ಬೆಳಗಾವಿ – ಪ್ರಸಿದ್ದ ಹಿಂಡಲಗಾ ಜೈಲಿನಲ್ಲಿ ಪದೇ ಪದೇ ಕೈದಿಗಳು ಹೊಡೆದಾಟ ನಡೆಸಿದ ಪ್ರಕರಣಗಳು ನಡೆಯುತ್ತಲೇ ಇವೆ.ಇಂದು ಮತ್ತೆ ಕೈದಿಗಳ ನಡುವೆ ಮಾರಾಮಾರಿ ನಡೆದಿದ್ದು ನ್ಯಾಯಾಧೀಶರು ಧಿಡೀರ್ ಭೇಟಿ ನೀಡಿ ಜೈಲಿನ ಸಿಬ್ಬಂದಿಗಳಿಗೆ ವಾರ್ನ್ ಮಾಡಿದ್ದಾರೆ.
ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಖೈದಿಗಳ ಮಾರಾಮಾರಿ ವಿಚಾರವಾಗಿ,ಹಿಂಡಲಗಾ ಜೈಲಿಗೆ ಬೆಳಗಾವಿಯ ೧ ನೇ ಜೆಎಂಎಫ್ಸಿ ನ್ಯಾಯಾಧೀಶ ಮಹದೇವ ಕೂಡವಕ್ಕಲಿಗೇರ ಭೇಟಿ ನೀಡಿ ಪರಶೀಲನೆ ಮಾಡಿದ್ದಾರೆ.ಜೈಲಿನ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದ ಅವರು ಮಾದ್ಯಮಗಳ ಜೊತೆ ಮಾತನಾಡಿ, ನ್ಯಾಯಾಧೀಶ ಮಹಾದೇವ ಕೂಡವಕ್ಕಲಿಗೇರ,ಜೈಲಿನಲ್ಲಿ ಹೊಡೆದಾಟ ಆಗಿದೆ ಎನ್ನುವ ಮಾಹಿತಿ ಬಂತು,ಅದಕ್ಕಾಗಿ ನಾನು ಸರ್ಪೈಸ್ ವಿಸಿಟ್ ಮಾಡಿದ್ದೆನೆ,ನಾನು ಇಲ್ಲಿಗೆ ಬಂದ ವಿಚಾರ ನಮ್ಮ ಗನ್ ಮ್ಯಾನ್ ಗೂ ಸಹ ಗೊತ್ತಿಲ್ಲ,ಮೊಬೈಲ್ ಒಳಗೆ ಬಂದ ವಿಚಾರಕ್ಕೆ ಗಲಾಟೆ ಆಗಿದೆ,
ಎರಡು ಪ್ರಕಾರದ ಮಾಹಿತಿ ಸಿಕ್ಕಿದೆ,ಒಂದು ಮಾಹಿತಿ ಪ್ರಕಾರ,ಹೊಡೆಸಿಕೊಂಡ ಖೈದಿ ಮೊಬೈಲ್ ನಲ್ಲಿ ಮಾತನಾಡಿದ್ದಾನೆ,ಆತ ಟಾಯ್ಲೆಟ್ ಒಳಗೆ ಹೋಗಿ ಮಾತಾಡಿ ಬರ್ತಿದ್ದ ಎಂದು ಹೇಳಲಾಗಿದೆ.ಇನ್ನೊಂದು ಮಾಹಿತಿ ಪ್ರಕಾರ ಪಕ್ಕದ ಖೈದಿ ಮಾತನಾಡಿದ್ದ,ಅದನ್ನು ಹೊಡೆಸಿಕೊಂಡ ಖೈದಿ ಹೇಳಿಬಿಡ್ತಾನೋ ಎನ್ನುವ ಗಾಬರಿಯಿಂದ ನನಗೆ ಹೊಡೆದರು ಎಂದು ಹೇಳಿಕೆ ನೀಡಿದ್ದಾನೆ,
ಔಟ್ ಸೋರ್ಸ್ ಸಿಬ್ಬಂಧಿಗಳ ಮೂಲಕ ಹೊರಗಿನ ವಸ್ತುಗಳು ಒಳಗೆ ಬರುವ ಚಾನ್ಸ್ ಬಹಳ ಇರುತ್ತೆ,ಹೊರಗೂ ಒಳಗೂ ಅವರಿಗೆ ಟಚ್ ಇರುತ್ತೆ,ಅದನ್ನು ಇಲ್ಲಿನ ಸಿಬ್ಬಂದಿಗೆ ವಾರ್ನ್ ಮಾಡಿದ್ದೆನೆ,ಔಟ್ ಸೋರ್ಸ್ ಸಿಬ್ಬಂದಿಗಳ ಜತೆಗೆ ಒಬ್ಬ ಸಿಬ್ಬಂಧಿಯನ್ನು ಕಳಿಸಲು ಸೂಚನೆ ನೀಡಿದ್ದೆನೆ,ಖೈದಿಯು ಬೆಳಗಿನಿಂದ ಊಟ ಮಾಡಿಲ್ಲ, ಹೀಗಾಗಿ ಮತ್ತಷ್ಟು ಆರೋಗ್ಯದಲ್ಲಿ ವ್ಯಥ್ಯಯ ಆಗಿದೆ,ಪದೇ ಪದೇ ಘಟನೆಗಳು ಮರುಕಳಿಸದಂತೆ ವಾರ್ನ್ ಮಾಡಿದ್ದೆನೆ,ಒಂದು ಫ್ಯಾಮಿಲಿ ಮೆಂಟೇನ್ ಮಾಡೋದೆ ಕಷ್ಟ ಇನ್ನು ಸಾವಿರ ಜನ ಇದ್ದಾರೆ ಇಲ್ಲಿ ಸ್ವಲ್ಪ ಕಷ್ಟದ ಕೆಲಸವೇ,ಒಳಗಿದ್ದೋರು ೯೮ ರಷ್ಟು ಎಲ್ಲರೂ ಕ್ರಿಮಿನಲ್ ಆಗಿರುತ್ತಾರೆ,ಒಳ್ಳೆಯ ಜನರ ಮೇಲೂ ಸಹ ಕೇಸ್ ಹಾಕಿರುತ್ತಾರೆ,ಇಂತಹ ಘಟನೆಗಳು ದಿನ ನಡೆಯುತ್ತವೆ ಪದೇ ಪದೇ ಕೇಸ್ ಹಾಕಲು ಆಗಲ್ಲ,ಹಾಗೆ ಹಾಕ್ತಾ ಹೋದರೆ ಅವರು ಹೊರ ಬರೋವಷ್ಟರಲ್ಲಿ ೫೦ ಕೇಸ್ ಆಗಿರ್ತವೆ,ಹೊರಗೆ ಬಂದ ಮೇಲೆ ಅವರು ನಮ್ಮ ಜತೆಗೆ ಬದುಕಬೇಕು,ಎಂದರು.
ಹೊರಗಿನಿಂದ ಬರುವ ವಸ್ತುಗಳನ್ನು ಸ್ಟಾಪ್ ಮಾಡಿ ಎಂದು ಸಿಬ್ಬಂದಿಗಳಿಗೆ ಸೂಚನೆ ನೀಡಿದ್ದೆನೆ,ಇವತ್ತು ನನಗೆ ಯಾವುದೇ ವಸ್ತುಗಳು ಸಿಕ್ಕಿಲ್ಲ,ಮೊಬೈಲ್ ಹೇಗೆ ಒಳಗೆ ಬರ್ತವೆ ಎನ್ನುವುದನ್ನು ಫೋಟೊ ಸಮೇತ ನಮಗೆ ತೋರಿಸಿದರು.ಮತ್ತೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಿ ಎಂದು ಸಿಬ್ಬಂಧಿಗಳಿಗೆ ಸೂಚನೆ ನೀಡಿದ್ದೆನೆ,ಎಂದು ನ್ಯಾಯಾದೀಶರು ಹೇಳಿದ್ರು.