51 ಟಿಎಂಸಿ ಸಾಮರ್ಥ್ಯದ ಹಿಡಕಲ್ ಜಲಾಶಯದಲ್ಲಿ ಕೇವಲ 2 ಟಿಎಂಸಿ ನೀರು…!!

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಮುಂಗಾರು ಕೈ ಕೊಟ್ಟ ಹಿನ್ನೆಲೆಯಲ್ಲಿ ಹುಕ್ಕೇರಿ ತಾಲೂಕಿನ ಹಿಡಕಲ್ ಜಲಾಶಯ ಸಂಪೂರ್ಣವಾಗಿ ಬರಿದಾಗಿದೆ.51ಟಿಎಂಸಿ ಸಾಮರ್ಥ್ಯ ದ ಜಲಾಶಯದಲ್ಲಿ ಕೇವಲ 2ಟಿಎಂಸಿ ನೀರು ಬಾಕಿ ಉಳಿದಿರುವುದು ಕಳವಳಕಾರಿ ಸಂಗತಿಯಾಗಿದೆ.

10ವರ್ಷಗಳ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ ಜಲಾಶಯ ಖಾಕಿಯಾಗಿದೆ.ಉಳಿದಿರುವ 2ಟಿಎಂಸಿ ನೀರು ಬೆಳಗಾವಿ ನಗರ, ಹುಕ್ಕೇರಿ, ಸಂಕೇಶ್ವರ ಪಟ್ಟಣ ಸೇರಿ ಕುಡಿಯಲು ಬಳಕೆ ಮಾಡಲು ನಿರ್ಧಾರ ಮಾಡಲಾಗಿದೆ.ಕೃಷಿ ಚಟುವಟಿಕೆಗೆ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ.

ಇನ್ನೊಂದು ತಿಂಗಳೊಳಗೆ ಮಳೆ ಬಾರದಿದ್ದರೆ ಬೆಳಗಾವಿ ನಗರ ಸೇರಿ ಹಲವು ಪಟ್ಟಣಗಳಿಗೆ ನೀರು ಪೂರೈಕೆ ಸ್ಥಗಿತವಾಗಲಿದೆ.ಹಿಡಕಲ್ ಜಲಾಶಯ ಖಾಲಿಯಾಗಿ ಆಟದ ಮೈದಾನದಂತೆ ಗೋಚರಿಸುತ್ತಿದೆ.

ಇಲೆಕ್ಷನ್ ಸಮಯದಲ್ಲಿ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಬೇಕಾಬಿಟ್ಟಿಯಾಗಿ ನೀರು ಬಿಟ್ಟ ಕಾರಣ ಇವತ್ತು ಜಲಾಶಯ ಖಾಲಿಯಾಗಿದೆ.ಬೆಳಗಾವಿ ನಗರಕ್ಕೆ ನೀರು ಪೂರೈಸುವ ರಾಕಸಕೊಪ್ಪ ಜಲಾಶಯ ಈಗಾಗಲೇ ಡೆಡ್ ಸ್ಟೋರೇಜ್ ಹಂತ ತಲುಪಿದೆ. ಹಿಡಕಲ್ ಜಲಾಶಯದಿಂದ ನಿಯಮಿತವಾಗಿ ಬೆಳಗಾವಿ ನಗರಕ್ಕೆ ನೀರು ಪೂರೈಕೆಯಾಗುತ್ತಿದೆ.ಇನ್ನೆರಡು ವಾರ ಮಳೆ ಬಾರದಿದ್ದರೆ ಬೆಳಗಾವಿ ನಗರದಲ್ಲಿ ನೀರಿಗಾಗಿ ಪರದಾಡುವ ಆತಂಕ ಎದುರಾಗಿದೆ. ಈಗ ಸದ್ಯಕ್ಕೆ ಮಳೆಯ ತುಂತುರ ಹನಿಗಳು ಆಗಾಗ ತಂಪೆರೆಯುತ್ತಿವೆ.

ವಿಠ್ಠಲ ಮಂದಿರದ ಉದ್ಭವ…

ಹಿಡಕಲ್ ಜಲಾಶಯದ ನಿರ್ಮಾಣದ ಸಮಯದಲ್ಲಿ ಸಂಪೂರ್ಣವಾಗಿ ಮುಳುಗಡೆಯಾಗಿದ್ದ ವಿಠ್ಠಲ ದೇವರ ಮಂದಿರ ನಲವತ್ತು ವರ್ಷಗಳ ನಂತರ ಈಗ ಕಾಣಿಸುತ್ತಿದೆ.ಜಲಾಶಯ ಸಂಪೂರ್ಣವಾಗಿ ಖಾಲಿಯಾಗಿರುವ ಕಾರಣ ನಲವತ್ತು ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ವಿಠ್ಠಲ ದೇವಸ್ಥಾನ ಏಕಾದಶಿಯ ಸಂಧರ್ಭದಲ್ಲಿ ಭಕ್ತರ ದರ್ಶನಕ್ಕೆ ಲಭ್ಯವಾಗಿರುವದು ಪವಾಡ.ವಿಠ್ಠಲನ ದರ್ಶನಕ್ಕೆ ಸುತ್ತಮುತ್ತಲಿನ ಹಳ್ಳಿಯ ಭಕ್ತರು ತಂಡೋಪ ತಂಡವಾಗಿ ಬರುತ್ತಿರುವುದು ವಿಶೇಷವಾಗಿದ್ದು,ಈ ಮಂದಿರದಿಂದಾಗಿ ಹಿಡಕಲ್ ಜಲಾಶಯದ ಅಂಗಳ ಭಕ್ತಿಯ ಭಂಡಾರದಿಂದ ಮುಳುಗಿದೆ.

Check Also

ನಿಶ್ಚಿತವಾಗಿದ್ದ ಮದುವೆ ರದ್ದು ಯುವಕನ ಆತ್ಮಹತ್ಯೆ

ಬೆಳಗಾವಿ-ನಿಶ್ಚಿತಯಗೊಂಡ ಮದುವೆ ರದ್ದಾಗಿ, ಸಂಬಂಧಗಳೆಲ್ಲವೂ ಮುರಿದು ಹೋದಕಾರಣ ಯುವಕ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಕೆಕೆಕೊಪ್ಪ ಗ್ರಾಮದಲ್ಲಿ ನಡೆದಿದೆ. …

Leave a Reply

Your email address will not be published. Required fields are marked *