣೆ ಮತ್ತು ಲೈಂಗಿಕ ಕಿರುಕಳದ ಆರೋಪ ಮಾಡುವಂತೆ ಹೆದರಿಸಿದ್ದ ಆ ಬಿಜೆಪಿ ಮುಖಂಡ ನನಗೆ ಟ್ರ್ಯಾಪ್ ಮಾಡಿದ್ದ, ನನ್ನ ಗಂಡ ಮತ್ತು ಮಾವನ ಮೇಲೆ ನಾನು ದೂರು ಕೊಟ್ಟಿದ್ದು ಫಾಲ್ಸ್ ಕೇಸ್ ಎಂದು ಆ ಮಹಿಳೆ ಪೋಲೀಸರ ಎದುರು ಸತ್ಯವನ್ನು ಬಯಲು ಮಾಡಿದ್ದಾಳೆ.

ಇಷ್ಟೆಲ್ಲಾ ಆದ ಮೇಲೂ ಆ ಬಿಜೆಪಿ ಮುಖಂಡ ನನಗೆ ಬಿಡಲಿಲ್ಲ ರಕ್ಷಾ ಬಂಧನದ ದಿನ ನನ್ನಿಂದ ರಾಖಿ ಕಟ್ಟಿಸಿಕೊಂಡು ವಿಡಿಯೋ ಮಾಡಿಕೊಂಡಿದ್ದಾನೆ. ಎಂದು ಆರೋಪಿಸಿರುವ ಮಹಿಳೆ ಆ ಬಿಜೆಪಿ ಮುಖಂಡ ಮತ್ತು ಅವನ ಮಗ ಯಾವ ರೀತಿಯಲ್ಲಿ ಯಾವಾಗ, ಹೇಗೆ ಕಿರುಕಳ ಕೊಟ್ಟಿದ್ದಾರೆ ಎಂದು ಖಡೇ ಬಝಾರ ಪೋಲೀಸ್ ಠಾಣೆಯಲ್ಲಿ ಕೊಟ್ಟ ದೂರಿನಲ್ಲಿ ವಿವರವಾಗಿ ಹೇಳಿಕೊಂಡಿದ್ದಾಳೆ.

Check Also

ನಾಳೆ ಬೆಳಗಾವಿಯಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮಕ್ಕೆ ಗಣ್ಯರ ದಂಡು

ಪತ್ರಿಕಾ ದಿನಾಚರಣೆ ನಾಳೆ; ಹಿರಿಯ ಪತ್ರಕರ್ತರಿಗೆ ಗೌರವ ಸನ್ಮಾನ ಬೆಳಗಾವಿ: ಬೆಳಗಾವಿ ಇಲೆಕ್ಟ್ರಾನಿಕ್ ಮೀಡಿಯಾ ಜರ್ನಾಲಿಸ್ಟ್ ಅಸೋಸಿಯೇಷನ್ ವತಿಯಿಂದ ಪತ್ರಿಕಾ …

Leave a Reply

Your email address will not be published. Required fields are marked *